Advertisement

ಕರಾವಳಿಯಲ್ಲಿ ಈಗ ನಗರಾಡಳಿತ ಸಂಸ್ಥೆ ಚುನಾವಣ ಹವಾ

12:30 AM Dec 20, 2021 | Team Udayavani |

ಮಂಗಳೂರು: ವಿಧಾನಪರಿಷತ್‌ ಚುನಾವಣೆ ಮುಕ್ತಾಯಗೊಳ್ಳುತ್ತಿರುವಂತೆ ಇದೀಗ ಕರಾವಳಿಯಲ್ಲಿ ಪಟ್ಟಣ ಪಂಚಾಯತ್‌ ಹಾಗೂ ಪುರಸಭಾ ಚುನಾವಣೆಯ ಬಿಸಿ ಕಾವೇರತೊಡಗಿದೆ. ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗಿ ಪರಿಗಣಿಸಿದ್ದು ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಿವೆ ದ.ಕ. ಜಿಲ್ಲೆಯಲ್ಲಿ ಕೋಟೆಕಾರು ಹಾಗೂ ವಿಟ್ಲ ಪ. ಪಂ.ಗಳಿಗೆ ಹಾಗೂ ಉಡುಪಿ ಜಿಲ್ಲೆಯ ಕಾಪು ಪುರಸಭೆಗೆ ಡಿ. 27ರಂದು ಚುನಾವಣೆ ನಡೆಯಲಿದ್ದು ಡಿ. 30ರ ತಾಲೂಕಿನ ಕೇಂದ್ರ ಸ್ಥಾನಗಳಲ್ಲಿ ಮತಗಳ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.

Advertisement

ಕೋಟೆಕಾರು ಪ. ಪಂ. 17 ಸ್ಥಾನಗಳನ್ನು ಹೊಂದಿದ್ದು 45 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಎಲ್ಲ ವಾರ್ಡ್‌ಗಳಲ್ಲೂ ಸ್ಪರ್ಧಿಸುತ್ತಿದೆ. ಜತೆಗೆ ಎಸ್‌ಡಿಪಿಐ 6, ಸಿಪಿಐಎಂ 2 ಹಾಗೂ 3 ಪಕ್ಷೇತರರು ಕಣದಲ್ಲಿದ್ದಾರೆ. ಕಳೆದ ಬಾರಿ ಇಲ್ಲಿ 11ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಆಡಳಿತದಲ್ಲಿತ್ತು. .

ವಿಟ್ಲ ಪ. ಪಂ. 18 ಸ್ಥಾನಗಳನ್ನು ಹೊಂದಿದ್ದು 42 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಇಲ್ಲೂ ಎಲ್ಲ ಸ್ಥಾನಗಳಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜತೆಗೆ ಎಸ್‌ಡಿಪಿಐ 4 ಹಾಗೂ ಇಬ್ಬರು ಪಕ್ಷೇತರರು ಕಣದಲ್ಲಿದ್ದಾರೆ. ಕಳೆದ ಬಾರಿ ಇಲ್ಲಿ ಒಟ್ಟು 18 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಅಡಳಿತದಲಿತ್ತು. ಕಾಂಗ್ರೆಸ್‌ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಕಾಪು ಪುರಸಭೆ ಒಟ್ಟು 23 ಸ್ಥಾನಗಳನ್ನು ಹೊಂದಿದ್ದು 67 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಎಲ್ಲ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜತೆಗೆ ಎಸ್‌ಡಿಪಿಐ9, ಜೆಡಿಎಸ್‌ 7, ವೆಲ್ಫೆàರ್‌ ಪಾರ್ಟಿ ಆಫ್‌ ಇಂಡಿಯಾ2 ಹಾಗೂ 3 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಕಳೆದ ಬಾರಿ ಇಲ್ಲಿ ಇಲ್ಲಿ ಕಾಂಗ್ರೆಸ್‌ 12 ಹಾಗೂ ಬಿಜೆಪಿ 11 ಸ್ಥಾನಗಳನ್ನು ಹೊಂದಿದ್ದು ಆರಂಭದ ಅವಧಿಯಲ್ಲಿ ಕಾಂಗ್ರೆಸ್‌ ಹಾಗೂ ಅನಂತರದ ಕೆಲವು ತಿಂಗಳು ಬಿಜೆಪಿ ಅಧಿಕಾರದಲ್ಲಿತ್ತು.

