ಬಂಗಾರಪೇಟೆ: ಪುರಸಭೆ 27 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕಚೇರಿಯಲ್ಲಿ ಗುರುವಾರ ತಹಶೀಲ್ದಾರ್ ಕೆ.ಬಿ.ಚಂದ್ರಮೌಳೇಶ್ವರ್ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದರು.
ಪುರಸಭೆಯ 11 ರಿಂದ 20 ವಾರ್ಡ್‌ಗಳಿಗೆ ಚುನಾವಣಾಧಿಕಾರಿಯನ್ನಾಗಿ ಕೋಲಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ವಿಶ್ವನಾಥ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಬೂದಿಕೋಟೆ ಪದವಿಪೂರ್ವ ಕಾಲೇಜಿನ ಉಪನ್ಯಾಸ ಬೋಡಿರೆಡ್ಡಿ ಅವರನ್ನು ನೇಮಿಸಲಾಗಿದೆ ಎಂದರು.
ಪುರಸಭೆಯ 21 ರಿಂದ 27 ವಾರ್ಡ್‌ಗಳಿಗೆ ಚುನಾವಣಾಧಿಕಾರಿಯನ್ನಾಗಿ ಬೂದಿಕೋಟೆಯ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ಹಾಗೂ ಸಹಾಯಕ ಚುನಾವಣಾಧಿಕಾರಿಯನ್ನಾಗಿ ತಾಲೂಕು ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಕೆ.ಶಶಿಕಲಾ ಅವರನ್ನು ನೇಮಿಸಲಾಗಿದೆ ಎಂದರು. ಪುರಸಭೆಯ 27 ವಾರ್ಡ್‌ಗಳಿಗೆ ನಡೆಯುವ ಚುನಾವಣೆಗೆ ಮೂರು ತಂಡಗಳನ್ನು ನೇಮಿಸಿ ಚುನಾವಣೆ ನಾಮಪತ್ರಗಳನ್ನು ಸ್ವೀಕರಿಸಲು ಯಾವುದೇ ಗೊಂದಲವಿಲ್ಲದೇ ನಡೆಸಲು ಸೂಚನೆ ನೀಡಿದ ತಹಶೀಲ್ದಾರ್ ಕೆ.ಬಿ.ಚಂದ್ರಮೌಳೇಶ್ವರ್, ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್, ಸಿಬ್ಬಂದಿ ಮೂರು ತಂಡಗಳಿಗೆ ಸಹಕಾರ ನೀಡುವಂತೆ ತಿಳಿಸಿ, ಯಾವುದೇ ಗೊಂದಲವಿಲ್ಲದಂತೆ ಕರ್ತವ್ಯ ನಿರ್ವಹಿಸುವಂತೆ ಹೇಳಿದರು.
Advertisement
ನಾಮಪತ್ರ ಸ್ವೀಕರಿಸಲು ಮೇ 16 ಕೊನೆ ದಿನವಾಗಿದೆ. 17 ರಂದು ನಾಮಪತ್ರ ಪರಿಶೀಲನೆ, 20 ವಾಪಸ್ ಪಡೆಯಲು ಕೊನೆ ದಿನ, ಮತದಾನವು 29 ರಂದು ನಡೆಯಲಿದ್ದು, ಎಣಿಕೆ 31 ರಂದು ನಡೆಯಲಿದೆ. ಪುರಸಭೆಯ 1 ರಿಂದ 10 ವಾರ್ಡ್‌ಗಳಿಗೆ ಚುನಾವಣಾಧಿಕಾರಿಯಾಗಿ ಬೂದಿಕೋಟೆ ಕಾಲೇಜಿನ ಪ್ರಾಂಶುಪಾಲ ಚಂದ್ರಮರಕಲ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಬಂಗಾರಪೇಟೆ ಬಾಲಕಿಯರ ಕಾಲೇಜಿನ ಉಪನ್ಯಾಸಕ ಪರಶುರಾಂ ಉಂಕಿ ಅವರನ್ನು ನೇಮಿಸಲಾಗಿದೆ ಎಂದರು.