Advertisement

ಮುಂಡ್ಕೂರು ಗ್ರಾ.ಪಂ.: ವಿಶೇಷ ಗ್ರಾಮಸಭೆ

01:45 AM Jul 11, 2017 | Team Udayavani |

ಬೆಳ್ಮಣ್‌: 2017-18ನೇ ಸಾಲಿನ ಪ್ರಥಮ ಹಂತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಮುಂಡ್ಕೂರು ಗ್ರಾ.ಪಂ.ನಲ್ಲಿ ಮುಂಡ್ಕೂರು ಸಪಳಿಗ ಸಭಾಭವನದಲ್ಲಿ  ಸೋಮವಾರ ನಡೆಯಿತು.

Advertisement

ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ತಾಲೂಕು ಸಂಚಾಲಕ ಸುಕುಮಾರ್‌ ಬಿ. ಉಪಸ್ಥಿತರಿದ್ದು  ಮುಂಡ್ಕೂರಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 47 ಕಾಮಗಾರಿಗಳು ನಡೆದಿವೆಯೆಂದರು.ಯೋಜನೆಯ ಹೆಸರಲ್ಲಿ ನಡೆದ ವಿವಿಧ ಕಾಮಗಾರಿಗಳ  ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಕೆಲವೊಂದು ಕಾಮಗಾರಿಗಳಿಗೆ ನಾಮ ಫಲಕ ಅಳವಡಿಸಿಲ್ಲ, ಕಾರ್ಡ್‌ದಾರರು ಭಾವಚಿತ್ರ ಲಗತ್ತಿಸಿಲ್ಲ, ಒಂದು ಕುಟುಂಬಕ್ಕೆ 91 ದಿನ ಕೆಲಸ ನೀಡ‌ಲಾಗಿದೆ ಹಾಗೂ ಜೆಸಿಬಿ ಬಳಸಿ ಕೆಲಸ ಮಾಡಲಾಗಿದೆ ಎಂದು ಒಂದಿಷ್ಟು ಗೊಂದಲ ಸೃಷ್ಟಿಸಿದರು.ಮುಲ್ಲಡ್ಕ ಹಾಗೂ ಸಚ್ಚೇರಿಪೇಟೆ ಕಜೆಯಲ್ಲಿ ಕಳೆದ ವರ್ಷ ಜಲ ಮರುಪೂರಣದ ಬಗ್ಗೆ ನಡೆದ ಕಾಮಗಾರಿಗಳು ಮಾನವ ಶಕ್ತಿಯ ಬಳಕೆಯ ಬದಲಾಗಿ ಜೆಸಿಬಿ ಬಳಕೆಯಿಂದಾಗಿದೆಯೆಂದು ವಾದಿಸಿದರು. ಮುಂಡ್ಕೂರಿನಲ್ಲಿ ನಡೆದ ಕಾಮಗಾರಿಗಳ ವಿವರ ಹಾಗೂ ನ್ಯೂನತೆಗಳ ಬಗ್ಗೆ  ಬೆಳಕು ಚೆಲ್ಲಿದ ಅವರು ಕಾಮಗಾರಿ ಹೇಗಿರಬೇಕು ಮತ್ತು ಯಾವ ರೀತಿಯಲ್ಲಿ ನಡೆಸಬೇಕು ಎಂಬ ಬಗ್ಗೆಯೂ ಮಾಹಿತಿ ನೀಡಿದರು.

ಈ ಬಗ್ಗೆ ಪೂರಕ ಉತ್ತರ ನೀಡಿದ ಪಿಡಿಒ  ರಮೇಶ್‌ ಎಸ್‌., ಮುಂಡ್ಕೂರು ಪಂಚಾಯತ್‌ ವ್ಯಾಪ್ತಿಯಲ್ಲಿ ಯೋಜನೆಯ ಯಾವುದೇ ಕಾಮಗಾರಿಗಳು ಯಂತ್ರಗಳ ಮೂಲಕ ನಡೆದಿಲ್ಲ, ಬದಲಾಗಿ  ಕೂಲಿಯಾಳುಗಳ ಮೂಲಕವೇ ನಡೆದಿದೆಯೆಂದರು.

ಬೆಳ್ಮಣ್‌ ವಲಯ ಶಿಕ್ಷಣ ಸಂಯೋಜಕ ಕೃಷ್ಣ ಎ. ನೋಡೆಲ್‌ ಅಧಿಕಾರಿಯಾಗಿದ್ದು ಆಧ್ಯಕ್ಷತೆ ವಹಿಸಿದ್ದರು.
ಪಂಚಾಯತ್‌ ಆಧ್ಯಕ್ಷೆ ಶುಭಾ ಪಿ. ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ತಾಲೂಕು ಸಹಾಯಕ ಅಭಿಯಂತರ ಲೋಕೇಶ್‌, ಅರಣ್ಯ ಇಲಾಖೆಯ ಶಂಕರ್‌, ಪಂಚಾಯತ್‌ ಸದಸ್ಯರು, ಕಾರ್ಡ್‌ದಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next