Advertisement

ನಗರಸಭೆ ಶೇ. 15ರಷ್ಟು ತೆರಿಗೆ ಹೆಚ್ಚಳ

09:49 PM Apr 18, 2020 | Sriram |

ಉಡುಪಿ: ಉಡುಪಿ ನಗರಸಭೆ 2020-21ನೇ ಸಾಲಿನ ತೆರಿಗೆ ಪರಿಷ್ಕೃತಗೊಳಿಸಿದ್ದು, ಶೇ. 15ರಷ್ಟು ತೆರಿಗೆ ಏರಿಕೆ ಮಾಡಿದೆ. ಸಾರ್ವಜನಿಕರಿಗೆ ಆನ್‌ಲೈನ್‌ ತೆರಿಗೆ ಪಾವತಿಗೆ ಅವಕಾಶ ನೀಡಲಾಗಿದೆ.

Advertisement

3 ವರ್ಷಕ್ಕೊಮ್ಮೆ ಪರಿಷ್ಕರಣೆ‌
ಮೂರು ವರ್ಷಕ್ಕೊಮ್ಮೆ ನಗರಸಭೆ ತೆರಿಗೆಯನ್ನು ಪರಿಷ್ಕೃತಗೊಳಿಸುತ್ತದೆ. ಅದರ ಅನ್ವಯ ಕನಿಷ್ಠ ಶೇ.15ರಷ್ಟು ತೆರಿಗೆ ಹೆಚ್ಚಳ ಮಾಡಬಹುದಾಗಿದೆ. ನಗರಸಭೆ 2008-09, 2011-12, 2014-15, 2017-18ರಲ್ಲಿ ತೆರಿಗೆಯನ್ನು ಪರಿಷ್ಕೃತಗೊಳಿಸಿತ್ತು. ಇದೀಗ ನಗರಸಭೆ ತೆರಿಗೆ ಪರಿಷ್ಕೃತಗೊಳಿಸಲಾಗಿದ್ದು, ಅದರ ಅನ್ವಯ ನಗರಸಭೆ 2020-21ನೇ ಸಾಲಿನಲ್ಲಿ ತೆರಿಗೆಯನ್ನು ಏರಿಕೆ ಮಾಡಲಾಗಿದೆ. ತೆರಿಗೆ ಪಾವತಿದಾರರು ಪ್ರಸಕ್ತ ಸಾಲಿನ ಶೇ.15ರಷ್ಟು ಹೆಚ್ಚಳ ದೊಂದಿಗೆ ತೆರಿಗೆ ಪಾವತಿ ಮಾಡಬೇಕಾಗಿದೆ.

ಆನ್‌ಲೈನ್‌ ತೆರಿಗೆ ಪಾವತಿಗೆ ಹೇಗೆ?
ಕೋವಿಡ್‌-19 ಭೀತಿಯಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರದ್ದುಗೊಳಿಸಲಾಗಿದ್ದು, ಉಡುಪಿ ನಗರಸಭೆ ವ್ಯಾಪ್ತಿಯ ಜನರು ಮನೆಯಲ್ಲಿ ಕುಳಿತುಕೊಂಡು ತೆರಿಗೆಯನ್ನು ಪಾವತಿ ಮಾಡ ಬಹುದಾಗಿದೆ. ನಗರಸಭೆಯ ವೈಬ್‌ ಸೆೈಟ್‌ //www.udupicity.mrc.gov.in/ನಲ್ಲಿ ಆಸ್ತಿ ತೆರಿಗೆ ಗಣಕ ತಂತ್ರಾಂಶವನ್ನು ಆಯ್ಕೆ ಮಾಡಬೇಕು. ಆಸ್ತಿ ವಿವರವನ್ನು ಭರ್ತಿ ಮಾಡಿದ ಬಳಿಕ ತೆರಿಗೆ ಲೆಕ್ಕ ಹಾಕುವ ಆಯ್ಕೆಯನ್ನು ಒತ್ತಬೇಕು. ಅನಂತರ ಸಾರ್ವಜನಿಕರಿಗೆ ಆಫ್‌ಲೈನ್‌ ಹಾಗೂ ಆನ್‌ಲೈನ್‌ ಪಾವತಿಗೆ ಅವಕಾಶ ನೀಡಲಾಗಿರುತ್ತದೆ. ಆಫ್‌ಲೈನ್‌ ಪಾವತಿದಾರರು ಚಲನ್‌ ಡೌನ್‌ಲೋಡ್‌ ಮಾಡಿ ನಿಗದಿತ ಬ್ಯಾಂಕ್‌ಗೆ ಹೋಗಿ ಹಣ ಪಾವತಿ ಮಾಡಬೇಕಾಗುತ್ತದೆ. ಆನ್‌ಲೈನ್‌ ಪಾವತಿದಾರರು ಬ್ಯಾಂಕ್‌ ಖಾತೆಯ ಮೂಲಕ ನೇರವಾಗಿ ಹಣವನ್ನು ಕಡಿತಮಾಡಲಾಗುತ್ತದೆ.

