Advertisement

ಪಾಲಿಕೆ ಚುನಾವಣೆ: “ಭವಿಷ್ಯದ ಮಂಗಳೂರಿಗೆ ಜನರ ಪ್ರಣಾಳಿಕೆ’

10:40 PM Oct 30, 2019 | mahesh |

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮತದಾನಕ್ಕೆ ಇನ್ನು 12 ದಿನಗಳಷ್ಟೇ ಬಾಕಿಯಿದ್ದು, ಬಹುತೇಕ ಎಲ್ಲ 60 ವಾರ್ಡ್‌ಗಳಲ್ಲಿ ಚುನಾವಣೆಯ ಕಾವು ಏರತೊಡಗಿದೆ. ಅತ್ತ ರಾಜಕೀಯ ಪಕ್ಷಗಳು ಆಯಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಜತೆಗೆ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಚುನಾವಣ ಪ್ರಣಾಳಿಕೆ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ಪರಿಕಲ್ಪನೆಯಲ್ಲಿ ಪಾಲಿಕೆಯ ಮುಂದಿನ ಆಡಳಿತಕ್ಕೆ ಪೂರಕವಾಗುವ ದೃಷ್ಟಿಯಲ್ಲಿ ನಗರವಾಸಿಗಳ ಮೂಲ ಆದ್ಯತೆಗಳನ್ನು ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳ ಮುಂದಿಡುವ ಪ್ರಯತ್ನವೇ “ಸುದಿನ’ದ “ಭವಿಷ್ಯದ ಮಂಗಳೂರಿಗೆ ಜನರ ಪ್ರಣಾಳಿಕೆ’. ಆ ಮೂಲಕ ಮತದಾರರಿಗೆ ತಮ್ಮ ನಿರೀಕ್ಷೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿದೆ. ಜತೆಗೆ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಜನರ ಈ ನಿರೀಕ್ಷೆಗಳಿಗೆ ಆದ್ಯತೆ ನೀಡಬೇಕೆನ್ನುವುದು ಪತ್ರಿಕೆ ಆಶಯ.ಮಹಾನಗರ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿಗೆ ನಿಮ್ಮ ಚಿಂತನೆಗಳು, ಭವಿಷ್ಯದ ಆದ್ಯತೆ ಕುರಿತಂತೆ ಸಂಕ್ಷಿಪ್ತವಾಗಿ ಬರೆದು ನಮಗೆ ವಾಟ್ಸಾಪ್‌ ಮಾಡಲು ಅ.31ಕೊನೆಯ ದಿನ. ತಮ್ಮ ಹೆಸರು, ಸ್ಥಳ ಹಾಗೂ ಫೋಟೋ ಜತೆಗೆ ಕಳುಹಿಸಿದರೆ ಆಯ್ದ ಬರೆಹಗಳನ್ನು ಪ್ರಕಟಿಸಲಾಗುವುದು.
ವಾಟ್ಸಾಪ್‌ ನಂ. 9900567000

