Advertisement
ಪಟ್ಟಣದಲ್ಲಿ ಕಳೆದ ಎರಡು ವರ್ಷದ ಹಿಂದೆಯೇ ಪುರಸಭೆ ನಗರೋತ್ಥಾನ ಯೋಜನೆಯಡಿ 2016-17ನೇ ಸಾಲಿನಲ್ಲಿ 6.37 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅಂದಿನ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿದ್ದರು. ಅಂದು ಪ್ರಾರಂಭವಾದ ಕಾಮಗಾರಿ ಈ ವರೆಗೂಪೂರ್ಣಗೊಂಡಿಲ್ಲ. ಕೈಗೆತ್ತಿಕೊಂಡ ಕಾಮಗಾರಿಗಳು ಹಾಳಾಗಿದ್ದು, ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ.
Related Articles
Advertisement
ಗುತ್ತಿಗೆದಾರರು ಮಾಡುವ ಪ್ರಲಾಪಕ್ಕೆ ಶಾಲೆ ಮಕ್ಕಳು ಸಹ ಶಾಲೆ ಮುಂದಿನ ರಸ್ತೆ ಬದಿಗೆ ಇಂಟರಲಾಕ್ ಜೋಡಣೆ ಮಾಡಿಕೊಳ್ಳುತ್ತಿರುವುದು ವ್ಯವಸ್ಥೆ ಲೋಪಕ್ಕೆ ಹಿಡಿದ ಕೈಗನ್ನಡಿ. ಸರ್ಕಾರಗಳು ಕಚ್ಚಾರಸ್ತೆ ಮುಕ್ತ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿ, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕೆಂದು ಗುತ್ತಿಗೆದಾರರಿಗೆ ನಿಯಮ ಹೇರಿದರೂ ಸಹ ಗುತ್ತಿಗೆದಾರರು ಕಮೀಷನ್ ಆಮಿಷಕ್ಕಾಗಿ ಮತ್ತೂಬ್ಬರಿಗೆ ಕಾಮಗಾರಿ ನೀಡುವ ಮೂಲಕ ಅಭಿವೃದ್ಧಿ ಹಿನ್ನಡೆಗೆ ಕಾರಣರಾಗುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿವೆ. ಅವ್ಯವಸ್ಥೆ ಆಗರವಾಗಿರುವ ಗಜೇಂದ್ರಗಡ ಅಭಿವೃದ್ಧಿ ಕುರಿತು ಕೂಡಲೇ ಜಿಲ್ಲಾ ಧಿಕಾರಿ ಮತ್ತು ಜಿಲ್ಲಾ ಯೋಜನಾ ನಿರ್ದೇಶಕರು ಪಟ್ಟಣಕ್ಕೆ ಭೇಟಿ ನೀಡಿ, ಅರ್ಧಕ್ಕೆ ನಿಂತಿರುವ ಕಾಮಗಾರಿ ಕುರಿತು ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
-ಡಿ.ಜಿ. ಮೋಮಿನ್