Advertisement
ತಾಲೂಕಿನ ಕುರಿಕೋಟಾ ಗ್ರಾಮದ ಚಿಕ್ಕವೀರೇಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಟಿ ಬಚಾವೋ.. ಬೇಟಿ ಪಡಾವೋ.. ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು, ಮಾತನಾಡಿದರು. ಹೆಣ್ಣು ಭ್ರೂಣ ಹತ್ಯೆ ಹೆಣ್ಣು ಮಕ್ಕಳಿಗೆ ಸಂಬಂಧಿಸಿದಲ್ಲದೆ, ಇದೊಂದು ಸಾಮಾಜಿಕ ರೋಗ. ಇದನ್ನು ತೊಡೆಯುವಲ್ಲಿ ಮಹಿಳೆಯರಷ್ಟೇ ಪಾಲನ್ನು ಪುರುಷರು ವಹಿಸಿಕೊಳ್ಳಬೇಕು.
Related Articles
Advertisement
ಗಂಡು ಸಂತಾನದಿಂದ ಮಾತ್ರ ದೇಶ, ಸಮಾಜ ಹಾಗೂ ಕುಟುಂಬದ ಅಭಿವೃದ್ಧಿ ಎಂಬ ಮನೋಭಾವನೆ ಅನೇಕರಲ್ಲಿ ಈಗಲೂ ಇರುವುದರಿಂದ ಹೆಣ್ಣು ಭ್ರೂಣ ಹತ್ಯೆಯಂತಹ ದುರ್ಘಟನೆ ನಡೆಯುತ್ತಿದೆ. ಈ ಧೋರಣೆ ಮೊದಲು ಬದಲಾಗಬೇಕು ಎಂದು ಹೇಳಿದರು. ನಮ್ಮ ರಾಜ್ಯದಲ್ಲಿ 18 ವರ್ಷಕ್ಕಿಂತ ಮೊದಲೇ ಮದುವೆಯಾಗುವ ಮಹಿಳೆಯರ ಪ್ರಮಾಣ 2007-08ರಲ್ಲಿ ಶೇ 25ರಷ್ಟಿದೆ.
ಆದರೆ ಅಂತಹ ಮಹಿಳೆಯರ ಪ್ರಮಾಣ ಕೊಪ್ಪಳ, ಕಲಬುರಗಿ, ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶೇ.40ಕ್ಕಿಂತ ಅಧಿಧಿಕವಿದೆ. ನಮ್ಮ ರಾಜ್ಯದಲ್ಲಿ 2011ರಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ. 60ರಷ್ಟು ದಾಟದ ಎಂಟು ಜಿಲ್ಲೆಗಳಿವೆ. ಸಾಕ್ಷರತೆಯಲ್ಲಿ ಲಿಂಗ ಅಸಮಾನತೆ 2001ರಲ್ಲಿ ಶೇ. 18.66ರಷ್ಟು ಅಂಶಗಳಷ್ಟಿದ್ದುದು 2011 ಶೇ. 15.62 ಅಂಶಗಳಿಗೆ ಇಳಿದಿದೆ.
ನಮ್ಮ ರಾಜ್ಯದಲ್ಲಿ ಸಾಕ್ಷರತೆಯಲ್ಲಿ ಲಿಂಗ ಅಸಮಾನತೆ ಶೇ.20 ಅಂಶಗಳು ಮತ್ತು ಅದಕ್ಕಿಂತ ಅಧಿಕ ಬಾಗಲಕೋಟೆ, ವಿಜಯಪುರ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿದೆ ಎಂದು ವಿಷಾದಿಸಿದರು. ಸಾನ್ನಿಧ್ಯ ವಹಿಸಿದ್ದ ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಶ್ರೀಮಠದ ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಮಳಖೇಡ ಹಜರತ್‌ಸೈಯ್ಯದ್ ಶಹಾ ಮುಸ್ತಫಾ ಖಾದ್ರಿ, ಬಿಕೆಡಿಬಿ ಸದಸ್ಯ ವೈಜನಾಥ ತಡಕಲ್, ತಾಪಂ ಸದಸ್ಯೆ ಪಾರ್ವತಿ ಮಹಾದೇವಪ್ಪ ಸಲಗರ, ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಗಿರೆಪ್ಪ ಬಸಚವಣ್ಣ, ಶರಣೆ ಕರುಣಾ ಸಲಗರ ಹುಮನಾಬಾದ, ಚನ್ನಮ್ಮ ಸಾಹು ಇದ್ದರು. ನಾಗಲಿಂಗಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.