Advertisement
ನಗರದ ಪಾಲಿಕೆ ಸಭಾಂಗಣದಲ್ಲಿ ಹು-ಧಾ ಮಹಾನಗರ ಪಾಲಿಕೆ ಆಯವ್ಯಯಕ್ಕೆ ಜನರಿಂದ ಸಲಹೆ ಸ್ವೀಕರಿಸುವ ನಿಟ್ಟಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದಸಭೆಯಲ್ಲಿ ಅವರು ಮಾತನಾಡಿದರು. ಪಾಲಿಕೆ ಆಸ್ತಿಗಳನ್ನು ಮಾರಾಟ ಮಾಡಿಲ್ಲ. ಆದರೆಅವಳಿನಗರದ ಕೆಲ ಕಡೆಗಳಲ್ಲಿ ವಾಣಿಜ್ಯ ಮಳಿಗೆ ಹಾಗೂ ನಿವೇಶನಗಳನ್ನು ಲೀಸ್ ಮೇಲೆ ನೀಡಲಾಗಿತ್ತು. ಇದೀಗ ಅವುಗಳಿಂದ ಯಾವುದೇ ಆದಾಯ ಬರುತ್ತಿಲ್ಲ. ಕೆಲ ಮಳಿಗೆಗಳು ಹಾಳಾಗಿದ್ದು, ಅವುಗಳನ್ನು ಹರಾಜು ನಡೆಸಲಾಗುತ್ತದೆ. ನಿವೇಶನಗಳಲ್ಲಿ ಮನೆ ನಿರ್ಮಿಸಿದವರಿಗೆ ಸೂಕ್ತ ಬೆಲೆಯಲ್ಲಿ ಅವರ ಹೆಸರಿಗೆ ಮನೆಗಳನ್ನು ಮಾಡಿಕೊಡುವ ಮೂಲಕ ಪಾಲಿಕೆ ಆದಾಯ ಮಾಡಿಕೊಳ್ಳುವ ಚಿಂತನೆ ಸಾಗಿದೆ ಎಂದರು.
Related Articles
Advertisement
ಕಚೇರಿವಾರು ಜನ ಸಂಪರ್ಕ ಸಭೆ ನಡೆಸಬೇಕು. ಇನ್ನು ಕೆಲವರು ವಾಣಿಜ್ಯ ಮಳಿಗೆ ಲೀಸ್ ಪಡೆದು ಮತ್ತೂಬ್ಬರಿಗೆ ನೀಡಿ ವಂಚನೆ ಮಾಡುತ್ತಿದ್ದು, ಈ ಬಗ್ಗೆ ಕ್ರಮ ತಡೆಯಬೇಕೆಂದು ಜಿ.ಬಿ. ಬಿಂಗೆ ಮನವಿ ಮಾಡಿದರು. ಆಸ್ತಿ ತೆರಿಗೆ ಹಾಗೂ ನೀರಿನ ಬಿಲ್ ವಸೂಲಿ ಸರಿಯಾಗಿ ನಡೆಯುತ್ತಿಲ್ಲ. ಬಾಕಿ ವಸೂಲಿಗೆ ಒಂದು ಸೂಕ್ತ ವ್ಯವಸ್ಥೆ ಮಾಡಬೇಕು. ಇದರ ಜತೆಗೆ ಜನರಿಗೆ ಸರಿಯಾಗಿ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡಬೇಕೆಂದು ಮಹಾವೀರ ಶಿವಣ್ಣವರ ಮನವಿ ಮಾಡಿದರು. ಬಡಾವಣೆಗಳಲ್ಲಿನ ರಸ್ತೆ, ಉದ್ಯಾನವನ, ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿದ್ದು ಕಲ್ಯಾಣಶೆಟ್ಟಿ, ಬಸವರಾಜ ಸೇರಿ ವಿವಿಧ ಬಡಾವಣೆ ನಿವಾಸಿಗಳು ಆಯುಕ್ತರ ಗಮನ ಸೆಳೆದರು.
