ಕಾರವಾರ: ಇಲ್ಲಿನ ನಗರಸಭೆಯ ನೂತನ ಕಟ್ಟಡ 1.60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಬುನಾದಿ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಶುಕ್ರವಾರ ಸಂಜೆ ವೀಕ್ಷಿಸಿದರು.
Advertisement
ನಗರಸಭೆ ಪೌರಾಯುಕ್ತ ಎಸ್.ಯೋಗೇಶ್ವರ, ಎಂಜಿನಿಯರ್ ಮೋಹನ್ ರಾಜ್ ಇದ್ದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಇದೇ ವೇಳೆ ನೂತನವಾಗಿ ನಿರ್ಮಿಸುತ್ತಿರುವ ಮೀನು ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿಯನ್ನು ಸಹ ಜಿಲ್ಲಾಧಿಕಾರಿ ವೀಕ್ಷಿಸಿದರು. ಮತ್ತು ಕಟ್ಟಡದ ನೀಲನಕಾಶೆಯಂತೆ ಕಾಮಗಾರಿ ಮಾಡಲು ಅಡ್ಡಿಯಾಗಿರುವ ಸಂಗತಿಗಳ ವಿವರ ಪಡೆದರು. ಅಲ್ಲದೇ ನೂತನ ಕಟ್ಟಡ ವಿಸ್ತರಣೆಗೆ 8 ಅಂಗಡಿಕಾರರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವ ಕಾರಣಗಳು ಮತ್ತು ಅದಕ್ಕೆ ಮುಂದಿನ ಕ್ರಮಗಳ ಮಾಹಿತಿಯನ್ನು ನಗರಸಭೆಯ ಅಧಿಕಾರಿಗಳಿಂದ ಪಡೆದರು.