Advertisement

ನಗರಸಭೆ ಆಸ್ತಿ ಪಟ್ಟಿ ಸಿದ್ಧಪಡಿಸಿ ಕ್ರಮ: ಪೌರಾಯುಕ್ತ ರಮೇಶ್

04:20 PM Aug 28, 2017 | Team Udayavani |

ಹೊಸಪೇಟೆ: ನಗರಸಭೆ ಆಸ್ತಿಪಾಸ್ತಿ ಎಷ್ಟು ಹಾಗೂ ಎಲ್ಲಲ್ಲಿದೆ ಎಂಬುದರ ಕುರಿತು 15 ದಿನಗಳಲ್ಲಿ ಪಟ್ಟಿ ಸಿದ್ಧಪಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ರಮೇಶ ಹೇಳಿದರು. ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಿಲ್‌ಕಲೆಕ್ಟರ್‌, ಆರ್‌ಐ, ಇಂಜಿನಿಯರ್‌ ಸೇರಿ ಇತರೆ ಅಧಿಕಾರಿಗಳ ಸಮಿತಿಯನ್ನು ರಚಿಸಿ, ನಗರದಲ್ಲಿರುವ 52 ಪಾರ್ಕ್‌ಗಳು ಸೇರಿದಂತೆ ಇತರೆ ನಗರಸಭೆಯ ಆಸ್ತಿಗಳು ಎಲ್ಲೆಲ್ಲಿ ಇವೆ ಎನ್ನುವುದರ ಪಟ್ಟಿ ಸಿದ್ಧಪಡಿಸಲಾಗುವುದು. ಅತೀ ಶೀಘ್ರದಲ್ಲೇ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಗರಸಭೆಯ ಆಸ್ತಿಯ ವಿವರಗಳನ್ನು ಪಟ್ಟಿ ಮಾಡಿಕೊಡುತ್ತಾರೆ. ಈ ಕುರಿತು ಆಯಾ ವಾರ್ಡ್‌ನ ಬಿಲ್ಕಲೆಕ್ಟರ್‌, ಆರ್‌.ಐ.ಇಂಜಿನಿಯರ್‌ ಸೇರಿದಂತೆ ಇತರೆ ಅಧಿಕಾರಿಗಳ ಸಮಿತಿಯನ್ನು ರಚಿಸಿ, ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗುತ್ತದೆ ಎಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು. ನಗರಸಭಾ ಸದಸ್ಯರಾದ ಚಂದ್ರಕಾಂತ್‌ ಕಾಮತ್‌ ಮತ್ತು ಎಂ. ಎಸ್‌. ರಘು ಮಾತನಾಡಿ, ನಗರದ ಅನೇಕ ಪಾರ್ಕ್‌ಗಳು ಒತ್ತುವರಿಯಾಗುತ್ತಿವೆ. ಪಾರ್ಕುಗಳು ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಬೇಕು. ಒತ್ತುವರಿಯಾಗದಂತೆ ನಗರಸಭೆಯವರು ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ನಗರಸಭಾ ಸದಸ್ಯ ಅಂಜಿನಿ ಮಾತನಾಡಿ, ನಗರದಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗಿವೆ. ನಗರಸಭೆಯಿಂದ ಮುಂಜಾಗ್ರತ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.  ಪೌರಾಯುಕ್ತ ರಮೇಶ್‌ ಮಾತನಾಡಿ, ಈಗಿರುವ -ಫಾಂಗಿಗ್‌ ಮಿಷನ್‌ ಗಳ ಜೊತೆಗೆ ಮತ್ತೆ ಎರಡು ಹೊಸ -ಫಾಗಿಂಗ್‌