ಉಪ ಆಯುಕ್ತ ಎ.ಆರ್. ದೇಸಾಯಿ ಸೇರಿ ಪಾಲಿಕೆ ಅಧಿಕಾರಿಗಳು, ವಿವಿಧ ವಾರ್ಡುಗಳ ಪ್ರಮುಖರು ಪಾಲ್ಗೊಂಡಿದ್ದರು.
ತೆರಿಗೆ ಹೆಚ್ಚಳವಿಲ್ಲ:ಆಯುಕ್ತರ ಸ್ಪಷ್ಟನೆ :
ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಿಸುವ ನಿಯಮವಿದೆ. ಆದರೆ ಕಳೆದ ವರ್ಷ ಹೆಚ್ಚಳ ಮಾಡಿದ್ದರಿಂದ ಈ ಬಾರಿ ಅಸಾಧ್ಯ. ಸರ್ಕಾರ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿ ತಂದು ಹೊಸ ಮಾರ್ಗಸೂಚಿ ಹೊರಡಿಸಿದೆ. ಹೀಗಾಗಿ ಆಮಾರ್ಗಸೂಚಿ ಪ್ರಕಾರ ತೆರಿಗೆ ಕುರಿತು ಜನರಿಗೆ ತಿಳಿವಳಿಕೆನೀಡಲಾಗುವುದೆಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸ್ಪಷ್ಟಪಡಿಸಿದ್ದಾರೆ.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಗೆ ಮನವಿ :
ಆಸ್ತಿ ತೆರಿಗೆ ಹೆಚ್ಚಳ ಅನಿಯಂತ್ರಿತವಾಗಿದ್ದು, ಅದನ್ನು ಸರಿ ಮಾಡುವ ಕೆಲಸ ಮಾಡಬೇಕು.ಮನೆ ಮನೆಗೆ ಕಸ ವಿಲೇವಾರಿ, ನಗರ ಸ್ವತ್ಛತೆ ಕಾರ್ಯಗಳಲ್ಲಿನ ಸಮಸ್ಯೆ ಪರಿಹರಿಸುವಕೆಲಸವಾಗಲಿ. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡಿದರೆ ಅನುಕೂಲ. ಈ ವಿಷಯದಲ್ಲಿಪಾಲಿಕೆ ಆಯುಕ್ತರು ಸರಕಾರದ ಜತೆ ಮಾತುಕತೆ ನಡೆಸಬೇಕೆಂದು ಶ್ರೀನಗರದ ನಿವಾಸಿ ಅಶೋಕ ಕುಂಬಾರಿ ಮನವಿ ಮಾಡಿದರು.
ಧಾರವಾಡಕ್ಕೆ ಸುಮಾರು 75 ಕೋಟಿ ರೂ.ಪ್ರತ್ಯೇಕ ಅನುದಾನವಿದೆ. ಈ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಮಳೆಗಾಲಕ್ಕೂ ಪೂರ್ವದಲ್ಲಿ ಕಾಮಗಾರಿ ನಡೆಸಲಾಗುವುದು. ನಗರದ 78 ಕಡೆಗಳಲ್ಲಿ ಶೌಚಗೃಹ ನಿರ್ಮಿಸಲು ಸರ್ವೇ ನಡೆಸಿ ಸರ್ಕಾರ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯ ಶೌಚಗೃಹ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೇ ಕಲಾಭವನವನ್ನು ಜನರ ಬಳಕೆಗೆ ನೀಡಲು ಶೀಘ್ರ ಬಾಡಿಗೆ ಪರಿಷ್ಕರಣೆ ಮಾಡಲಾಗುವುದು.– ಸುರೇಶ ಇಟ್ನಾಳ, ಆಯುಕ್ತರು, ಹು-ಧಾ ಪಾಲಿಕೆ