Advertisement

ನಗರಸಭೆ ಸದಸ್ಯೆ ರೇಣಮ್ಮ ಇಡಿ ವಶಕ್ಕೆ

02:29 PM Mar 31, 2022 | Team Udayavani |

ರಾಯಚೂರು: ಸುಳ್ಳು ಜಾತಿ ಪ್ರಮಾಣದ ಆರೋಪದಡಿ ಕಲಬುರಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಯಚೂರು ನಗರಸಭೆಯ 31ನೇ ವಾರ್ಡ್‌ ಸದಸ್ಯೆ ರೇಣಮ್ಮ ಭೀಮರಾಯ ಅವರನ್ನು ಬುಧವಾರ ವಶಕ್ಕೆ ಪಡೆದರು.

Advertisement

ಪರಿಶಿಷ್ಟ ಜಾತಿಗೆ ಮೀಸಲಾದ ವಾರ್ಡ್‌ ನಲ್ಲಿ ಶಿಳ್ಳೆ ಕ್ಯಾತೆ ಸಮುದಾಯಕ್ಕೆ ಸೇರಿದ ರೇಣಮ್ಮ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಗೆಲುವು ಸಾಧಿಸಿದ್ದಾರೆ ಎಂದು ಸಂಘಟನೆ ಮುಖಂಡರೊಬ್ಬರು ದಾಖಲೆ ಸಮೇತ ದೂರು ನೀಡಿದ್ದರು. ಈ ಪ್ರಕರಣ ಕಲಬುರಗಿ ಹೈಕೋರ್ಟ್‌ ನಲ್ಲಿ ವಿಚಾರಣೆ ಹಂತದಲ್ಲಿತ್ತು. ಅಧ್ಯಕ್ಷರ ಚುನಾವಣೆ ಕಾರಣಕ್ಕೆ ಎಂಎಲ್‌ಸಿ ಶರಣಗೌಡ ಬಯ್ನಾಪುರ ಮತ್ತು ರೇಣಮ್ಮಗೆ ಮತದಾನ ಹಕ್ಕು ನೀಡುವಂತೆ ಕಾಂಗ್ರೆಸ್‌ನಿಂದ ಮತ್ತೆ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಲಾಗಿತ್ತು.

ಈ ವೇಳೆ ನ್ಯಾಯಾಲಯ ರೇಣಮ್ಮಗೆ ಗುಪ್ತ ಮತದಾನಕ್ಕೆ ಅವಕಾಶ ನೀಡಿದೆ. ಆದರೆ, ಈ ಪ್ರಕರಣದ ವಿಚಾರಣೆ ಬಾಕಿ ಇರುವ ಕಾರಣಕ್ಕೆ ಚುನಾವಣೆ ಮುಗಿಯುತ್ತಿದ್ದಂತೆ ರೇಣಮ್ಮ ಅವರನ್ನು ನಗರಸಭೆ ಕಚೇರಿ ಆವರಣದಲ್ಲಿಯೇ ಇಡಿ ಅಧಿಕಾರಿಗಳು ವಶಕ್ಕೆ ಪಡೆದರು.

ಕಳೆದ ಬಾರಿ ನಗರಸಭೆ ಅಧ್ಯಕ್ಷರ ಚುನಾವಣೆ ವೇಳೆ ಕೂಡ ಇದೇ ರೀತಿಯಾಗಿತ್ತು. ಚುನಾವಣೆ ನಡೆದರೂ ಫಲಿತಾಂಶ ಒಂದು ವಾರ ತಡವಾಗಿ ಪ್ರಕಟಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next