Advertisement

ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ

ಸಂಪೂರ್ಣ ಭ್ರಷ್ಟಾಚಾರ ಮುಕ್ತ ಮಹಾನಗರ ಪಾಲಿಕೆ
ಸರಳೀಕೃತ ಲೈಸೆನ್ಸ್‌ ವ್ಯವಸ್ಥೆ
ಹಂಪನಕಟ್ಟೆಯ ಹಳೆ ಬಸ್‌ ನಿಲ್ದಾಣ ಜಾಗದಲ್ಲಿ ಸುಸಜ್ಜಿತ ಬೃಹತ್‌ ಪಾರ್ಕಿಂಗ್‌ ವ್ಯವಸ್ಥೆ
ಉದ್ಯಾನಗಳ ನವೀಕರಣ
ಹೊಂಡಗುಂಡಿಗಳಿಲ್ಲದ ರಸ್ತೆ ಹಾಗೂ ಫುಟ್‌ಪಾತ್‌
ರಸ್ತೆ ಬದಿಯಲ್ಲೂ ಸಮರ್ಪಕ ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆ
ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸುವಿಕೆ
ಮಂಗಳೂರಿನ ಎಲ್ಲ ಪ್ರಮುಖ ರಸ್ತೆ ಬದಿ ಸುಸಜ್ಜಿತ ಶೌಚಾಲಯ
ಪ್ರಮುಖ ಪ್ರದೇಶಗಳಲ್ಲಿ ವಾಕಿಂಗ್‌ ಪಾತ್‌
ಸುಲ್ತಾನ್‌ ಬತ್ತೇರಿಯಿಂದ ತಣ್ಣೀರುಬಾವಿಗೆ ತೂಗುಸೇತುವೆ
ಪ್ರವಾಸಿಗರನ್ನು ಆಕರ್ಷಿಸಲು ಬೀಚ್‌ ಅಭಿವೃದ್ಧಿ
ನೈರ್ಮಲ್ಯ ಕಾಪಾಡಲು ಸುಸಜ್ಜಿತ ವ್ಯವಸ್ಥೆ
ಸುಸಜ್ಜಿತ ಬಸ್‌ ನಿಲ್ದಾಣಗಳು
ಸಾಂಕ್ರಾಮಿಕ ರೋಗ ಹತೋಟಿಗೆ ಸೂಕ್ತ ಮುಂಜಾಗ್ರತಾ ಕ್ರಮ
ವಿದ್ಯುತ್‌, ಕುಡಿಯುವ ನೀರು, ಡ್ರೈನೇಜ್‌ ಇತ್ಯಾದಿ ಕಾಮಗಾರಿಗಳಿಗೆ ರಸ್ತೆ ಅಗೆದು ಸೂಕ್ತ ರೀತಿಯಲ್ಲಿ ದುರಸ್ತಿ ಮಾಡದೇ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ

-ಸತೀಶ್‌ ಶೆಟ್ಟಿ ಕೊಡಿಯಾಲಬೈಲ್‌,
ಕೆಎಂಸಿ ಮಂಗಳೂರು

ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ
ಬಹುಮುಖ್ಯವಾಗಿ ಕಾಡುವ ಸಮಸ್ಯೆ ವಾಹನ ಪಾರ್ಕಿಂಗ್‌ನದ್ದು. ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆಯನ್ನು ಪಾಲಿಕೆ ಅಗತ್ಯವಾಗಿ ಜನಸಾಮಾನ್ಯರಿಗೆ ಕಲ್ಪಿಸಿಕೊಡಬೇಕಿದೆ.
– ಬಾವುಟಗುಡ್ಡೆ ಉದ್ಯಾನ ಸುತ್ತಲೂ ಕಟ್ಟಡ ನಿರ್ಮಾಣವಾಗಿರುವುದರಿಂದ ಉದ್ಯಾನವನಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿ ಹೈಟೆಕ್‌ ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಿದರೆ ಪಾಲಿಕೆಗೆ ವರಮಾನ, ಸಂಚಾರ ದಟ್ಟಣೆಗೂ ಪರಿಹಾರ ಸಿಗಬಹುದು.
-ಸತೀಶ್‌ಕುಮಾರ್‌, ಕುಂಟಿಕಾನ

Advertisement

ರಸ್ತೆ ಅಭಿವೃದ್ಧಿಗೊಳಿಸಿ
– ಹಲವಾರು ಮಂದಿ ದೂರದೂರುಗಳಿಂದ ನಡೆದುಕೊಂಡೇ ನಗರಕ್ಕೆ ಬರುವವರಿದ್ದಾರೆ. ಅಂತಹ ಮಂದಿಗೆ ರಸ್ತೆ ನಿರ್ಮಿಸಿಕೊಡಬೇಕು.
– ನಗರದ ವಿವಿಧೆಡೆ ರಸ್ತೆಗಳು ನಾದುರಸ್ತಿಯಲ್ಲಿದ್ದು, ರಸ್ತೆ ಸರಿಪಡಿಸುವಿಕೆಗೆ ಒತ್ತು ನೀಡಬೇಕು.

-ಧನುಷ್‌, ಬಜಾಲ್‌

ಜನ ಸೇವೆಗೆ ಆದ್ಯತೆ ನೀಡಿ
– ಜನರ ಮೂಲ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ದಾರಿದೀಪ ಒದಗಿಸುವಿಕೆಗೆ ಆದ್ಯತೆ ಇರಲಿ
– ಸ್ಮಾರ್ಟ್‌ಸಿಟಿ ಯೋಜನೆಗೆ ವ್ಯವಸ್ಥಿತ ರೂಪುರೇಖೆ ಸಿದ್ಧಪಡಿಸಿಕೊಳ್ಳಬೇಕು
– ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಯೋಜನ ರಚಿಸಬೇಕು

