Advertisement
ಮುಂಡೂರು ಸ.ಉ.ಹಿ.ಪ್ರಾ. ಶಾಲೆ ಯಲ್ಲಿ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ತರಗತಿ “ಗುಬ್ಬಚ್ಚಿ ಕಲರವ’ ಉದ್ಘಾಟಿಸಿ ಅವರು ಮಾತನಾಡಿದರು. ಮುಂಡೂರಿನಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಭಯಪಡುವ ಅಗತ್ಯವಿಲ್ಲ. ಇಲ್ಲಿ ಸಾಕಷ್ಟು ದಾನಿಗಳಿದ್ದಾರೆ. ಇಲ್ಲಿನ ಎಸ್‌ಡಿಎಂಸಿ ಅಧ್ಯಕ್ಷರೂ ಶಾಲೆಗಾಗಿ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಮುಂಡೂರು ಶಾಲೆಗೆ ನನ್ನಿಂದ ಸಾಧ್ಯವಾದಷ್ಟು ಅನುದಾನವನ್ನು ಒದಗಿಸಿದ್ದೇನೆ ಎಂದರು.
ಕೆಯ್ಯೂರು ಪ್ರೌಢಶಾಲೆಯ ಮುಖ್ಯಗುರು ವಿನೋದ್ ಕುಮಾರ್ ಕೆ.ಎಸ್. ಮಾತನಾಡಿ, ಸರಕಾರಿ ಶಾಲೆಗಳು ಇದೀಗ ಹೊಸ ಹೆಜ್ಜೆ ಇಡುತ್ತಿರುವುದು ಖುಷಿಯ ವಿಚಾರ. ಸರಕಾರಿ ಶಾಲೆಗಳಲ್ಲಿ ಕೆಲವು ಕಡೆಗಳಲ್ಲಿ ಪಬ್ಲಿಕ್ ಸ್ಕೂಲ್ ಆರಂಭಗೊಂಡಿದೆ. ಎಲ್‌ಕೆಜಿ ಯುಕೆಜಿ ತರಗತಿಗಳೂ ಆರಂಭಗೊಳ್ಳುತ್ತಿರುವುದರಿಂದ ಮಕ್ಕಳಿಗೆ ವರದಾನವಾಗಿದೆ. ಮಕ್ಕಳ ಕಲಿಕಾ ವಿಚಾರಗಳ ಬಗ್ಗೆ ಪೋಷಕರು ಗಮನ ಕೊಡಬೇಕು ಎಂದರು. ತಾಲೂಕು ಬಿಐಆರ್‌ಪಿ ತನುಜಾ, ನರಿಮೊಗರು ಸಿಆರ್‌ಪಿ ದೇವಪ್ಪ, ಮುಂಡೂರು ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ವೀಣಾ, ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣ್ಣರಾಯ ಬನರಿ, ಶಾಲಾ ಮುಖ್ಯಗುರು ಶಶಿಕಲಾ ಉಪಸ್ಥಿತರಿದ್ದರು. ಪ್ರಮುಖರಾದ ಬಾಲಕೃಷ್ಣ ಕಣ್ಣರಾಯ, ವಾಸುದೇವ ಸಾಲ್ಯಾನ್ ಹಾಗೂ ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Related Articles
Advertisement
ಸ್ಪರ್ಧಾತ್ಮಕ ಶಿಕ್ಷಣಕ್ಕೆ ಆದ್ಯತೆಗ್ರಾಮೀಣ ಭಾಗದ ಮಕ್ಕಳಿಗೆ ಸರಕಾರಿ ಶಾಲೆಯಲ್ಲೇ ಎಲ್‌ಕೆಜಿ ಯುಕೆಜಿ ತರಗತಿಗಳನ್ನೊಳಗೊಂಡ ಗುಣಮಟ್ಟದ ಶಿಕ್ಷಣ ದೊರಕಿಸುವ ಹಾಗೂ ಸ್ಪರ್ಧಾತ್ಮಕ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಮುಂಡೂರು ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿದ್ದೇವೆ. ಎಸ್‌ಡಿಎಂಸಿ, ಹೆತ್ತವರು ಹಾಗೂ ಊರ ದಾನಿಗಳ ಸಹಕಾರದೊಂದಿಗೆ ಇಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಲಾಗಿದ್ದು, ಈಗಾಗಲೇ 15 ಮಕ್ಕಳು ದಾಖಲಾತಿ ಮಾಡಿಕೊಂಡಿದ್ದಾರೆ.
– ರಮೇಶ್ ಗೌಡ ಪಜಿಮಣ್ಣು, ಅಧ್ಯಕ್ಷರು, ಎಸ್‌ಡಿಎಂಸಿ, ಮುಂಡೂರು ಶಾಲೆ