Advertisement

ಚ.ಪಟ್ಟಣ: ನಿವೇಶನ ತೆರಿಗೆ ಹೆಚ್ಚಳಕ್ಕೆ ಸದಸ್ಯರ ಆಕ್ರೋಶ

04:48 PM Mar 10, 2021 | Team Udayavani |

ಚನ್ನರಾಯಪಟ್ಟಣ: ಸರ್ಕಾರಿ ಇಲಾಖೆ ಅಧಿಕಾರಿಗಳು ಎಸಿ ರೂಮಿನಲ್ಲಿ ಕುಳಿತು ಆದೇಶ ಮಾಡುವುದಲ್ಲ, ಜನಸಾಮಾನ್ಯರ ಸಮಸ್ಯೆ ತಿಳಿದು ತೆರಿಗೆ ಹಣ ಹೆಚ್ಚಳ ಮಾಡಲಿ ಎಂದು ಪುರಸಭಾ ಸದಸ್ಯ ಸಿ.ಎನ್‌.ಶಶಿಧರ್‌ ಆಗ್ರಹಿಸಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಎಚ್‌. ಎನ್‌.ನವೀನ್‌ ಅಧ್ಯಕ್ಷತೆಯಲ್ಲಿ ನಡೆದ ತುರ್ತುಸಭೆಯಲ್ಲಿ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ ಖಾಲಿ ನಿವೇಶನದ ತೆರಿಗೆ 300 ರೂ. ಇತ್ತು. ಈಗ 1500 ರೂ. ನಿಗದಿ ಮಾಡುವ ಮೂಲಕ ಸಾಲಮಾಡಿ ನಿವೇಶನ ಖರೀದಿ ಮಾಡಿದವರಿಗೆ ತೊಂದರೆನೀಡಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು ಆದೇಶಹೊರಡಿಸುವ ಮೊದಲು ಸ್ಥಳೀಯ ಆಡಳಿತ ಮಂಡಳಿಯಿಂದ ವರದಿ ತರಿಸಿಕೊಳ್ಳಬೇಕು ಎಂದು ತಿಳಿಸಿದರು.

ಮರು ಪರಿಶೀಲನೆಗೆ ಮನವಿ: ಸರ್ಕಾರದ ಆದೇಶದಂತೆ ತೆರಿಗೆ ಸಂಗ್ರಹಕ್ಕೆ ಪುರಸಭಾ ಸಿಬ್ಬಂದಿಮುಂದಾದರೆ ನಿವೇಶನ ಮಾಲಿಕರು ತೊಂದರೆ ನೀಡುತ್ತಾರೆ. ಇಲ್ಲವೆ, ನಿವೇಶನವನ್ನು ಬಡ್ಡಿ ದಂಧೆ ಮಾಡುವವರಿಗೆ ಅಡಮಾನ ಇಟ್ಟು ತೆರಿಗೆ ಕಟ್ಟಬೇಕಾಗುತ್ತಿದೆ. ಈ ಬಗ್ಗೆ ಸಭೆಯಲ್ಲಿ ಕೂಲಂಕಶವಾಗಿ ಚರ್ಚೆಮಾಡಿ ಜಿಲ್ಲಾಧಿಕಾರಿಗಳ ಮೂಲಕ ತೆರಿಗೆ ಮರು ಪರಿಶೀಲನೆಗೆ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.

ಹೆಚ್ಚಿನ ವಸೂಲಿಗೆ ಆದೇಶ: ಪುರಸಭೆ ಮುಖ್ಯಾಧಿಕಾರಿ ಎಚ್‌.ಟಿ.ಕೃಷ್ಣಮೂರ್ತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುತ್ತೋಲೆ ಅನ್ವಯ ಈಗಾಗಲೇತೆರಿಗೆಯನ್ನು ಶೇ.25 ನಿಗದಿಪಡಿಸಿದ್ದು, ಇನ್ನು ಹೆಚ್ಚಿನ ತೆರಿಗೆ ವಸೂಲಿ ಮಾಡಲು ಆದೇಶ ಹೊರಡಿಸಲಾಗಿದೆ. 30-40 ಅಳತೆಯ ಖಾಲಿ ನಿವೇಶನದ ತೆರಿಗೆ ಮೊತ್ತವು 538 ರೂ. ಇದ್ದು, ಸರ್ಕಾರದ ಅನ್ವಯ ಜಾಸ್ತಿ ಮಾಡಿ ದರೆ 1419 ರೂ. ಆಗಲಿದೆ ಎಂದು ಸಭೆಗೆ ತಿಳಿಸಿದರು.