-ರವಿರಾಜ್‌ ಪಿ., ದಂಬೆಲ್‌

ಮೂಲ ಸಮಸ್ಯೆಗಳನ್ನು ಪರಿಹರಿಸಿ
– ಗೆದ್ದ ಅಭ್ಯರ್ಥಿಗಳು ಕ್ಷೇತ್ರದ ಮತದಾರರ ಪಕ್ಷ, ಜಾತಿ, ಮತ ನೋಡದೆ ಜನ ಸೇವೆಗೆ ಆದ್ಯತೆ ನೀಡಬೇಕು
– ಸರಕಾರದಿಂದ ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು
– ಸರಕಾರದಿಂದ ನಡೆಸಲ್ಪಡುವ ಆಸ್ಪತ್ರೆ, ಗ್ರಂಥಾಲಯ, ಇತರ ಕಚೇರಿಗಳಲ್ಲಿರುವ ಸಮಸ್ಯೆಗಳನ್ನು ಭೇಟಿ ನೀಡಿ ಬಗೆಹರಿಸಬೇಕು.

-ಯೋಗೀಶ್‌ ಸನಿಲ್‌, ಕುಳಾಯಿ, ಬಜಾಲ್‌

ಮನೆ ಬಾಗಿಲಿಗೆ ಯೋಜನೆ ತಲುಪಿಸಿ
– ಪ್ರತಿ 100 ಮನೆಗಳಿಗೆ, ಪ್ರತಿ 10 ಬಹುಮಹಡಿ ಕಟ್ಟಡಗಳಿಗೆ, ಪ್ರತಿ ಗ್ರಾಮಕ್ಕೆ ಒಂದು ವಾಟ್ಸಾಪ್‌ ಗ್ರೂಪ್‌, ಪಾರ್ಕ್‌ ಯೋಜನೆ ರಚಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು.
– ನಿಮ್ಮ ಮನೆ ಬಾಗಿಲಿಗೆ ಯೋಜನೆಯನ್ನು ರೂಪಿಸಿ ಮನೆಮನೆಗೆ ತಲುಪಿಸಲು ಕಾರ್ಯಕ್ರಮ ರೂಪಿಸುವುದು, ಮನೆಗಳಿಗೆ ತೆರಳಿ ಅಥವಾ ಜನರನ್ನು ಪಾಲಿಕೆಗೆ ಕರೆದುಕೊಂಡು ಹೋಗಿ ಕೆಲಸ ಪೂರ್ಣಗೊಳ್ಳಲು ನೆರವಾಗುವುದು.

-ಲೋಹಿತ್‌ ಶೆಟ್ಟಿಗಾರ್‌, ಕಿನ್ಯಾ ತಲಪಾಡಿ

ಚರಂಡಿ ವ್ಯವಸ್ಥೆ ನಿರ್ಮಿಸಿ
– ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ಹರಿದು ಹೋಗುವುದನ್ನು ತಡೆಯಲು ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಮಾಡಬೇಕು.

-ಮೈಕಲ್‌ ಲೋಬೋ, ನೀರುಮಾರ್ಗ

24×7 ನೀರು ಒದಗಿಸಿ
– ಏರಿಕೆಯಾದ ನೀರಿನ ದರ ಇಳಿಸಬೇಕು. ನಗರದ ಜನತೆಗೆ ವರ್ಷಪೂರ್ತಿ 24×7 ನೀರು ಒದಗಿಸಿ
– ಸೂಕ್ತ ಒಳಚರಂಡಿ ವ್ಯವಸ್ಥೆ ಕಲ್ಪಿಸಿ, ರಸ್ತೆಯಲ್ಲಿ ಹರಿಯದಂತೆ ನೋಡಿಕೊಳ್ಳಿ
– ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗದಂತೆ ಸೂಕ್ತ ಗಮನ ಹರಿಸಬೇಕು
– ಸ್ಟೇಟ್‌ಬ್ಯಾಂಕ್‌ನಲ್ಲಿ ಸಿಟಿ ಬಸ್‌ ನಿಲ್ದಾಣ ನಿರ್ಮಿಸಿ
– ರಸ್ತೆ ಬದಿ ವ್ಯಾಪಾರಿಗಳಿಗೆ ರಸ್ತೆ ಬದಿ ಅವಕಾಶ ನೀಡದೆ, ನಿರ್ದಿಷ್ಟ ಜಾಗದಲ್ಲೇ ವ್ಯಾಪಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ

