ಮುಂಡಗೋಡ: ತಾಲೂಕಿನಲ್ಲಿ ಹಂತ ಹಂತವಾಗಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಮುಂದಿನ ದಿನದಲ್ಲಿ ಗ್ರಾಮಾಂತರ ಪ್ರದೇಶದ ಕೆಲಭಾಗಗಳಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ.
Advertisement
ತಾಲೂಕಿನಾದ್ಯಂತ ರೈತರು, ಜನಸಾಮಾನ್ಯರು, ಪ್ರಾಣಿ, ಪಕ್ಷಿಜೀವ ಸಂಕುಲಗಳ ಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಬಿಸಿಲಿನತಾಪಮಾನದಿಂದ ಡ್ಯಾಂ, ಹಳ್ಳಗಳ ನೀರಿನ ಮೂಲಗಳು ಬತ್ತಿ ಬರಿದಾಗಿವೆ. ಇದರಿಂದ ಅಡಕೆ, ಬಾಳೆ, ಸೇರಿದಂತೆ ಇತರೆ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇದೀಗ ಬೆಳೆಗಳ ರಕ್ಷಣೆ ಸವಾಲಾಗಿ ಪರಿಣಮಿಸಿದೆ.
ತಾಲೂಕಿನ ಮೈನಳ್ಳಿ, ಕ್ಯಾತ್ನಳ್ಳಿ, ಇಂದೂರ, ಕೊಪ್ಪ, ಅಂದಲಗಿ, ಚವಡಳ್ಳಿ, ಮಲವಳ್ಳಿ, ಹುಲಿಹೊಂಡ, ಗುಂಜಾವತಿ, ಉಗ್ನಿಕೇರಿ, ಚವಡಳ್ಳಿ ಪ್ಲಾಟ್, ಮಲವಳ್ಳಿ ಪ್ಲಾಟ್, ಕೆಂದಲಗೇರಿ, ರಾಮಾಪುರ, ಶಿವಾಜಿನಗರ ಸೇರಿದಂತೆ ತಾಲೂಕಿನ 18 ಹಳ್ಳಿಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ.
Related Articles
Advertisement
ಪಟ್ಟಣದಲ್ಲಿ ಈಗಾಗಲೇ ಮೂರು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿತ್ತು. ಮೇ ಕೊನೆವರಿಗೆ ನೀರಿನ ಸಮಸ್ಯೆಯಿಲ್ಲ. ನೀರಿನ ಅಭಾವದಿಂದಾಗಿ ಇದೀಗ ನಿಯಮಿತವಾಗಿ ನೀರು ಪೂರೈಸುವ ಲಕ್ಷಣಗಳು ಕಂಡು ಬರುತ್ತಿದೆ.
ಮುಂದಿನ ದಿನಗಳಲ್ಲಿ 40 ಗ್ರಾಮ: ತಾಲೂಕಿನ 16 ಗ್ರಾಪಂದವರು ಈಗಾಗಲೆ ಕುಡಿಯುವ ನೀರಿನ ಸಮಸ್ಯೆ ಮುಂದಿನ ಏಪ್ರೀಲ್ ತಿಂಗಳು ಯಾವ ಯಾವ ಗ್ರಾಮಗಳಲ್ಲಿ ಎದುರಾಗಲಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಏಪ್ರೀಲ್‌ನಲ್ಲಿ ಹೊಸದಾಗಿ 40 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು, ಈ ಗ್ರಾಮಗಳಲ್ಲಿಯೂ ಖಾಸಗಿ ಬೋರ್‌ವೆಲ್ ಗಳನ್ನು ಗುರುತಿಸಿ ಇಡಲಾಗಿದೆ ಎಂಬ ಮಾಹಿತಿ ಗ್ರಾಪಂಗಳಿಂದ ತಿಳಿದು ಬಂದಿದೆ.
ಸದ್ಯ ತಾಲೂಕಿನಲ್ಲಿ ಪ್ರಮುಖ ಜಲಾಶಯ ಹಾಗೂ ದೊಡ್ಡ ಕೆರೆಗಳನ್ನು ಹೊರತು ಪಡಿಸಿದರೆ. ಶೇ.95 ರಷ್ಟು ಕೆರೆ, ಕಟ್ಟೆಗಳು ಬರಿದಾಗಿ ನಿಂತಿವೆ. ಇದರಿಂದ ದನ-ಕರುಗಳು ಹಾಗೂ ಅರಣ್ಯದಲ್ಲಿನ ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.