Advertisement

ಮುಂದಿನ ನಿಲ್ದಾಣ ಹತ್ತಿರವಿದೆ…ನ.29ಕ್ಕೆ ತೆರೆಗೆ

09:42 AM Nov 23, 2019 | mahesh |

“ಈ ಚಿತ್ರ ಮಾಡೋಕೆ ಕಾರಣ, ಭಾಷೆ ಮೇಲಿರುವ ಪ್ರೀತಿ ಮತ್ತು ಈ ಮಣ್ಣಿನ ಮೇಲಿರುವ ಅಭಿಮಾನ…’

Advertisement

-ಹೀಗೆ ಹೇಳುತ್ತಾ ಹೋದರು ನಿರ್ಮಾಪಕ ಮುರಳೀಧರ್‌. ಅವರು ಹೇಳಿದ್ದು ಕೋಸ್ಟಲ್‌ ಬ್ರಿಜ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಮುಂದಿನ ನಿಲ್ದಾಣ’ ಚಿತ್ರದ ಬಗ್ಗೆ. ಹೌದು, ಈಗಾಗಲೇ ಚಿತ್ರ ಮುಗಿದಿದ್ದು, ನವೆಂಬರ್‌ 29 ರಂದು ಬಿಡುಗಡೆಯಾಗುತ್ತಿದೆ.

ತಮ್ಮ ತಂಡದ ಜೊತೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲು ಪತ್ರಕರ್ತರ ಮುಂದೆ ಆಗಮಿಸಿದ್ದರು  ಮುರಳೀಧರ್‌. ಮೊದಲು ಮಾತಿಗಿಳಿದ ಮುರಳೀಧರ್‌, ಹೇಳಿದ್ದಿಷ್ಟು. “ಇದು ಒಂದು ವರ್ಷದ ಜರ್ನಿ. ಆರಂಭದಿಂದಲೂ ಚಿತ್ರಕ್ಕೆ ಪ್ರೋತ್ಸಾಹ, ಬೆಂಬಲ ಸಿಗುತ್ತಲೇ ಇದೆ. ನನ್ನ ಪ್ರಕಾರ ಒಳ್ಳೆಯ ಸಿನಿಮಾ ಮಾಡೋದು ಸಾಹಸ. ಅದನ್ನು ಪ್ರತಿಯೊಬ್ಬರಿಗೆ ತಲುಪಿ ಸುವುದು ಇನ್ನೊಂದು ಸಾಹಸ. ಪತ್ರಕರ್ತರು, ಮಾಧ್ಯಮದ ಸಹಾಯದಿಂದ “ಮುಂದಿನ ನಿಲ್ದಾಣ’ ಸಾಕಷ್ಟು ಗುರುತಿಸಿ ಕೊಂಡಿದೆ. ನಾಲ್ಕು ಭಾಗದಿಂದ
ನಾಲ್ವರು ನಿರ್ಮಾಪಕರು ಬಂದು ಚಿತ್ರ ನಿರ್ಮಿಸಿದ್ದೇವೆ.

ಕನ್ನಡ ಮೇಲಿರುವ ಪ್ರೀತಿಗಾಗಿ ಚಿತ್ರ ಮಾಡಿದ್ದೇವೆ. ಈ ಮೂಲಕ ಪ್ರತಿಭಾವಂತರಿಗೊಂದು ವೇದಿಕೆ ಕಲ್ಪಿಸಿ  ಕೊಟ್ಟಿದ್ದೇವೆ. ನಮ್ಮ ಸಂಸ್ಥೆ ಮೂಲಕ ವಿನಯ್‌ ಭಾರಧ್ವಜ್‌ ಎಂಬ ಪ್ರತಿಭಾವಂತ  ನಿರ್ದೇಶಕನನ್ನು ಪರಿಚಯಿಸಿದ್ದು ಖುಷಿಯಾಗಿದೆ. ಬಿಡುಗಡೆ ಮುನ್ನವೇ ಚಿತ್ರದ ಹಾಡುಗಳು
ಮೆಚ್ಚುಗೆ ಪಡೆದಿವೆ. ಟೀಸರ್‌, ಟ್ರೇಲರ್‌ ಕೂಡ ಸಿನಿಮಾದ ಕುತೂಹಲ ಮೂಡಿಸಿವೆ’ ಎಂದರು ಮುರಳೀಧರ್‌.

