Advertisement

ಉಮಾಶಂಕರ್‌ ಕ್ಷಮೆ ಯಾಚನೆಗೆ ಪುರಸಭೆ ಸದಸ್ಯ ಒತ್ತಾಯ

04:30 PM Nov 15, 2019 | Suhan S |

ಕೆ.ಆರ್‌.ಪೇಟೆ: ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ವಿಶ್ವಮಾನ್ಯ ಸಂವಿಧಾನವನ್ನು ಭಾರತ ದೇಶಕ್ಕೆ ರಚಿಸಿಕೊಟ್ಟ ಸಂವಿಧಾನಶಿಲ್ಪಿ ಅಂಬೇಡ್ಕರ್‌ ವಿಚಾರ ಧಾರೆಗಳನ್ನು ಶಾಲಾ ಪಠ್ಯಗಳಲ್ಲಿ ಬದಲಾಯಿಸಲು ಹೊರಟಿರುವ ಎಸ್‌.ಆರ್‌. ಉಮಾಶಂಕರ್‌ ಕೂಡಲೇ ಕ್ಷಮೆಯಾಚಿಸಬೇಕು ಎಂದು ಪುರಸಭೆಯ ಸದಸ್ಯ ಡಿ.ಪ್ರೇಮಕುಮಾರ್‌ ಒತ್ತಾಯಿಸಿದರು.

Advertisement

ಪಟ್ಟಣದಲ್ಲಿ ದಲಿತರು, ಮುಸ್ಲಿಂ ಯುವಕರ ಸಭೆಯಲ್ಲಿಮಾತನಾಡಿದ ಅವರು, ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ವಿಶ್ವದ ಇತರೆ ರಾಷ್ಟ್ರಗಳ ಸಂವಿಧಾನ ಅಧ್ಯಯನ ಮಾಡಿ ಭಾರತ ದೇಶದ ಸಾರ್ವಭೌಮತ್ವ ಹಾಗೂ ಅಖಂಡತೆಗೆ ಹೊಂದಿಕೆಯಾಗುವಂತಹ ವಿಶ್ವಮಾನ್ಯ ಸಂವಿಧಾನ ರಚಿಸಿದ ಮೇಧಾವಿ, ಶೋಷಿತ ವರ್ಗಗಳ ಉಸಿರಾದ ಅಂಬೇಡ್ಕರ್‌ ವಿಚಾರಧಾರೆಗಳನ್ನು ಪಠ್ಯಕ್ರಮಗಳಲ್ಲಿ ತಿದ್ದಿ ಬದಲಿಸಬೇಕು ಎಂಬ ಬಾಲಿಷ ಹೇಳಿಕೆ ನೀಡಿರುವ ಐಎಎಸ್‌ ಅಧಿಕಾರಿ ಉಮಾಶಂಕರ್‌ ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ದಲಿತರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಅವಹೇಳನ ಸರಿಯಲ್ಲ: ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಟಿಪ್ಪು ಜಯಂತಿ ಸಮಾರಂಭದಲ್ಲಿ ನಾನು ಮಾಡಿರುವ ಭಾಷಣಕ್ಕೆ ಕೆಲ ಯುವಕರು ಟಿಕ್‌ಟಾಕ್‌ ಮಾಡಿ ನನ್ನ ಬಗ್ಗೆ ಅವಹೇಳನ ಮಾಡಿ ಸಾಮಾಜಿಕ ಜಾಲತಾಣ ಹಾಗೂ ವ್ಯಾಟ್ಸಫ್ ಗ್ರೂಪ್‌ ಗಳಲ್ಲಿ ಹಾಕಿರುವುದು ಖಂಡನೀಯ. ಅವರ ವಿರುದ್ಧ ಪೊಲೀಸ್‌ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮಾಂಬಳ್ಳಿ ಜಯರಾಂ, ಮುದುಗೆರೆ ಮಹೇಂದ್ರ, ಸೋಮಸುಂದರ್‌, ಪ್ರದೀಪ್‌, ಚೆಲುವರಾಜು, ಜೈನಹಳ್ಳಿ ಹರೀಶ್‌, ಜಕ್ಕನಹಳ್ಳಿ ರಾಜೇಶ್‌, ಸೌಭಾಗ್ಯ ಉಮೇಶ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next