Advertisement

ಗಾಳಿ ಮಳೆಗೆ ನೆಲಕಚ್ಚಿದ ಭತ್ತ: ಬೆಳೆ ಕಟಾವಿಗೆ ತೀವ್ರ ತೊಂದರೆ

03:48 PM Oct 15, 2020 | sudhir |

ಮುಂಡಗೋಡ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಗಾಳಿಗೆ ತಾಲೂಕಿನಾದ್ಯಂತ ಭತ್ತದ ಬೆಳೆ ನೆಲ ಕಚ್ಚಿದ್ದು ರೈತರು ತೀವ್ರ ಹಾನಿ ಅನುಭವಿಸುವಂತಾಗಿದೆ. ರೈತರು ಪ್ರತಿವರ್ಷ ಒಂದಿಲ್ಲೊಂದು ರೀತಿಯ ಸಂಕಷ್ಟಕ್ಕೆ ಸಿಲುಕುತ್ತಲೆ ಬಂದಿದ್ದಾರೆ. ಈ ಬಾರಿ ಉತ್ತಮ ಮಳೆ ಸುರಿದ ಪರಿಣಾಮ ತಾಲೂಕಿನಲ್ಲಿ ಭತ್ತ ಬೆಳೆದ ರೈತರು ಉತ್ತಮ ಇಳುವರಿ ಹೊಂದಬಹುದು ಎಂಬ ಆಶಾಭಾವನೆಯಲ್ಲಿದ್ದರು. ಇದೀಗ ಭತ್ತದ ಬೆಳೆಯೂ ಕಟಾವ್‌ ಹಂತದಲ್ಲಿದೆ. ಕಳೆದ ಎರಡು ದಿನಗಳಿಂದ ಸಂಜೆ ವೇಳೆ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ.

Advertisement

ಇದರಿಂದ ಭತ್ತದ ಬೆಳೆ ನೆಲಕಚ್ಚಿದೆ. ಕೆಲವಡೆ ಅರ್ಧದಷ್ಟು ಬೆಳೆನೆಲ ಕಚ್ಚಿದ್ದರೆ ಮತ್ತಷ್ಟು ಕಡೆ ಸಂಪೂರ್ಣ ನಾಶವಾಗಿದೆ.
ತಾಲೂಕಿನಲ್ಲಿ ಈಗ ಸ್ಥಳೀಯ ಗಿಡ್ಡ ತಳಿಯ ಭತ್ತದ ಬೆಳೆಯೂ ಕಟಾವ್‌ ಹಂತ ತಲುಪಿದೆ. ಇನ್ನು ಇತರೆ ತಳಿಯ ಭತ್ತವೂ
ಮುಂದಿನ ತಿಂಗಳು ಕಟಾವ್‌ ಆಗಲಿದೆ. ಸದ್ಯ ಗಿಡ್ಡ ತಳಿಯ ಭತ್ತದ ಬೆಳೆ ಸಂಪೂರ್ಣ ಒಣಗಿ ನಿಂತಿದೆ.

ಇದನ್ನೂ ಓದಿ:ನಟ ಯಶ್‌ ಅಭಿವೃದ್ದಿ ಪಡಿಸಿದ ತಲ್ಲೂರ ಕೆರೆ! ರೈಲ್ವೆ ಗುತ್ತಿಗೆದಾರರ ಎಡವಟ್ಟಿಗೆ ಕೆರೆ ಭಣಭಣ

ಕಟಾವ್‌ಗೆ ತೊಂದರೆ: ಭತ್ತದ ಬೆಳೆ ಒಣಗಿ ನಿಂತಿದೆ. ತಗ್ಗು ಪ್ರದೇಶ ಹೊರತು ಪಡಿಸಿದರೆ ಹಕ್ಕಲು ಭೂಮಿಯಲ್ಲಿನ ಭತ್ತದ ಬೆಳೆ ಸಂಪೂರ್ಣ ಒಣಗಿ ಕಟಾವ್‌ ಮಾಡುವ ಹಂತದಲ್ಲಿದೆ. ದಸರಾ ಮುಗಿದ ನಂತರ ಭತ್ತದ ಬೆಳೆ ಕಟಾವ್‌ ಮಾಡಬೇಕು ಎಂಬುದು ರೈತರ ಮಾತು. ಆದರೆ ಕಳೆದ ಎರಡು ದಿನಗಳಿಂದ ಸಂಜೆ ವೇಳೆ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಭತ್ತದ ಬೆಳೆ ಮಕಾಡೆ
ಮಲಗಿದೆ. ಇದರಿಂದ ಭತ್ತದ ಬೆಳೆ ಕಟಾವ್‌ ಗೆ ತೊಂದರೆಯಾಗುತ್ತದೆ ಹಾಗೂ ಭತ್ತದ ಬೆಳೆ ನೆಲ ಕಚ್ಚಿದ ಪರಿಣಾಮ ಕಟಾವ್‌ಗೆ
ಹೆಚ್ಚು ಹಣವ್ಯಯ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಉದರುವ ಭತ್ತದ ಕಾಳು: ಮಳೆ ಗಾಳಿಗೆ ಭತ್ತ ನೆಲ ಕಚ್ಚಿರುವುದರಿಂದ ಕಟಾವ್‌ ಮಾಡುವ ವೇಳೆ ಭತ್ತದ ಕಾಳುಗಳು
ಉದುರುತ್ತವೆ. ಇದರಿಂದ ರೈತರು ಹಾನಿ ಅನುಭವಿಸಬೇಕಾಗುತ್ತದೆ. ನಿಂತ ಬೆಳೆಯಾದರೆ ಕಟಾವ್‌ ಮಾಡುವ ವೇಳೆ ಭತ್ತದ ಕಾಳು ಉದುರುವುದಿಲ್ಲ. ಮಳೆಗಾಳಿಗೆ ನೆಲ ಕಚ್ಚಿದ ಭತ್ತದ ಗೀಡಗಳು ಒಂದರ ಮೇಲೊಂದು ಸುತ್ತುವರಿದು ಬಿಳ್ಳುವುದರಿಂದ ಕಟಾವ್‌ ಮಾಡುವಾಗ ಭತ್ತದ ಕಾಳು ಉದುರುತ್ತವೆ.

Advertisement

ಬೆಳೆ ಇದ್ದರೆ ಬೆಲೆ ಇರುವುದಿಲ್ಲ: ಬೆಲೆ ಇದ್ದಾಗ ಬೆಳೆ ಇರುವುದಿಲ್ಲ ಎರಡು ಇದ್ದಾಗ ಪ್ರಕೃತಿ ಮುನಿಸಿನಿಂದಾಗಿ ರೈತರು ಹಾನಿ
ಅನುಭವಿಸುತ್ತಾರೆ. ಈ ಭಾರಿ ಮಳೆ, ಬೆಳೆ, ಬೆಲೆ ಎಲ್ಲವೂ ಉತ್ತಮವಾಗಿತ್ತು. ಇದೀಗ ಕೊನೆಯ ಹಂತದಲ್ಲಿ ಮಳೆ ಸುರಿಯುತ್ತ
ಇರುವುದರಿಂದ ಭತ್ತದ ಬೆಳೆಗಾರರು ಹಾನಿ ಅನುಭವಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next