Advertisement

ನಗರಸಭೆ ಚುನಾವಣೆ: ವಿವಿ ಪ್ಯಾಟ್‌, ನೋಟಾ ಇರಲ್ಲ

03:19 PM Nov 06, 2019 | Team Udayavani |

ಕೋಲಾರ: ಮತ ಯಂತ್ರಗಳಲ್ಲಿ ಈ ಬಾರಿ ಮತದಾನ ಖಾತ್ರಿ ಯಂತ್ರ(ವಿವಿ ಪ್ಯಾಟ್‌) ಬಳಸುತ್ತಿಲ್ಲ ಮತ್ತು ನೋಟಾಗೆ ಅವಕಾಶವೂ ಇಲ್ಲ, ಗೊಂದಲಗಳಿಗೆ ಅವಕಾಶ ನೀಡದಂತೆ ಬದ್ಧತೆಯಿಂದ ಕೆಲಸ ಮಾಡಿ ಎಂದು ತಹಶೀಲ್ದಾರ್‌ ಹಾಗೂ ಸಹಾಯಕ ಚುನಾವ ಣಾಧಿಕಾರಿ ಆರ್‌. ಶೋಭಿತಾ ಸಲಹೆ ನೀಡಿದರು.

Advertisement

ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮತ ದಾನದ ಕುರಿತು ಇರುವ ಅನುಮಾನ ತರಬೇತಿ ಯಲ್ಲಿ ಪರಿಹರಿಸಿಕೊಳ್ಳಿ, ಸುಗಮ, ಗೊಂದಲ ರಹಿತ ಮತದಾನ ನಡೆಯಲು ಎಲ್ಲಾ ಮಾಹಿತಿ ಈಗಲೇ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ನಿಷ್ಪಕ್ಷಪಾತ ನಿಲುವು ಇರಲಿ: ಮತದಾರ ನಿರ್ಭಯದಿಂದ ಮತಚಲಾಯಿಸುವ ವಾತಾವ ರಣವನ್ನು ಮತಗಟ್ಟೆಯಲ್ಲಿ ಕಾಪಾಡುವುದು ಪ್ರಿಸೈಡಿಂಗ್‌ ಅಧಿಕಾರಿಗಳ ಹೊಣೆ. ನೀವು ನಿಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಮುಲಾಜಿಗೆ ಒಳಗಾಗದಿರಿ, ನಿಷ್ಪಕ್ಷಪಾತ ನಿಲುವು ನಿಮ್ಮದಾಗಿರಲಿ ಎಂದು ಹೇಳಿದರು.

ಯಾರ ಪರ ಕೆಲಸ ಮಾಡಬೇಡಿ: ಚುನಾವಣಾ ಆಯೋಗ ಶಾಂತಿಯುತ, ನಿಷ್ಪಕ್ಷಪಾತ ಮತದಾನದ ಆಶಯ ಹೊಂದಿದೆ. ಈ ಆಶಯಕ್ಕೆ ಧಕ್ಕೆ ಬಾರದಂತೆ ಕೆಲಸ ನಿರ್ವಹಿಸುವ ಹೊಣೆ ಮತಗಟ್ಟೆಯ ಜವಾಬ್ದಾರಿ ಹೊತ್ತ ನಿಮ್ಮಗಳ ಮೇಲಿದೆ. ಯಾವುದೇ ಪಕ್ಷ, ವ್ಯಕ್ತಿಯ ಪರ ಕೆಲಸ ಮಾಡದಿರಿ, ನಿಮಗೆ ಚುನಾವಣಾ ಆಯೋಗದ ಸೂಚನೆಯಂತೆ ನೀಡಿರುವ ನಿಯಮ ಚಾಚೂ ತಪ್ಪದೇ ಪಾಲಿಸಿ ಎಂದು ಹೇಳಿದರು.

