Advertisement

ಬಹಿರಂಗ ‌ಪ್ರಚಾರಕ್ಕೆ ತೆರೆ: ಇಂದು ಬೆಳಗ್ಗೆಯಿಂದಲೇ ಮನೆ ಮನೆ ಪ್ರಚಾರ

06:00 AM Aug 29, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಪಾಲಿನ “ಲೋಕಲ್‌ ಟೆಸ್ಟ್‌’ ಆಗಿರುವ ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಬುಧವಾರ ಬೆಳಗ್ಗೆ 7 ಗಂಟೆಗೆ ತೆರೆ ಬೀಳಲಿದೆ. ಮುಂದಿನ 48 ಗಂಟೆಗಳಲ್ಲಿ ಮನೆ-ಮನೆ ಪ್ರಚಾರಕ್ಕಷ್ಟೇ ಅವಕಾಶ. ರಾಜ್ಯ ಮಟ್ಟದಲ್ಲಿ ದೋಸ್ತಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಸ್ಥಳೀಯ ಮಟ್ಟದಲ್ಲಿ ಕುಸ್ತಿಗೆ ಇಳಿದಿವೆ. ಎರಡೂ ಪಕ್ಷಗಳು ಪ್ರತಿಷ್ಠೆ ಪಣಕ್ಕಿಟ್ಟು ಪರಸ್ಪರ ಪೈಪೋಟಿಗೆ ಬಿದ್ದಿವೆ. ಆಡಳಿತಾರೂಢ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳನ್ನು ಸ್ಥಳೀಯ ಮಟ್ಟದಲ್ಲಿ ಮಣಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. 

Advertisement

ನಿಯಮದಂತೆ ಮತದಾನ ಆರಂಭ ವಾಗುವ 48 ಗಂಟೆ ಮುಂಚಿತವಾಗಿ ಬಹಿರಂಗ ಪ್ರಚಾರ ಕೊನೆಗೊಳ್ಳಬೇಕು. ಹೀಗಾಗಿ, ಆ.31ರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಅದಕ್ಕಿಂತ ಮುಂಚೆ, ಅಂದರೆ, ಬುಧವಾರ (ಆ.29) ಬೆಳಿಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ
ಬೀಳಲಿದೆ.  ಮೈಸೂರು, ತುಮಕೂರು, ಶಿವಮೊಗ್ಗ ಈ ಮೂರು ಮಹಾನಗರ ಪಾಲಿಕೆಗಳು ಮತ್ತು ರಾಜ್ಯದ 21 ಜಿಲ್ಲೆಗಳ 81 ತಾಲೂಕುಗಳಲ್ಲಿ 29 ನಗರಸಭೆಗಳು, 53 ಪುರಸಭೆಗಳು, 20 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು ಮತದಾನ ನಡೆಯಲಿದೆ.

9 ಸಾವಿರ ಅಭ್ಯರ್ಥಿಗಳು: ಮೂರು ಮಹಾನಗರ ಪಾಲಿಕೆಗಳ 135 ವಾರ್ಡ್‌ ಗಳಲ್ಲಿ 814 ಮತ್ತು 102 ನಗರ ಸ್ಥಳೀಯ ಸಂಸ್ಥೆಗಳ 2,500 ವಾರ್ಡ್‌ ಗಳಲ್ಲಿ 8,344 ಸೇರಿ ಒಟ್ಟು 2,535 ವಾರ್ಡ್‌ಗಳಲ್ಲಿ 9 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು  ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next