ಮನೆಯ ತೆರಿಗೆ ಈ ಹಿಂದೆ ಕೊಳಚೆ ಪ್ರದೇಶಗಳಾದಶ್ರೀದೇವಿ ನಗರ, ಗಣೇಶ ನಗರದಂತಹ ವಾರ್ಡ್‌ನಲ್ಲಿ2,727 ರೂ. ನಷ್ಟಿದ್ದು, ಇದೀಗ ಅದೂ ಜಾಸ್ತಿಯಾಗಲಿದೆ. ಪುರಸಭೆ ಆದಾಯ ಜಾಸ್ತಿಯಾಗಲಿದೆ. ಇದಕ್ಕೆಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಆದಾಯ ಮುಖ್ಯವಲ್ಲ, ಸಾರ್ವಜನಿಕರ ಹಿತಕಾಪಾಡಬೇಕಿದೆ, ಬಡವ,ಕೂಲಿ ಕಾರ್ಮಿಕರ ಬಗ್ಗೆಯೂ ಆಲೋಚನೆ ಮಾಡುವಂತೆ ಸದಸ್ಯ ಪ್ರಕಾಶ್‌ ಸೂಚಿಸಿದರು.

Advertisement

ಸದಸ್ಯರ ವಿರೋಧವಿದೆ: ಸದಸ್ಯ ಮೋಹನ್‌ ಮಾತನಾಡಿ, ಎಲ್ಲೆಡೆ ಶೇ.15 ತೆರಿಗೆ ಜಾಸ್ತಿ ಮಾಡಿದರೆಈ ಹಿಂದೆ ಎಸಿಯವರ ಆಳ್ವಿಕೆಯಲ್ಲಿ ಒಮ್ಮೆಲೆ ಶೇ.25ಕ್ಕೆಏರಿಕೆ ಮಾಡಿದ್ದು, ಈಗ ಮತ್ತೆ ತೆರಿಗೆ ಹೆಚ್ಚಿಸುವಪ್ರಸ್ತಾವನೆ ತಂದಿರುವುದು ಖಂಡನೀಯ. ಸಾರ್ವಜನಿಕರು ಧರಣಿ ನಡೆಸಿದರೆ ನಾವು ಅವರ ಪರ ನಿಲ್ಲುತ್ತೇವೆ, ತೆರಿಗೆ ಹೆಚ್ಚಳಕ್ಕೆ ಸದಸ್ಯರ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಿಟ್‌ ಕೂಡ ನೀಡಿಲ್ಲ: ಪುರಸಭೆಯಲ್ಲಿ 14000ಖಾತೆಗಳಿದ್ದು, 5 ರಿಂದ 6 ಕೋಟಿ ರೂ. ಆದಾಯಬರುತ್ತಿದೆ. ಲಾಕ್‌ಡೌನ್‌ ಸಮಯದಲ್ಲಿ ಮಾನವೀಯದೃಷ್ಟಿಯಿಂದಲೂ ಒಂದು ಕಿಟ್‌ ವಿತರಿಸಿಲ್ಲ, ಇತ್ತವಿನಾಯಿತಿಯನ್ನೂ ಕೊಟ್ಟಿಲ್ಲ. ದಯಮಾಡಿ ಆ ಬಗ್ಗೆಯೂ ಸಭೆ ಆಲೋಚನೆ ಮಾಡಬೇಕು ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷ ನವೀನ್‌, ಸರ್ಕಾರದ ಸುತ್ತೋಲೆಗೂ ಸ್ಪಂದಿಸಿ ಜನರ ಪರವಾಗೂಕಾರ್ಯ ನಿರ್ವಹಿಸಬೇಕಾಗಿರುವ ಈ ಸಂದರ್ಭದಲ್ಲಿ ಆಯಾ ವಾರ್ಡ್‌ನ ಅನ್ವಯ ಅಲ್ಲಿನ ಜಾಗದ ಮೌಲ್ಯವನ್ನು ಅನುಸರಿಸಿ ಕನಿಷ್ಠ ತೆರಿಗೆ 0.2ರಷ್ಟು ಮಾತ್ರ ವಿಧಿಸಲಾಗುವುದು ಎಂದರು.

ಇದಕ್ಕೆ ಕೆಲ ಸದಸ್ಯರು ಒಪ್ಪಿಗೆ ನೀಡಿದರೆ, ಕೆಲ ಸದಸ್ಯರು ಅಧ್ಯಕ್ಷರ ತೀರ್ಮಾನಕ್ಕೆ ಬಿಟ್ಟು ಜಾರಿಗೊಂಡರು. ಪುರಸಭಾ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಿ, ಮಹಿಳಾ ಪೌರ ಕಾರ್ಮಿಕರು, ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಫ‌ಲಾನುಭವಿಗಳು, ಪುರಸಭೆಯ ಸಿಬ್ಬಂದಿ ವರ್ಗ ಮತ್ತುಮಹಿಳಾ ಸದಸ್ಯರನ್ನು ಸನ್ಮಾನಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next