Advertisement

ನಗರಸಭೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ ಮೊರೆ

03:54 PM Oct 10, 2020 | Suhan S |

ಹಾಸನ: ಅರಸೀಕೆರೆ ಮತ್ತು ಹಾಸನ ನಗರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲು ನಿಗದಿಪಡಿಸಿ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಜೆಡಿಎಸ್‌ ಮುಖಂಡರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಹಾಸನ, ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್‌ ಬಹುಮತ ಹೊಂದಿದೆ. ಆದರೆ ಆ ಎರಡೂ ನಗರಸಭೆಗಳ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ ಜೆಡಿಎಸ್‌ ಸದಸ್ಯರು ಗೆದ್ದಿಲ್ಲ. ಎರಡೂ ನಗರಸಭೆಗಳಲ್ಲಿ ಬಿಜೆಪಿಯ ಒಬ್ಬೊಬ್ಬ ಪರಿಶಿಷ್ಟ ಪಂಗಡದ ಸದಸ್ಯರು ಗೆದ್ದಿದ್ದು, ಬಿಜೆಪಿ ಮುಖಂಡರು ರಾಜಕೀಯ ಪ್ರಭಾವ ಬೀರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿ ಬಹುಮತವಿಲ್ಲದಿದ್ದರೂ ನಗರಸಭೆಗಳಲ್ಲಿ ಅಧಿಕಾ ಹಿಡಿಯುವ ಕುತಂತ್ರ ನಡೆಸಿದ್ದಾರೆ ಜೆಡಿಎಸ್‌ ಮುಖಂಡರು ಆರೋಪಿಸಿದ್ದಾರೆ. ಮೀಸಲಾತಿ ನಿಗದಿ ಪ್ರಶ್ನಿಸಿ ಶುಕ್ರವಾರ ಹೈಕೋರ್ಟ್‌ ರಿಟ್‌ ಸಲ್ಲಿಸಿದ್ದು, ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಈ ನಡುವೆ ಹಾಸನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅ.16 ರಂದು, ಅರಸೀಕೆರೆ ನಗರಸಭೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಅ.22 ರಂದು ಚುನಾವಣೆ ನಿಗದಿಪಡಿಸಿ ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.

ಮಾರ್ಗದರ್ಶಿ ಸೂತ್ರ ಉಲ್ಲಂಘನೆ: ಮಾರ್ಗದರ್ಶಿ ಸೂತ್ರಗಳನ್ನು ಸರ್ಕಾರ ಹೈಕೋರ್ಟಿಗೂ ಸಲ್ಲಿಸಿದೆ. ಆದರೂ ಮಾರ್ಗದರ್ಶಿ ಸೂತ್ರ ಉಲ್ಲಂ ಸಿ ರಾಜಕೀಯ ಪ್ರಭಾವದಿಂದ ಹಾಸನ ಮತ್ತು ಆರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನಗಳು ಎಸ್‌ಟಿ ವರ್ಗಕ್ಕೆ ಮೀಸಲಾಸಲಾಗಿವೆ ಎಂದು ಜೆಡಿಎಸ್‌ ಮುಖಂಡರು ಮಾಹಿತಿ ನೀಡಿದ್ದಾರೆ.

3ನೇ ಬಾರಿ ಮೀಸಲಾತಿ ನಿಗದಿ: 2018ರ ಆಗಸ್ಟ್‌ನಲ್ಲಿ ಚುನಾವಣೆ ನಡೆದ ನಂತರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ 3 ಬಾರಿ ಮೀಸಲಾತಿ ನಿಗದಿಯಾಗಿದೆ. 2018 ಸೆ.3 ರಂದು ಹೊರಡಿಸಿದ್ದ ಮೀಸಲಾತಿ ಆದೇಶದಲ್ಲಿ ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗುಂಪಿಗೆ ಮೀಸಲಾಗಿತ್ತು. ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗುಂಪಿಗೆ ಮೀಸಲಾಗಿತ್ತು. 2020 ಮಾ.11 ರಂದು ನಿಗದಿಯಾಗಿದ್ದ ಮೀಸಲಾತಿ ಆದೇಶದ ಪ್ರಕಾರ ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗುಂಪಿನ ಮಹಿಳೆಗೆ ಮೀಸಲಾಗಿತ್ತು. ಅರಸೀಕೆರೆ ನಗರಸಭೆಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ , ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಆದರೆ ಈಗ ಗುರುವಾರ ಹೊರಡಿಸಿರುವ ಮೀಸಲಾತಿ ಆದೇಶದಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗುಂಪಿನ ಮಹಿಳೆಗೆ ಮೀಸಲಾಗಿದೆ. ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಅರಸೀಕೆರೆ ನಗರಸಭೆಗೆ ಗಿರೀಶ್‌ ಅಧ್ಯಕ್ಷ? :  ಒಟ್ಟು31 ಸದಸ್ಯ ಬಲದ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್‌22 ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 5 ಸದಸ್ಯರನ್ನು ಹೊಂದಿದೆ. ಒಬ್ಬರುಕಾಂಗ್ರೆಸ್‌, ಮೂವರು ಪಕ್ಷೇತರ ಸದಸ್ಯರಿದ್ದಾರೆ. ಗುರುವಾರ ನಿಗದಿಯಾಗಿರುವ ಮೀಸಲಾತಿ ಪ್ರಕಾರ ಅರಸೀಕೆರೆ ನಗರಸಭೆ ಏಕೈಕ ಪರಿಶಿಷ್ಟ ಪಂಗಡದ ಬಿಜೆಪಿ ಸದಸ್ಯ22ನೇ ವಾರ್ಡಿನ ಗಿರೀಶ್‌ ಅಧ್ಯಕ್ಷರಾಗುವ ಅವಕಾಶ ರೂಪುಗೊಂಡಿದೆ.

Advertisement

ಹಾಸನ ನಗರಸಭೆಗೆ ಮೋಹನ್‌ ಅಧ್ಯಕ್ಷ? :  35 ಸದಸ್ಯ ಬಲದ ಹಾಸನ ನಗರಸಭೆಯಲ್ಲಿ ಜೆಡಿಎಸ್‌17 ಸ್ಥಾನ, ಬಿಜೆಪಿ 13 ಸ್ಥಾನ, ಕಾಂಗ್ರೆಸ್‌ 2 ಮತ್ತು ಮೂವರು ಪಕ್ಷೇತರ ಸದಸ್ಯರಿದ್ದಾರೆ. ಚುನಾವಣಾ ಫ‌ಲಿತಾಂಶ ಘೋಷಣೆಯಾದ ನಂತರ ಇಬ್ಬರು ಪಕ್ಷೇತರರು ಜೆಡಿಎಸ್‌ಸೇರಿದ್ದರು. ಹೀಗಾಗಿ ಜೆಡಿಎಸ್‌ ಬಹುಮತ ಹೊಂದಿತ್ತು. ಈಗ ನಿಗದಿಯಾಗಿರುವ ಮೀಸಲಾತಿ ಪ್ರಕಾರ ಬಹುಮತವಿದ್ದರೂಜೆಡಿಎಸ್‌ ಅಧ್ಯಕ್ಷ ಸ್ಥಾನದಿಂದ ವಂಚಿತವಾಗುತ್ತಿದ್ದು, ನಗರಸಭೆಯ ಏಕೈಕ ಪರಿಶಿಷ್ಟ ಪಂಗಡದ ಬಿಜೆಪಿ ಸದಸ್ಯ33ನೇ ವಾರ್ಡಿನ ಮೋಹನ್‌ ಅಧ್ಯಕ್ಷರಾಗಿ ಆಯ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next