ನಿರ್ದೇಶಕ ವಿನಯ್‌ ಭಾರಧ್ವಜ್‌ ಅವರಿಗೆ ಇದು ಮೊದಲ ಅನುಭವ. ತಮ್ಮ ಚಿತ್ರದ ಬಗ್ಗೆ ಅವರಿಗೆ ಸಾಕಷ್ಟು ನಿರೀಕ್ಷೆಯೂ ಇದೆ. ಅದಕ್ಕೆ ಕಾರಣ, ಈಗಾಗಲೇ ಚಿತ್ರದ ಹಾಡುಗಳು, ಟೀಸರ್‌ ಮತ್ತು ಟ್ರೇಲರ್‌ಗೆ ಸಿಗುತ್ತಿರುವ ಮೆಚ್ಚುಗೆ. “ಇಲ್ಲಿ ಪ್ರತಿಯೊಬ್ಬರೂ ತಮ್ಮ ಎಫ‌ರ್ಟ್‌ ಹಾಕಿದ್ದಾರೆ. ಕಥೆಗೆ ಪೂರಕವಾಗಿಯೇ ಹಾಡುಗಳಿವೆ. ಮಸಾಲ ಕಾಫಿ ತಂಡ ಸಂಗೀತ ಸಂಯೋಜಿಸಿರುವ “ಮನಸೇ ಮಾಯ’ ಹಾಗೂ ವಾಸುಕಿ ವೈಭವ್‌ ಸಂಯೋಜಿಸಿ ಹಾಡಿರುವ “ಇನ್ನೂ ಬೇಕಾಗಿದೆ’ ಹಾಡುಗಳು ಹಿಟ್‌ ಆಗಿವೆ. ಇನ್ನು, ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಸಲ ಶಾರುಖ್‌ ಖಾನ್‌ ಅವರ ರೆಡ್‌ ಚಿಲ್ಲೀಸ್‌ ಸ್ಟುಡಿಯೋದಲ್ಲಿ ಚಿತ್ರದ ಬಣ್ಣ ವಿನ್ಯಾಸ ಮಾಡಲಾಗಿದೆ. ಚಿತ್ರವನ್ನು ಕಾರ್ತಿಕ್‌ ಗೌಡ ವಿತರಣೆ ಮಾಡುತ್ತಿರುವುದು ಇನ್ನೊಂದು ವಿಶೇಷ ಎಂದರು ವಿನಯ್‌.

Advertisement

ನಾಯಕ ಪ್ರವೀಣ್‌ ತೇಜ್‌, “ನಮ್ಮ ಮಾತುಗಳಿಗಿಂತ ಸಿನಿಮಾ ಮಾತಾಡಬೇಕು. ಈಗಾಗಲೇ ಹಾಡು,
ಟೀಸರ್‌ ನೋಡಿದವರಿಂದ ಮೆಚ್ಚುಗೆ ಸಿಕ್ಕಿದೆ. ಒಂದು ಗಂಭೀರವಾದ ಮತ್ತು ಹಾರ್ಡ್‌ವರ್ಕ್‌ ಮಾಡುವ
ತಂಡದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಇಲ್ಲಿ ಸಿಕ್ಸ್‌ ಪ್ಯಾಕ್‌ ಮಾಡಿದ್ದು ವಿಶೇಷ. ಎಲ್ಲರೂ ಗ್ಲಾಮರಸ್‌ ಆಗಿ ಕಾಣಿಸುತ್ತಿದ್ದೀಯ ಎಂಬ ಕಾಮೆಂಟ್‌ ಮಾಡುತ್ತಿದ್ದಾರೆ. ಒಳ್ಳೆಯ ತಂಡ ಇದ್ದಾಗ, ಒಳ್ಳೆಯ ಪ್ರಯತ್ನ ಮಾಡಿದಾಗ ನಾವು ಶ್ರಮಪಡುವುದರಲ್ಲಿ ಸಾರ್ಥಕತೆ ಇದೆ. ಇನ್ನು, ನಾಲ್ವರು ನಿರ್ಮಾಪಕರ ಸಹಕಾರದಿಂದ ಇಂಥದ್ದೊಂದು ಚಿತ್ರ ಆಗಲು ಕಾರಣವಾಗಿದೆ. ನೆದೆರ್‌ಲೆಂಡ್‌, ಬೆಲ್ಜಿಯಂ, ಹಿಮಾಚಲ್‌ ಪ್ರದೇಶ ಸೇರಿದಂತೆ ಇತರೆ ಸುಂದರ ತಾಣಗಳು ಚಿತ್ರದ ಸೊಬಗನ್ನು ಹೆಚ್ಚಿಸಿವೆ. ಚಿತ್ರದ ನಿಜವಾದ ಹೀರೋ ನಮ್ಮ ಛಾಯಾಗ್ರಾಹಕ ಅಭಿಮನ್ಯು ಅಂದರು’ ಪ್ರವೀಣ್‌ ತೇಜ್‌.

