Advertisement

ಮುಂಡಾಜೆ ಆರೋಗ್ಯ ಉಪ ಕೇಂದ್ರ; ನ. 7ರಿಂದ ಸಾರ್ವಜನಿಕ ಸೇವೆ ಒದಗಿಸುವಂತೆ ಆದೇಶ

11:05 AM Nov 07, 2022 | Team Udayavani |

ಬೆಳ್ತಂಗಡಿ: ರಾ.ಹೆ. 73ರ ಸಮೀಪದ ಮುಂಡಾಜೆ ಸಿಎ ಬ್ಯಾಂಕ್‌ನ ಹಳೆ ಕೇಂದ್ರ ಕಚೇರಿಯ ಬಳಿ ಸುಮಾರು 30 ಲಕ್ಷ ರೂ. ಅನುದಾನದಲ್ಲಿ 1,200 ಚದರಡಿ ವಿಸ್ತೀರ್ಣದ ಕಟ್ಟಡದಲ್ಲಿ ರೋಗಿಗಳ ಪ್ರಥಮ ಚಿಕಿತ್ಸೆಗೆ ಸಿದ್ಧಗೊಂಡಿದ್ದ ಮುಂಡಾಜೆ ಆರೋಗ್ಯ ಉಪಕೇಂದ್ರ ರೋಗಿಗಳ ಸೇವೆಗೆ ಲಭ್ಯವಾಗುವ ಹಂತದಲ್ಲಿದೆ.

Advertisement

ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡು ಸೇವೆಗೆ ತೆರೆದುಕೊಳ್ಳದೆ ಇದ್ದ ಮುಂಡಾಜೆ ಆರೋಗ್ಯ ಉಪ ಕೇಂದ್ರದಲ್ಲಿ ನ. 7ರಿಂದ ಸಾರ್ವಜನಿಕ ಸೇವೆ ಒದಗಿಸುವಂತೆ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ| ಜಗದೀಶ್‌ ಆದೇಶಿಸಿದ್ದಾರೆ.

ಸುದಿನ ವರದಿ

ಕಟ್ಟಡ ರಚನೆಗೊಂಡರೂ ಉದ್ಘಾಟನೆ ಭಾಗ್ಯವಿಲ್ಲದೆ ಪಾಳು ಬೀಳುವಂತಾಗಿರುವ ಕುರಿತು “ಸುದಿನ’ ಈ ಹಿಂದೆ ವರದಿ ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಈ ವಿಚಾರವಾಗಿ ಹಿಂದಿನ ಡಿಸಿ ಡಾ| ರಾಜೇಂದ್ರ ಕೆ.ವಿ. ಕೋವಿಡ್‌ ಸಂದರ್ಭದಲ್ಲಿ ಕಾರ್ಯಾರಂಭಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ ಇದೀಗ ಡಿಎಚ್‌ಒ ಡಾ| ಜಗದೀಶ್‌, ಡಿಪಿಎಂ ಅಶ್ರಫ್‌, ತಾ| ಡಿಎಚ್‌ಒ ಪ್ರಕಾಶ್‌ ಕಟ್ಟಡವನ್ನು ಪರಿಶೀಲಿಸಿ ಕೂಡಲೇ ಸೇವೆಗೆ ಸಿದ್ಧಪಡಿಸುವಂತೆ ಮುಂಡಾಜೆ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿಗೆ ಸೂಚಿಸಿದ್ದಾರೆ.

ಕೇಂದ್ರದಿಂದ ಅನುಕೂಲ ಕಿರಿಯ ಆರೋಗ್ಯ ಸಹಾಯಕಿಯರು ಹೊರರೋಗಿಗಳಿಗೆ ಚಿಕಿತ್ಸೆ ಬಗ್ಗೆ ಮಾಹಿತಿ, ಇಲಾಖೆ ಸೂಚಿಸಿದ ಔಷಧಗಳನ್ನು ನೀಡಬಹುದಾಗಿದೆ. ಹೊರ ಊರುಗಳಿಂದ ಬರುವ, ಅಗತ್ಯವಿರುವ ಆರೋಗ್ಯ ಸಹಾಯ ಕರಿಗೆ ತಂಗಲು ಪ್ರತ್ಯೇಕ ಕೊಠಡಿಯೂ ಇದೆ. ಶುಚಿತ್ವ, ಇತರ ವ್ಯವಸ್ಥೆಗಳು ಮರು ನಿರ್ಮಾಣ ಆಗಬೇಕಿದ್ದು ಇದಕ್ಕೆ ಒಂದೆರಡು ದಿನ ಬೇಕಾಗುವ ಸಾಧ್ಯತೆ ಇದೆ.

Advertisement

ಪರಿಶೀಲಿಸಲಾಗಿದೆ: ಉಪಕೇಂದ್ರಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಲಾಗಿದೆ. ತತ್‌ ಕ್ಷಣ ಇಲ್ಲಿನ ವ್ಯವಸ್ಥೆಗಳನ್ನು ಸರಿಪಡಿಸಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಮುಂಡಾಜೆ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ವೈದ್ಯಾಧಿಕಾರಿಗೆ ಸೂಚಿಸಲಾಗಿದೆ. –ಡಾ| ಜಗದೀಶ್‌, ಡಿಎಚ್‌ಒ, ಆರೋಗ್ಯ ಇಲಾಖೆ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next