ಚಿಕ್ಕಬಳ್ಳಾಪುರ : ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಪ್ರೋ.ಮುಮ್ತಾಜ್ ಆಲೀಖಾನ್ ಅವರ ಆರೋಗ್ಯದಲ್ಲಿ ಏರುಪಾರಾದ ಹಿನ್ನಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಮಾಜಿ ಸಚಿವ ಮಮ್ತಾಜ್ ಆಲೀಖಾನ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯ ಗ್ರಾಮದ ನಿವಾಸಿಯಾಗಿದ್ದು ಇವರ ಸರಳತೆಯನ್ನು ಗುರುತಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನಿರೀಕ್ಷಿತವಾಗಿ ಇವರನ್ನು ಸಂಪುಟದಲ್ಲಿ ಸಚಿವರನ್ನಾಗಿ ಮಾಡಿ ನಂತರ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿಕೊಂಡಿದ್ದು ಐತಿಹಾಸಿಕ ಅದೇ ಪ್ರಕಾರವಾಗಿ ಯಡಿಯೂರಪ್ಪ ಅವರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಹಾಗೂ ಚಿಕ್ಕಬಳ್ಳಾಪುರ ಜಿಲೆಯ ಉಸ್ತುವಾರಿ ಸಚಿವರಾಗಿ ಮೂರು ವರ್ಷಗಳ ಅವಧಿಯಲ್ಲಿ ಅಭಿವೃದ್ದಿ ದೃಷ್ಠಿಕೋನದಿಂದ ಕೈಗೊಂಡಿದ್ದ ಕಾರ್ಯಕ್ರಮ ಹಾಗೂ ಯೋಜನೆಗಳು ಇಂದು ಜಿಲ್ಲೆಯಲ್ಲಿ ವಿರಾಜಮಾನವಾಗಿರುವುದನ್ನು ಕಾಣುತಿದ್ದೇವೆ.
ಇದನ್ನೂ ಓದಿ:ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮಾದರಿಯಲ್ಲಿ ಹೊಸ ತಂತ್ರಜ್ಞಾನ ರೂಪಿಸಲು ಸರ್ಕಾರದ ಚಿಂತನೆ
ಮಾಜಿ ಸಚಿವ ಪ್ರೋ.ಮಮ್ತಾಜ್ ಆಲೀಖಾನ್ ಅವರು ಜಿಲ್ಲೆಯ ಹೊಸ ಆರಂಭದ ದಿನಗಳಲ್ಲಿ ಪ್ರಸ್ತುತ ಬಹು ಸುಂದರವಾಗಿ ತಲೆ ಎತ್ತಿರುವ ಜಿಲ್ಲಾಡಳಿತ ಭವನ, ಮಿನಿ ವಿಧಾನಸೌದ (ಈಗಿನ ತಾಲ್ಲೂಕು ಕಛೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಛೇರಿ), ನಂದಿಕ್ರಾಸ್ ಬಳಿಯ ಮೆಘ ಡೈರಿ, ಜಿಲ್ಲೆಯ ಹಲವಡೆ ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆಗಳು, ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳು ಇವರ ಕಾಲಾವಧಿಯಲ್ಲಿ ಅಭಿವೃದ್ದಿಗೊಂಡಿದ್ದು ವಿಶೇಷ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಶ್ವತವಾಗಿ ಉಳಿಯುವಂತಹ ಅಭಿವೃಧ್ಧಿ ಕಾಮಗಾರಿಗಳನ್ನು ನಡೆಸಿದ ಮಾಜಿ ಸಚಿವ ಪ್ರೋ,ಮಮ್ತಾಜ್ ಆಲೀಖಾನ್ ಇದೀಗ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇವರ ಆರೋಗ್ಯ ಶೀಘ್ರಗುಣಮುಖರಾಗಲೇಂದು ಜಿಲ್ಲೆಯ ಜನತೆ ಹಾರೈಸಿದ್ದಾರೆ.