ರಾಧಿಕಾ ನಾರಾಯಣ್‌, “ನನ್ನ ಲೈಫ್ನ “ಮುಂದಿನ ನಿಲ್ದಾಣ’ ಇದು ಎನ್ನಬಹುದು. ಚಿತ್ರದೊಳಗಿನ ನನ್ನ ಪಾತ್ರ, ಲುಕ್‌, ಕಾಸ್ಟೂಮ್‌ ಎಲ್ಲವೂ ವಿಶೇಷವಾಗಿದೆ. ಇಂಥದ್ದೊಂದು ಸಿನಿಮಾ ಮಾಡೋಕೆ ನಿರ್ಮಾಪಕರ ಸಹಕಾರ ಮುಖ್ಯ. ನಿರ್ದೇಶಕರು ಎಲ್ಲಾ ವಿಭಾಗದಲ್ಲೂ ತೊಡಗಿಕೊಂಡಿದ್ದಾರೆ. ಉತ್ತಮ ತಂಡದಜೊತೆ ಕೆಲಸ ಮಾಡಿದ್ದು ಮರೆಯದ ಅನುಭವ ಅಂದರು ಅವರು. ಮತ್ತೂಬ್ಬ ನಾಯಕಿ ಅನನ್ಯಾ ಕಶ್ಯಪ್‌ ಅವರಿಲ್ಲಿ ಸಾಕಷ್ಟು ತಿಳಿದುಕೊಳ್ಳಲು ಸಾಧ್ಯವಾಗಿದೆಯಂತೆ. ಚಿತ್ರದಲ್ಲಿ ಸಾಕಷ್ಟು ನಟನೆಗೆ ಅವಕಾಶವಿದೆ. ನಾಲ್ವರು ನಿರ್ಮಾಪಕರು “ಮುಂದಿನ ನಿಲ್ದಾಣ’ ಎಂಬ ಕಾರಿಗೆ ನಾಲ್ಕು ಚಕ್ರಗಳಿದ್ದಂತೆ. ಅವರಿಲ್ಲದೆ ಈ ಕಾರು ಚಲಿಸುವುದಿಲ್ಲ. ಅವರು ಜೊತೆ ಇದ್ದುದ್ದಕ್ಕೆ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿರುವ ನಂಬಿಕೆ ನನಗಿದೆ’ ಎಂದರು ಅನನ್ಯಾ ಕಶ್ಯಪ್‌. ದತ್ತಣ್ಣ ಅವರು ಈ ಹಿಂದೆಯೇ ಈ ಚಿತ್ರದ ರಫ್ ಕಟ್‌ ನೋಡಿ, ಆಗಲೇ ಈ ಚಿತ್ರ ಹೊಸತನದಿಂದ ಕೂಡಿದೆ ಎಂದೆನಿಸಿತಂತೆ. ಇಲ್ಲಿ ಹೊಸಬರು ಹೊಸ ಆಲೋಚನೆಯಿಂದ ಚಿತ್ರ ಮಾಡಿದ್ದಾರೆ. ಚಿತ್ರ ಎಲ್ಲರಿಗೂ ಇಷ್ಟ ಆಗುತ್ತೆ ಅಂದರು ದತ್ತಣ್ಣ.

Advertisement

Udayavani is now on Telegram. Click here to join our channel and stay updated with the latest news.

Next