Advertisement

Mundgod: ಕೆಲ ದಿನಗಳಿಂದ ನಿರಂತರ ಮಳೆ; ಮನೆಗೋಡೆ ಕುಸಿತ; ಮಹಿಳೆ ಗಂಭೀರ ಗಾಯ

01:20 PM Aug 28, 2024 | Team Udayavani |

ಮುಂಡಗೋಡ: ತಾಲೂಕಿನಾದ್ಯಂತ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಗೋಡೆ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಲಕೇರಿ ಪ್ಲಾಟ್ ಹೊನ್ನಿಕೊಪ್ಪದಲ್ಲಿ ಆ.28ರ ಬುಧವಾರ ನಡೆದಿದೆ.

Advertisement

ತಾಲೂಕಿನ ಕಲಕೇರಿ ಪ್ಲಾಟ್ ಹೊನ್ನಿಕೊಪ್ಪದ ಅಟೆಲ್ ಸಾಬ್ ಅತ್ತಾರ್ ಎಂಬವರಿಗೆ ಸೇರಿದ ಮನೆಗೋಡೆ ನಿರಂತರ ಮಳೆ ಸುರಿಯುತ್ತಿರುವ ಕಾರಣ ಕುಸಿದು ಬಿದ್ದಿದೆ.

ಈ ಪರಿಣಾಮ ಪಕ್ಕದ ಮನೆಯ ಸಾತವ್ವ ಬೆಂಗಳೂರ (50) ಗಂಭೀರ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದು ನೋಡಲ್ ಅಧಿಕಾರಿ ಪ್ರದೀಪ ಭಟ್, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ಗಂಭೀರ ಗಾಯಗೊಂಡ ಮಹಿಳೆಯನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಯ ಕಿಮ್ಸ್‌ಗೆ ಕರೆದೊಯ್ಯುಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next