ಇದನ್ನೂ ಓದಿ:ಪ್ರಾಥಮಿಕ ಶಾಲೆಗಳಲ್ಲಿ “ಸಂತೋಷ ಪಠ್ಯಕ್ರಮ”; ಉತ್ತರ ಪ್ರದೇಶ ಸರ್ಕಾರದ ವಿಶೇಷ ಕ್ರಮ

Advertisement

ವ್ಯಾಪಕ ಕಾರ್ಯತಂತ್ರ
ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವ, ಕಾಂಗ್ರೆಸ್‌ ಅಧಿಕಾರವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಚುನಾವಣ ಪ್ರಚಾರ ಕಣಕ್ಕೆ ಇಳಿದಿದೆ. ಪ್ರತಿ ಪ. ಪಂ.ಗಳಿಗೆ ಹಾಗೂ ಪುರಸಭೆಗೆ ಮುಖ್ಯ ಚುನಾವಣ ವೀಕ್ಷಕರಲ್ಲದೆ, ಪ್ರತಿಯೊಂದು ವಾರ್ಡ್‌ಗೆ ಓರ್ವರನ್ನು ವೀಕ್ಷಕರನ್ನಾಗಿ ನೇಮಿಸಿದೆ. ಇದಲ್ಲದೆ ಸ್ಥಳೀಯ
ಮಟ್ಟದಲ್ಲೂ ಅಲ್ಲಿನ ಮುಖಂಡರಿಗೆ ಉಸ್ತುವಾರಿ ಯನ್ನು ವಹಿಸಿಕೊಡಲಾಗಿದೆ. ಎಸ್‌ಡಿಪಿಐ ಕೂಡ ಈಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ವ್ಯಾಪಕ ಪ್ರಚಾರ ಆರಂಭಿಸಿದೆ.

ಚುನಾವಣೆಗೆ ಸಂಬಂಧಿಸಿ ಕೆಪಿಸಿಸಿ ಇಬ್ಬರು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಇದಲ್ಲದೆ ಜಿಲ್ಲಾ ಸಮಿತಿ ಹಾಗೂ ಬ್ಲಾಕ್‌ ಸಮಿತಿಗಳಿಂದ ವೀಕ್ಷಕರನ್ನು ನಿಯೋಜಿಸಲಾಗಿದೆ. ಈಗಾಗಲೇ ಪ್ರಚಾರ ಕಾರ್ಯ
ಭರದಿಂದ ಸಾಗುತ್ತಿದೆ.
– ಹರೀಶ್‌ ಕುಮಾರ್‌,
ಕಾಂಗ್ರೆಸ್‌ ದ.ಕ.ಜಿಲ್ಲಾ ಧ್ಯಕ್ಷರು

ಚುನಾವಣೆಗೆ ಸಂಬಂಧಿಸಿ ಪಕ್ಷದ ಕಾರ್ಯಕರ್ತರಿಂದ ಮನೆಮನೆ ಭೇಟಿ ಮಾಡಿ ಮತಯಾಚನೆ ಆರಂಭಗೊಂಡಿದೆ.
– ಆಶೋಕ್‌ ಕುಮಾರ್‌ ಕೊಡವೂರು,
ಕಾಂಗ್ರೆಸ್‌ ಉಡುಪಿ ಜಿಲ್ಲಾ ಧ್ಯಕ್ಷರು

ಬಿಜೆಪಿ ಜಿಲ್ಲಾ ಮತ್ತು ವಿಧಾನ
ಸಭಾ ಸಮಿತಿಗಳ ವತಿಯಿಂದ ವೀಕ್ಷಕರನ್ನು ನೇಮಿಸಿದ್ದು ಚುನಾವಣೆ ಉಸ್ತುವಾರಿಯನ್ನು ನೋಡಿ
ಕೊಳ್ಳುತ್ತಿದ್ದಾರೆ. ಇದಲ್ಲದೆ ಪ್ರತಿ ವಾರ್ಡ್‌ಗೂ ಪ್ರಭಾರಿಗಳನ್ನು ನಿಯೋಜಿಸಲಾಗಿದೆ.
– ಸುದರ್ಶನ್‌ ಮೂಡುಬಿದಿರೆ,
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರು

ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು ಮತದಾರರ ಮನೆಮನೆ ಭೇಟಿ ನಡೆಯುತ್ತಿದೆ.
– ಕುಯಿಲಾಡಿ ಸುರೇಶ್‌ ನಾಯಕ್‌,
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next