Advertisement
ಅಶುದ್ಧ ನೀರು ಪೂರೈಸುತ್ತಿರುವ ಕುರಿತು ಸೋಮವಾರ ಉದಯವಾಣಿ ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಶಾಸಕ ರಾಜಶೇಖರ ಪಾಟೀಲ ಅವರು 10 ವರ್ಷಗಳ ಹಿಂದೆ 13 ಊರುಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಅನುಷ್ಠಾನಕ್ಕೆ ತಂದ ಯೋಜನೆ ಇದಾಗಿದ್ದು, ಆರಂಭದ ದಿನಗಳಲ್ಲಿ ತೋರಿಸಿದ ಆಸಕ್ತಿ ನಂತರದ ದಿನಗಳಳ್ಲಿ ತೋರಿಸದ ಕಾರಣ ಮೂರ್‍ನಾಲ್ಕು ವರ್ಷಗಳಿಂದ ಅಶುದ್ಧ ನೀರು ಪೂರೈಕೆ ಆಗುತ್ತಿತ್ತು. ಈ ಕುರಿತು ಈ ಹಿಂದೆಯೂ ಅದೆಷ್ಟೋ ಬಾರಿ ಸಂಬಂಧಪಟ್ಟ ಅಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೇ ಸೋಮವಾರ ಉದಯವಾಣಿಯಲ್ಲಿ ಸುದ್ದಿ ಬೆನ್ನಲ್ಲೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಭೇಟಿ ನೀಡಿದರು. ಸಂಬಂಧಪಟ್ಟ ವಿಭಾಗದ ಸಿಬ್ಬಂದಿಯ ನಿರ್ಲಕ್ಷ್ಯವೇ ಅಶುದ್ಧ ನೀರು ಪೂರೈಕೆಗೆ ಕಾರಣ ಎಂಬುದು ಸ್ಪಷ್ಟವಾಗಿದೆ.
Advertisement
ನೀರು ಶುದ್ಧೀಕರಣ ಘಟಕಕ್ಕೆ ಪುರಸಭೆ ಅಧಿಕಾರಿ ಭೇಟಿ
11:29 AM Jul 09, 2019 | Suhan S |
Advertisement
Udayavani is now on Telegram. Click here to join our channel and stay updated with the latest news.