ಅನುವು ಮಾಡಿಕೊಡಿ: ಸಹಾಯಕ ನೋಡಲ್‌ ಅಧಿಕಾರಿ ಕೆ.ಎಸ್‌.ನಾಗರಾಜಗೌಡ, ಚುನಾವಣಾ ನೀತಿ, ನಿಯಮ ಕ್ರಮಬದ್ಧವಾಗಿ ಪಾಲಿಸಿ, ಶಿಕ್ಷಕರೇ ಚುನಾವಣಾ ಕೆಲಸ ನಿರ್ವಹಿಸುತ್ತಿದ್ದು, ನಿಮಗೆ ಈ ಬಗ್ಗೆ ಮೊದಲೇ ಅರಿವಿದ್ದರೂ ಮತ್ತೂಮ್ಮೆ ಅಗತ್ಯ ಮಾಹಿತಿ ಪಡೆದುಕೊಳ್ಳಿ, ಸುಗಮ ಮತದಾನಕ್ಕೆ ಅನುವು ಮಾಡಿಕೊಡಿ ಎಂದು ಹೇಳಿದರು.

Advertisement

ದೂ.ಸಂಖ್ಯೆ ಪಡೆಯಿರಿ: ಗುರುತಿನ ಚೀಟಿ ನೋಡಿಯೇ ಮತದಾನಕ್ಕೆ ಅನುವು ಮಾಡಿಕೊಡಿ, ನಿಮಗೆ ಅನುಮಾನ ಬಂದರೆ ಪರಿಶೀಲಿಸಿ, ಇತರೆ ಮತಗಟ್ಟೆಯ ಸಿಬ್ಬಂದಿಯ ದೂರವಾಣಿ ಸಂಖ್ಯೆ ಪಡೆದುಕೊಳ್ಳಿ, ಸಹಕಾರ ಮನೋಭಾವದಿಂದ ಮತದಾನದಲ್ಲಿ ಯಾವುದೇ ಲೋಪವಾಗದಂತೆ ಕ್ರಮವಹಿಸಿ ಎಂದು ವಿವರಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಉಪನ್ಯಾಸಕ ಗೋಪಿಕೃಷ್ಣನ್‌, ನೀವು ನ.11 ರಂದು ಮತಗಟ್ಟೆಗಳಿಗೆ ತೆರಳುವ ಮುನ್ನಾ ನೀವು ಮಷ್ಟ್ರಿಂಗ್‌ ಕೇಂದ್ರದಲ್ಲಿ ನಿಮ್ಮೊಂದಿಗೆ ಕಾರ್ಯ ನಿರ್ವಹಿಸಲು ನೇಮಕಗೊಂಡಿರುವ ಅಧಿಕಾರಿಗಳನ್ನು ಭೇಟಿ ಮಾಡಿ ಎಂದ ಅವರು, ನಂತರ ಎಲ್ಲರ ಸಹಕಾರ ಪಡೆದು ಮಾಷ್ಟರಿಂಗ್‌ ಕೇಂದ್ರದಲ್ಲಿ ಮತದಾನ ಕೇಂದ್ರಕ್ಕೆ ಹೋಗಲು ಅಗತ್ಯವಾದ ವಸ್ತುಗಳನ್ನು ಪಡೆದುಕೊಂಡು ಖಾತ್ರಿಪಡಿಸಿಕೊಳ್ಳಿ ಎಂದು ವಿವರಿಸಿದರು.

ಮತಗಟ್ಟೆಯಲ್ಲಿ ಬಳಸುವ ಇವಿಎಂ ಬಳಕೆ ಕುರಿತು ಅವರು ಪ್ರಾಯೋಗಿಕವಾಗಿ ಅರಿವು ಮೂಡಿಸಿ ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಯ ಅನುಮಾನಗಳನ್ನು ಪರಿಹರಿಸಿದರು. ಇಸಿಒ ಆರ್‌.ಶ್ರೀನಿವಾಸನ್‌, ತರಬೇತು ದಾರರಾದ ರುದ್ರಪ್ಪ, ಮುನಿರಾಜು ಉಪಸ್ಥಿತರಿದ್ದು, ಮತಗಟ್ಟೆಗಳಿಗೆ ನೇಮಕಗೊಂಡಿರುವ ಪಿಆರ್‌ಒ ಮತ್ತು ಎಪಿಆರ್‌ಒಗಳು ತರಬೇತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next