Advertisement

ಪುರಸಭೆ ಅಂಗಡಿ ಮಳಿಗೆ ಹರಾಜಿಗೆ ಆಗ್ರಹ

01:36 PM Feb 20, 2021 | Team Udayavani |

ಚಿಕ್ಕನಾಯಕನಹಳ್ಳಿ: ಹಲವು ವರ್ಷಗಳಿಂದ ಪುರಸಭೆಗೆ ಸಂಬಂಧಿಸಿದ ಅಂಗಡಿ ಮಳಿಗೆಗಳು ಕೋರ್ಟ್‌ನಲ್ಲಿದೆ, ಇದರಿಂದ ಪುರಸಭೆ ಆದಾಯ ಕಡಿಮೆಯಾಗಿದೆ. ಕಾಫಿ, ಟೀ ಕುಡಿದು ಹೋಗೋಕೆ ಸಭೆ ನಡೆಸುತ್ತಿದ್ದಿರಾ, ಸಭೆಯಲ್ಲಿ ಮಾಡಿದ ರೆಸಲ್ಯೂಷನ್‌ಗೆ ಬೆಲೆ ಇಲ್ಲವೆ, ಚರಂಡಿಕಾಮಗಾರಿಗಳಿಗೆ ಕ್ಯೂರಿಂಗ್‌ ಮಾಡಿಸಿ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಆರಂಭವಾಗುತ್ತಿದಂತೆ ಬಿಜೆಪಿ ಸದಸ್ಯ ರೇಣುಕಪ್ರಸಾದ್‌ ಕಳೆದ ಸಭೆಯಲ್ಲಿ ನಾನು ಚರ್ಚಿಸಿದವಿಷಯಗಳನ್ನು ರೆಕಾರ್ಡ್‌ ಬುಕ್‌ನಲ್ಲಿ ದಾಖಲು ಮಾಡಿಲ್ಲ. ನಾವು ಮಾತನಾಡಿರುವುದಕ್ಕೆ ಬೆಲೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಮಂಜುನಾಥ್‌ ಕಾಫಿ, ಟೀ ಕುಡಿದು ಹೋಗೋಕೆ ನಾವು ಬಂದಿದ್ದೇವೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಕೆಲ ಸದಸ್ಯರು ಕಳೆದ ಬಾರಿ ಮೀಟಿಂಗ್‌ಗೆ ಬಂದಿಲ್ಲ ಆದರೂ ಹಾಜರಾತಿ ಹಾಕಲಾಗಿದೆ. ಇದು ನಿಮ್ಮ ಬೇಜಾವಾಬ್ದಾರಿ ಅಲ್ಲವೇ ಎಂದು ಸದಸ್ಯೆ ರತ್ನಮ್ಮಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೌರಕಾರ್ಮಿಕರ ದಿನಾಚರಣೆ ಮಾಡಲು ಯಾವ ಒಬ್ಬ ಸದಸ್ಯರ ಸಲಹೆ ಕೇಳದೆ ನಿಮ್ಮ ಮನಸ್ಸಿಗೆ ಬಂದ ಹಾಗೆ ದಿನಾಚರಣೆ ಮಾಡಿದ್ದೀರಾ? ನಾವು ಸದಸ್ಯರಾಗಿರುವುದು ಯಾಕೆ, ನಮ್ಮ ಸಲಹೆಗಳನ್ನು ನೀವು ಪಡೆಯಬೇಕು ಎಂದು ತಿಳಿಸಿದರು.

ನಾವು ಇಲ್ಲಿ ಹರಟೆ ಹೊಡೆದು ಹೋಗಲು ಬಂದಿಲ್ಲ ನಮ್ಮ ವಾರ್ಡ್ಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬರುವುದು,ಕಚೇರಿಗೆ ಬಂದರೆ ಅಧಿಕಾರಿಗಳು ಅವಾಗ ಇವಾಗ ಬನ್ನಿ ಎನ್ನುತ್ತಾರೆ ಎಂದು ಗರಂ ಆದರು.

ಪೌರಕಾರ್ಮಿಕರನ್ನು ಸದ್ಬಳಕೆ ಮಾಡಿಕೊಳ್ಳಿ: ಪುರಸಭೆಯಲ್ಲಿ 54 ಪೌರಕಾರ್ಮಿಕರಿದ್ದು, ಅವರಿಂದ ಕೆಲಸ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಪೌರ ಕಾರ್ಮಿಕರನ್ನು 3 ಬ್ಯಾಚ್‌ ಮಾಡಿ, ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಪಟ್ಟಣದ ಸ್ವತ್ಛತೆ ಮಾಡಿಸಬಹುದು, ಒಂದು ವಾರ್ಡ್‌ ಪೂರ್ತಿ ಸ್ವಚ್ಛವಾಗುವ ವರೆಗೆ ಆ ಬ್ಯಾಚ್‌ನ್ನು ಬೇರೆ ವಾರ್ಡ್‌ಗೆ ಕಳಿಸಬಾರದು, ಪ್ರಯೋಗಿಕವಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳು ಕೆಲ ಪೌರಕಾರ್ಮಿಕ ರಿಂದ ಪಟ್ಟಣವನ್ನು ರಾತ್ರಿ ಸ್ವತ್ಛಗೊಳಿಸುವ ಕಾರ್ಯ ವನ್ನು ಮಾಡಲಾಗಿದೆ. ಇದರಿಂದ ಪೌರಕಾರ್ಮಿಕರಿಂದ ಕೆಲಸ ನಿರೀಕ್ಷಿಸಬಹುದು ಎಂದು ಸಭೆಯಲ್ಲಿ ಪುರಸಭೆ ಸದಸ್ಯೆ ಪೂರ್ಣಿಮಾ ಸಲಹೆ ನೀಡಿದರು.

