Advertisement

ಟಿಎಂಸಿ 140, ಬಿಜೆಪಿ 6, ಕಾಂಗ್ರೆಸ್‌ 0, ಎಡ 0

06:40 AM Aug 18, 2017 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ನಡೆದ 7 ನಗರಪಾಲಿಕೆ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕ್ಲೀನ್‌ಸ್ವೀಪ್‌ ಮಾಡಿದೆ. ಇದುವರೆಗೆ ಇಲ್ಲಿ ನೆಲೆಯನ್ನೇ ಕಾಣದ ಬಿಜೆಪಿ ಮಮತಾಗೆ ಕೊಂಚ ಸ್ಪರ್ಧೆ ಒಡ್ಡಿರುವುದನ್ನು ಬಿಟ್ಟರೆ, ಈ ಹಿಂದೆ ದಶಕಗಳ ಕಾಲ ಅಧಿಕಾರ ನಡೆಸಿದ್ದ ಸಿಪಿಎಂ ಶೂನ್ಯ ಸಂಪಾದಿಸಿದೆ. ಕಾಂಗ್ರೆಸ್‌ ಕೂಡ ಖಾತೆ ತೆರೆಯಲು ವಿಫ‌ಲವಾಗಿದೆ. 

Advertisement

7 ಪಾಲಿಕೆಗಳ 148 ಸ್ಥಾನಗಳಿಗೆ ಕಳೆದ ರವಿವಾರ ಚುನಾವಣೆ ನಡೆದಿತ್ತು. ಗುರುವಾರ ಬೆಳಗ್ಗೆ ಮತ ಎಣಿಕೆ ಶುರುವಾದರೂ ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಸಿಕ್ಕಿತು. 140ರಲ್ಲಿ ಟಿಎಂಸಿ ಗೆದ್ದರೆ, ಆರರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು ಸಿಪಿಎಂ ಅಂಗಪಕ್ಷ ಪಾರ್ವರ್ಡ್‌ ಬ್ಲಾಕ್‌ ಒಂದು ಮತ್ತು ಸ್ವತಂತ್ರ ಅಭ್ಯರ್ಥಿ ಒಂದರಲ್ಲಿ ಗೆದ್ದಿದ್ದಾರೆ. ದುಪುರಿಯಲ್ಲಿ ನಾಲ್ಕು, ಬುನಿಯಾದ್‌ಪುರ ಮತ್ತು ಪನ್ಸ್‌ಕುರಾದಲ್ಲಿ ತಲಾ ಒಂದರಲ್ಲಿ ಬಿಜೆಪಿ ಜಯ ಗಳಿಸಿದೆ. ಟಿಎಂಸಿ ಹಾಲ್ದಿಯಾ, ದುರ್ಗಾಪುರ ಮತ್ತು ಕೊಪರ್‌ ಕ್ಯಾಂಪ್‌ ಪಾಲಿಕೆಗಳಲ್ಲಿ ಎಲ್ಲಾ ಸ್ಥಾನಗಳಲ್ಲೂ ಗೆದ್ದಿದೆ. 

ಪಶ್ಚಿಮ ಬಂಗಾಲದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ನೆಲೆ ಕಳೆದುಕೊಳ್ಳುತ್ತಿರುವುದು ನಿಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಯೇ ಮಮತಾಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next