Advertisement

ಆಳಂದ ಪುರಸಭೆ ಬಜೆಟ್‌; ಆಸ್ತಿ ತೆರಿಗೆ ಹೆಚ್ಚಳ

12:49 PM Mar 22, 2022 | Team Udayavani |

ಆಳಂದ: ಪುರಸಭೆಯಿಂದ 2022-23ನೇ ಸಾಲಿಗೆ ಆಡಳಿತ ಮಂಡಳಿ ಅಧ್ಯಕ್ಷೆ ರಾಜಶ್ರೀ ಎಸ್‌. ಖಜೂರಿ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರು ಒಕ್ಕೂರಲಿನಿಂದ ಆಯವ್ಯಯ 47,17,364ರೂ. ಉಳಿತಾಯ ಬಜೆಟ್‌ ಮಂಡಿಸಲಾಯಿತು.

Advertisement

ಒಟ್ಟು 18,79,82,364ರೂ. ಆದಾಯ ದಲ್ಲಿ 18,32,65,000ರೂ. ಖರ್ಚು ಮಾಡಲಾಗುತ್ತಿದ್ದು, 47,17,364 ಉಳಿತಾ ಯವಾಗಲಿದೆ. ನಗರದಲ್ಲಿರುವ ಆಸ್ತಿ ತೆರಿಗೆಗೆ ಸಂಬಂಧಿ ಸಿದಂತೆ ಖಾಲಿ ನಿವೇಶನಗಳಿಗೆ ಶೇ. 3, ಮನೆಗಳಿಗೆ ಶೇ. 4ರಷ್ಟು ತೆರಿಗೆ ಹೆಚ್ಚಿಸಿ, ಪರಿಷ್ಕರಿಸಲಾಯಿತು. ಆರಂಭದಲ್ಲಿ ಕೆಲ ಸದಸ್ಯರು ತೆರಿಗೆ ಹೆಚ್ಚಳಕ್ಕೆ ವಿರೋ ಧಿಸಿದರಾದರೂ ಸರ್ಕಾರದ ನಿಯಮ ಪಾಲನೆ ಅಗತ್ಯವಾಗಿದೆ ಎಂದು ಮುಖ್ಯಾಧಿಕಾರಿ ವಿಜಯ ಮಹಾಂತೇಶ ಸಭೆಯ ಗಮನಕ್ಕೆ ತಂದರು.

ಆಗ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಉಪಾಧ್ಯಕ್ಷ ಈರಣ್ಣಾ ಹತ್ತರಕಿ ಹಾಜರಿದ್ದರು. ಬಜೆಟ್‌ ಕುರಿತು ಸದಸ್ಯ ಶ್ರೀಶೈಲ ಪಾಟೀಲ, ವೈಹಿದ್‌ ಜರ್ದಿ, ಲಕ್ಷ್ಮಣ ಝಳಕಿಕರ್‌, ಆಸೀಫ್‌ ಚೌಸ್‌, ಸೋಮು ಹತ್ತರಕಿ, ಮೃತ್ಯುಂಜಯ ಆಲೂರೆ ಮತ್ತಿತರರು ಚರ್ಚಿಸಿದರು.

ಹಿಂದಿನ ಸಭೆ ನಡಾವಳಿಗಳ ಕುರಿತು ಚರ್ಚಿಸಬೇಕು. ವಾರ್ಡ್‌ 4ರಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಗೆ ಮೀಸಲಿಟ್ಟ ಅನುದಾನ ಎಲ್ಲಿದೆ ಎಂದು ಸದಸ್ಯ ಶ್ರೀಶೈಲ ಪಾಟೀಲ ಪ್ರಶ್ನೆಗೆ ಕಿರಿಯ ಅಭಿಯಂತರ ಜಗದೀಶ, ಮುಖ್ಯಾಧಿಕಾರಿ ಕಂಗಾಲಾದರು. ಈ ಕುರಿತು ಸ್ಪಷ್ಟಪಡಿಸಿ ಬಜೆಟ್‌ ಮಂಡಿಸಬೇಕು ಎಂದು ಪಟ್ಟುಹಿಡಿದಾಗ ಮಧ್ಯ ಪ್ರವೇಶಿಸಿದ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ ಮೇಲೆ ಸಭೆ ಆರಂಭಿಸಲಾಯಿತು.

ಸದಸ್ಯ ಲಕ್ಷ್ಮಣ ಝಳಕಿಕರ್‌ ಅವರು 24.10ರ ಪುರಸಭೆ ಅನುದಾನದ ಎಸ್ಸಿಎಸ್ಟಿ, 7.25ರ ಹಾಗೂ ಒಬಿಸಿ ಮತ್ತು ಶೇ. 5ರಂತೆ ಅಂಗವಿಕಲರ ಖಾತೆ ತೆರೆದು ನಿಯಮದಂತೆ ಶೇಖಡವಾರು ಹಣ ಮೀಸಲಿಡಬೇಕು ಎಂದು ಒತ್ತಾಯಿಸಿದರು.

Advertisement

ಇದೇ ವೇಳೆ ಪುರಸಭೆ ವಾಹನಗಳ ವಿಮೆ, ಪಾಸಿಂಗ್‌ ಚಾಲಕರ ಪರವಾನಗಿ ಇಲ್ಲದೇ ವಾಹನ ಚಲಿಸಬಾರದು. ಕೂಡಲೆ ಈ ಕೆಲಸವಾಗಬೇಕು. ಸ್ವಚ್ಛತೆ, ಚರಂಡಿ ನಿರ್ಮಾಣ, ಹುಚ್ಚು ನಾಯಿಗಳ ಹಾವಳಿ ತಡೆ ಹಾಗೂ ಬೀದಿ ದನಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ ಮಾತನಾಡಿ, ಈ ಕುರಿತು ಅಧ್ಯಕ್ಷರ ಸಮ್ಮುಖದಲ್ಲಿ ಸಿಬ್ಬಂದಿ ಸಭೆ ಕರೆದು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿ ವಾರ್ಡ್‌ಗಳ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಸಿಬ್ಬಂದಿ ಅಂಬರಾಯ ಲೋಕಾಣೆ ಬಜೆಟ್‌ ವರದಿ ಓದಿದರು. ಸದಸ್ಯ ಶಿವಪುತ್ರ ನಡಗೇರಿ, ದೋಂಡಿಬಾ ಸಾಳುಂಕೆ, ಆಸ್ಮಿತಾ ಚಿಟಗುಪಕರ್‌, ಸಂತೋಷ ಹೂಗಾರ, ವಿಜಯಲಕ್ಷ್ಮ ಷಣ್ಮುಖ, ಶಭಾನಾಬೇಗಂ ಮೀರು, ಕನ್ಯಾಕುಮಾರಿ ಪೂಜಾರಿ, ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್‌, ಲೆಕ್ಕಿಗ ಪಲ್ಲವಿ ಕುಲಕರ್ಣಿ, ನೈರ್ಮಲ್ಯ ನಿರೀಕ್ಷಕ ಲಕ್ಷ್ಮಣ ತಳವಾರ, ರಾಘವೇಂದ್ರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next