Advertisement

ಇದಕ್ಕೆ ಕೆಲ ಸದಸ್ಯರು ರಾತ್ರಿ ಸಮಯದಲ್ಲಿ ಪೌರಕಾರ್ಮಿಕರು ಮದ್ಯಪಾನ ಮಾಡಿರುತ್ತಾರೆ.ಆದ್ದರಿಂದ ರಾತ್ರಿ ಅವರು ಕೆಲಸ ಮಾಡುವುದು ಬೇಡ ಎಂದು ತಿಳಿಸಿದರು.

ಕ್ಯೂರಿಗ್‌ ಇಲ್ಲವಾಗಿದೆ: ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಸರಿಯಾದ ಕ್ಯೂರಿಂಗ್‌ ವ್ಯವಸ್ಥೆಇಲ್ಲವಾಗಿದೆ, ಗುಣಮಟ್ಟವನ್ನು ಪರೀಕ್ಷೆ ಮಾಡಿದ್ದೀರಾ ಎಂದು ಎಂಜಿನಿಯರ್‌ ಅವರನ್ನು ಪುರಸಭೆ ಸದಸ್ಯ ಸಿ.ಡಿ.ಸುರೇಶ್‌ ಪ್ರಶ್ನೆ ಮಾಡಿದರು.

ಟ್ಯಾಂಕರ್‌ನಲ್ಲಿ ನೀರು ಕಳುಹಿಸುತ್ತಿದ್ದೀರಾ: ಪುರಸಭೆ ವಾರ್ಡ್‌ 6 ಕೇದಿಗೆಹಳ್ಳಿಯಲ್ಲಿ ನೀರಿನ ಸಮಸ್ಯೆಉಂಟಾಗಿದೆ. ಟ್ಯಾಂಕರ್‌ನಲ್ಲಿ ನೀರು ಕಳುಹಿಸುತ್ತಿದ್ದೀರಾ, ಓವರ್‌ ಹೆಡ್‌ ಟ್ಯಾಂಕ್‌ ಇದೆಇನ್ನು ಉಪಯೋಗಕ್ಕೆ ಬರುತ್ತಿಲ್ಲ , ಅಲ್ಲಿನ ಜನನೀರಿಗಾಗಿ ಪರದಾಡುತ್ತಿದ್ದರೆ ಕೊಳವೆ ಬಾವಿ ಹಾಕಿಸಿ ಎಂದು ಪುರಸಭೆ ಸದಸ್ಯ ದಯಾನಂದ್‌ ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ರಾಜಶೇಖರ್‌, ಸಿ.ಬಸವರಾಜು, ನಾಗರಾಜು, ಮಮತಾ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಪುರಸಭೆ ಅಧ್ಯಕ್ಷೆ ಪುಷ್ಪ, ಉಪಾಧ್ಯಕ್ಷೆ ರೇಣುಕಾ, ಮುಖ್ಯಾಧಿಕಾರಿ ಶ್ರೀನಿವಾಸ್‌ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ಶೀಘ್ರ ಮಳಿಗೆ ವಶಕ್ಕೆ :

ಪುರಸಭೆ ಅಂಗಡಿ ಮಳಿಗೆಗಳಿಂದ ಅದಾಯ ಬರುತ್ತಿಲ್ಲ, ಮಳಿಗೆಯ ವಾಯಿದೆ ಮುಗಿದರೂ, ಮಳಿಗೆ ಹಾರಾಜು ಆಗಿಲ್ಲ, ಕೋರ್ಟ್‌ನಲ್ಲಿರುವ ಮಳಿಗೆಯನ್ನು ಒಳ್ಳೆಯ ಲಾಯರ್‌ ಇಟ್ಟು , ದಾವೆಯನ್ನು ಹೂಡಿ ಮಳಿಗೆಯನ್ನು ಹಾರಾಜುಮಾಡಿ ಎಂದು ಪುರಸಭೆ ಸದಸ್ಯ ಮಲ್ಲೇಶ್‌ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಮೂರು ನೋಟಿಸ್‌ ನೀಡಲಾಗಿದೆ. ಸೋಮವಾರ ಪೊಲೀಸ್‌ ನೆರವಿನಿಂದ ಮಳಿಗೆಗಳನ್ನು ತೆರವು ಮಾಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next