ಮಿಷನ್‌ಗಳನ್ನು ತರಲಾಗಿದೆ. ನಗರದ ವಾರ್ಡ್‌ಗಳಲ್ಲಿ -ಫಾಗಿಂಗ್‌ ಹೊಡಿಸಲಾಗುತ್ತಿದೆ ಎಂದು ಉತ್ತರಿಸಿದರು. ನಗರದ ಕೆಲ ವಾರ್ಡ್‌ಗಳಿಗೆ ಮಾತ್ರ ಹೆಚ್ಚಿನ ಅನುದಾನ ವಿತರಣೆಯಾಗಿದೆ. ಉಳಿದ ಬಹುತೇಕ ವಾರ್ಡ್‌ಗಳಿಗೆ ಅನುದಾನ ತಾರತಮ್ಯವಾಗಿ ಹಂಚಿಕೆ ಮಾಡಿದ್ದಾರೆ. ಎಲ್ಲ ವಾರ್ಡ್‌ಗಳಿಗೂ ಸಮವಾಗಿ ಅನುದಾನ ಹಂಚಿಕೆ ಮಾಡಬೇಕು ಎಂದು ನಗರಸಭೆಯ ಸದಸ್ಯರಾದ ಗುಡಿಗಂಟಿ ಮಲ್ಲಿಕಾರ್ಜುನ, ಕೆ. ಬಡಾವಲಿ, ಗುಜ್ಜಲಿಂಗಪ್ಪ, ಬೆಲ್ಲದ್‌ ರೋಫ್, ಧನಲಕ್ಷ್ಮೀ,ಬಸವರಾಜ, ರಾಮಕೃಷ್ಣ, ಗೌಸ್‌, ಜಿ. ಕುಲ್ಲಾಯಪ್ಪ, ಅಂಜಿನಿ, ನೂ ಜಹಾನ್‌, ರಾಮಾಂಜಿನಿ ಸೇರಿದಂತೆ ಇತರೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು. ನಗರದ ಎಲ್ಲ ವಾರ್ಡ್‌ಗಳಲ್ಲಿಯೂ ಸಮಸ್ಯೆಗಳಿವೆ. ವರ್ಷಕ್ಕೆ ಒಂದು ಬಾರಿ ಅನುದಾನ ಬರುತ್ತದೆ. ಅನುದಾನ ಬಂದಾಗ ಎಲ್ಲ ವಾರ್ಡ್‌ಗಳಿಗೂ ಸಮನಾಗಿ ಹಂಚಿಕೆ ಮಾಡಬೇಕು. ಎಲ್ಲ ವಾರ್ಡ್‌ಗಳಲ್ಲಿಯೂ ಅಭಿವೃದ್ಧಿಯಾಗಬೇಕು. ಕೆಲ ವಾರ್ಡ್‌ಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡಿದ್ದಾರೆ. ಉಳಿದ ವಾರ್ಡ್‌ಗಳಿಗೆ ಕಡಿಮೆ ಅನುದಾನ ನೀಡಿರುವುದು ಸರಿಯಲ್ಲ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಹಂದಿಗಳು, ಬೀದಿ ನಾಯಿಗಳು, ಬಿಡಾಡಿ ದನಗಳು ಹೆಚ್ಚಾಗಿವೆ. ಈ ಕುರಿತು ನಗರಸಭೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಗರಸಭೆ ಸದಸ್ಯರಾದ ಕೆ. ಗೌಸ್‌ ಮತ್ತು ವೇಣುಗೋಪಾಲ, ರೂಪೇಶ್‌ ಕುಮಾರ ಸೇರಿದಂತೆ ಇತರರು ಪ್ರಶ್ನಿಸಿದರು. ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮನಸ್ಸ್ ಹಮ್ಮದ್‌ ಮಾತನಾಡಿ, ಬಿಡಾಡಿ
ದನಗಳ ಮಾಲೀಕರಿಗೆ ನೋಟೀಸ್‌ ನೀಡಲು ಸೂಚಿಸಲಾಗಿದೆ. ಬೀದಿ ನಾಯಿಗಳ ನಿಯಂತ್ರಣ ಮಾಡುವ ಬಗ್ಗೆ 2 ಬಾರಿ ಟೆಂಡರ್‌ ಕರೆಯಲಾಗಿತ್ತು. ಆದರೆ ಟೆಂಡರ್‌ದಾರರು ಯಾರೂ ಬಂದಿಲ್ಲ ಎಂದು ಉತ್ತರಿಸಿದರು. ಇದಕ್ಕೆ ರೂಪೇಶ್‌ ಕುಮಾರ್‌ ಮತ್ತುವೇಣುಗೋಪಾಲ್‌ ಧ್ವನಿಗೂಡಿಸಿ ಬೀದಿ ಯಿಗಳಿಗೆ ಶಸಚಿಕಿತ್ಸೆ ಮಾಡಿಸುವಂತೆ ಎರಡು ವರ್ಷಗಳ ಹಿಂದೆನೇ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಭೆಯಲ್ಲಿ ಚರ್ಚಿಸಿದ ವಿಷಯಗಳು ಜಾರಿಗೆ ತಂದಿಲ್ಲ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next