ಗುರಿ ಸಂಗ್ರಹದಲ್ಲಿ ಸಾಧನೆ!
ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ನಗರಸಭೆ 2020-21ನೇ ಸಾಲಿನ ಆಸ್ತಿ ತೆರಿಗೆ ರಿಯಾಯಿತಿ ಅವಧಿಯನ್ನು ಮೇ 31ರ ವರೆಗೆ ವಿಸ್ತರಣೆಯಾಗಿದೆ. 2019-20ನೇ ಸಾಲಿನಲ್ಲಿ 12.28 ಕೋ.ರೂ. ಗುರಿ ನೀಡಿದ್ದು, ನಗರಸಭೆ 11.97 ಕೋ.ರೂ. ಸಂಗ್ರಹಿಸಿದೆ. 2018-19ನೇ ಸಾಲಿನಲ್ಲಿ 12.09 ಕೋ.ರೂ. ಗುರಿನೀಡಿದ್ದು 11.45 ಕೋ.ರೂ. ಸಂಗ್ರಹಿಸಿದೆ. 2017-18ನೇ ಸಾಲಿನಲ್ಲಿ 11.77 ಕೋ.ರೂ. ಗುರಿ ನೀಡಿದ್ದು 10.73 ಕೋ.ರೂ. ಸಂಗ್ರಹಿಸಿದ್ದು, 2016-17 ಸಾಲಿನಲ್ಲಿ 9.50 ಕೋ.ರೂ. ಗುರಿ ನೀಡಿದ್ದು, 9.08 ಕೋ.ರೂ. ಸಂಗ್ರಹಿಸಲಾಗಿದೆ.

ರಿಯಾಯಿತಿ ಅವಧಿಯನ್ನು ಮೇ 31ರ ವರೆಗೆ ವಿಸ್ತರಣೆ
ಜನರು ಮನೆಯಲ್ಲಿ ಕೊಳಿತುಕೊಂಡು ಆನ್‌ಲೈನ್‌ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ. ಸ್ವಯಂ ಆಸ್ತಿ ತೆರಿಗೆ ಶೇ. 5 ರಿಯಾಯಿತಿ ಅವಧಿಯನ್ನು ಮೇ 31ರ ವರೆಗೆ ವಿಸ್ತರಣೆಯಾಗಿದೆ.
-ಧನಂಜಯ ಡಿ.ಬಿ.,ಕಂದಾಯ ಅಧಿಕಾರಿ, ಉಡುಪಿ ನಗರಸಭೆ

Advertisement

ತೆರಿಗೆ ಸಂಗ್ರಹಕ್ಕೆ ಹಿನ್ನಡೆ
ನಗರಸಭೆ ವ್ಯಾಪ್ತಿಯಲ್ಲಿ ಎಪ್ರಿಲ್‌ ತಿಂಗಳಲ್ಲಿ ವಾರ್ಷಿಕ ಶೇ.40ರಿಂದ ಶೇ.60 ತೆರಿಗೆ ಸಂಗ್ರಹ ವಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್‌-19 ಭೀತಿಯಿಂದ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಕುಸಿತಗೊಂಡಿದ್ದು, ಆನ್‌ಲೈನ್‌ನಲ್ಲಿ ಪಾವತಿ ಅವಕಾಶವಿದ್ದರೂ ಪಾವತಿ ಮಾಡಿದವರು ಶೇಕಡಾವಾರು ಒಂದಂಕಿ ದಾಟಿಲ್ಲ. ಹಿಂದೆ ಎಪ್ರಿಲ್‌ ಅಂತ್ಯದೊಳಗೆ ಪಾವತಿಸುವವರಿಗೆ ಮಾತ್ರ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಈಗಲೂ ಈ ಸೌಲಭ್ಯ ಮುಂದುವರಿದಿದೆ. ಈ ಬಾರಿ ಕೋವಿಡ್‌-19 ಭೀತಿಯಿಂದ ಮೇ ಅಂತ್ಯಕ್ಕೆ ವಿಸ್ತರಿಸುವ ಮೂಲಕ ಕೋವಿಡ್‌-19 ಭೀತಿಯಿಂದ ಮನೆಯೊಳಗೆ ಬಂಧಿ ಯಾಗಿರುವ ಜನರಲ್ಲಿ ನಿರಾಳತೆ ಮಾಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next