Advertisement
ಪುರಸಭೆಯ ಒಟ್ಟು 23 ಸದಸ್ಯರ ಪೈಕಿ 17ಕ್ಕೂ ಹೆಚ್ಚು ಸದಸ್ಯರು ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಹಾಗಾಗಿ, ಪಕ್ಷಕ್ಕೆ ಬಹುಮತ ಇರುವುದರಿಂದ ಪರಸಭೆ ಅಧಿಕಾರವನ್ನು ಎಲ್ಲಾ ಸದಸ್ಯರಿಗೆ ಸಮನಾಗಿ ಹಂಚಿಕೆ ಮಾಡಬೇಕೆಂಬ ಶಾಸಕ ಎಸ್.ಎನ್ .ನಾರಾಯಣಸ್ವಾಮಿ ನಿರ್ದೇಶನದಂತೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಗುಣಶೀಲನ್(ಅಣ್ಣಾದೊರೈ) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಷಫಿ ನಾಮಪತ್ರ ಸಲ್ಲಿಸಿದ್ದರು.
ಮೌಳೇಶ್ವರ, ನಾಮಪತ್ರಗಳು ಕ್ರಮಬದ್ಧವಾಗಿವೆ. ಹಾಗಾಗಿ, ಅಧ್ಯಕ್ಷ ಸ್ಥಾನಕ್ಕೆ ಎಂ.ಗುಣಶೀಲನ್
(ಅಣ್ಣಾದೊರೈ)ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಷಫಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. ಪುರಸಭೆ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಎಸ್ಸಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ಗೆ ಮೀಸಲಿರಿಸಿದ್ದು, ಈಗಾಗಲೇ ಅಧ್ಯಕ್ಷರಾಗಿ ಡಿ.ಕುಮಾರ್, ಸಿ.ರಮೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಸ್ಲಂ ಪಾಷ, ಆರೋಗ್ಯರಾಜನ್ ಅವಧಿ ಮುಗಿದಿದೆ. ಕಾಂಗ್ರೆಸ್ ಮುಖಂಡರ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ಎಂ.ಗುಣಶೀಲನ್ ಹಾಗೂ ಉಪಾಧ್ಯಕ್ಷ
ಸ್ಥಾನಕ್ಕೆ ಷಫಿ ಆಯ್ಕೆಯಾಗುವುದು ಈಗಾಗಲೇ ತೀರ್ಮಾನವಾಗಿರುವುದರಿಂದ ಹೊಸಬರ ಆಯ್ಕೆ
ಅವಿರೋಧವಾಗಿ ನಡೆಯಿತು.
Related Articles
Advertisement
ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದನೆ: ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಮುಖ್ಯಾಧಿಕಾರಿ ಶ್ರೀಧರ್ ಪುರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಬಂಗಾರಪೇಟೆ ಪುರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಮುಗಿದ ನಂತರ ಎಲ್ಲರೂ ಚುನಾವಣೆಗೆ ಹೋಗಬೇಕಾಗಿರುವುದರಿಂದ ಎಚ್ಚರಿಕೆಯಿಂದ ಆಡಳಿತ ನಡೆಸಬೇಕಾಗಿದೆ. ಕಾಂಗ್ರೆಸ್‌ನಿಂದ ಗೆದ್ದಿರುವ ಎಲ್ಲಾ ಹಾಲಿ ಸದಸ್ಯರು ಮತ್ತೆ ಮರು ಆಯ್ಕೆಯಾಗುವ ರೀತಿಯಲ್ಲಿ ತಮ್ಮ ವಾರ್ಡುಗಳಲ್ಲಿ ಪ್ರಾಮಾಣಿಕ ಸೇವೆ ಮಾಡಬೇಕು.ಮುಂದಿನ ಪುರಸಭೆ ಚುನಾವಣೆಯಲ್ಲಿ 27ಕ್ಕೆ 27 ಸ್ಥಾನಗಳನ್ನು ಗೆಲ್ಲಬೇಕು. ಎಸ್.ಎನ್.ನಾರಾಯಣಸ್ವಾಮಿ, ಶಾಸಕ