-ಜಿ. ಕೆ. ಭಟ್‌, ಕಪಿತಾನಿಯೋ

ಡಂಪಿಂಗ್‌ ಯಾರ್ಡ್‌ ಸಮಸ್ಯೆ ಶಾಶ್ವತ ಪರಿಹಾರ ಒದಗಿಸಿ
– ಪ್ರವಾಸೋದ್ಯಮ ಅಭಿವೃದ್ಧಿ, ಸ್ವತ್ಛತೆಗೆ ಆದ್ಯತೆ
– ವಾರ್ಡ್‌ ಸಮಿತಿ ರಚನೆ
– ನಿರಂತರ ಕುಡಿಯುವ ನೀರಿನ ಪೂರೈಕೆ
– ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ಗೆ ಶಾಶ್ವತ ಪರಿಹಾರ
– ನಗರದ ಕೆರೆಗಳ ಅಭಿವೃದ್ಧಿ
– ಹೊಂಡಗುಂಡಿಗಳಿಲ್ಲದ ರಸ್ತೆ, ಕಾಲುದಾರಿ ಕಲ್ಪಿಸಲು ಒತ್ತು

-ಪಿ. ಕೃಷ್ಣ ಭಟ್‌, ಕೆಎಚ್‌ಬಿ ಕಾಲನಿ, ಬೋಂದೆಲ್‌

ಸ್ವಚ್ಛ, ಸುಂದರ ನಗರವನ್ನಾಗಿಸಿ
– ಸ್ವಚ್ಛ, ಸುಂದರ ನಗರವನ್ನಾಗಿಸಲು ಆದ್ಯತೆ; ತಮ್ಮ ಮನೆಗಳ ಕಸ ವಿಲೇವಾರಿಗೆ ಅಸಡ್ಡೆ ತೋರುವ, ಸಾರ್ವಜನಿಕ ಜಾಗ ಮಲಿನಗೊಳಿಸುವವರಿಗೆ ದಂಡ
– ಬಿಲ್ಡರ್‌, ಕಾಂಟ್ರಾಕ್ಟ್ದಾರರಿಗೆ ಅನುಕೂಲವಾಗುವಂತೆ ಕಾನೂನು, ನಿಯಮ ತಂದು ಜನಸಾಮಾನ್ಯನನ್ನು ಕಷ್ಟದ ಕೂಪಕ್ಕೆ ತಳ್ಳುವ ಹೊಂದಾಣಿಕೆ ರಾಜಕಾರಣ ಬೇಡ
– ಕ್ಲಪ್ತ ಸಮಯಕ್ಕೆ ನೀರಿನ ಬಿಲ್‌ ವಿತರಣೆಯಾಗಬೇಕು; ಪಾಲಿಕೆ ನೀರನ್ನು ಅನಧಿಕೃತವಾಗಿ ಉಪಯೋಗಿಸುವವರ ಮೇಲೆ ಅನುಕಂಪ ತೋರಬಾರದು

-ವಿನುತಾ ಭಟ್‌, ಹೊಸಬೆಟ್ಟು

ಬೈಪಾಸ್‌ ರಸ್ತೆ ನಿರ್ಮಿಸಿ
– ಸುಸಜ್ಜಿತ ಬಸ್‌ ನಿಲ್ದಾಣ
– ಅಡ್ಯಾರು-ಹರೇಕಳ ರಸ್ತೆ, ಸುಲ್ತಾನ್‌ಬತ್ತೇರಿ-ತಣ್ಣೀರುಬಾವಿ ರಸ್ತೆ, ಬೋಂದೆಲ್‌-ವಾಮಂಜೂರು ಬೈಪಾಸ್‌, ಬೈತುರ್ಲಿ-ವಳಚ್ಚಿಲ್‌ ಬೈಪಾಸ್‌ ನಿರ್ಮಾಣಕ್ಕೆ ಆದ್ಯತೆ ನೀಡಿ.

-ಎಂ. ಹರೀಶ್‌ ಶೆಟ್ಟಿ, ತುಂಗಾನಗರ ಬಡಾವಣೆ, ಅಳಪೆ ಕರ್ಮಾರ್‌

Advertisement

Udayavani is now on Telegram. Click here to join our channel and stay updated with the latest news.

Next