Advertisement
ಮೂವತ್ತೈದು ವರ್ಷದ ಶಾಂತಲಾ, ತನ್ನ ಮೊದಲನೇ ಮಗಳು; ಎಂಟು ವರ್ಷದ ಸಿರಿಯನ್ನು ಸಮಾಲೋಚನೆಗೆ ಕರೆ ತಂದಿದ್ದರು. ಸಿರಿ ಇತ್ತೀಚೆಗೆ ಅಮ್ಮನೊಂದಿಗೆ ಒಡನಾಟ ಕಡಿಮೆ ಮಾಡಿ¨ªಾಳೆ. ಅಮ್ಮನ ಮಾತಿಗೆ ಬೆಲೆ ಕೊಡುವುದಿಲ್ಲ. ಅಮ್ಮ ಹೇಳಿದ ಯಾವ ಕೆಲಸವನ್ನೂ ಮಾಡುವುದಿಲ್ಲ. ಇದನ್ನು ಗಮನಿಸಿದ ಶಾಂತಲಾ, ಬೇಕಂತಲೇ ಏನಾದರೂ ವಿಷಯ ತೆಗೆದೂ ತೆಗೆದು ಸಿರಿಯನ್ನು ಮಾತಿಗೆ ಹಚ್ಚುವ ಪ್ರಯತ್ನ ಮಾಡಿದ್ದರು. ಆದರೂ ಆಕೆ ಗರ ಬಡಿದವಳಂತೇ ಇರುತ್ತಿದ್ದಳು. ತನ್ನ ಪುಟ್ಟ ತಂಗಿಯ ಬಗ್ಗೆಯೂ ನಿರ್ಲಿಪ್ತತೆ. ಶಾಲೆಯಲ್ಲೇನೋ ಒಳ್ಳೆಯ ವಿದ್ಯಾರ್ಥಿ ಎಂದು ಹೆಸರು ಗಳಿಸಿ¨ªಾಳೆ. ಆದರೆ, ಶಾಂತಲಾ ಎಷ್ಟು ಪುಸಲಾಯಿಸಿದರೂ ಹೋಂವರ್ಕ್ ಬರೆಯಲು ಕೇಳುವುದಿಲ್ಲ.
Related Articles
Advertisement
ಸಿರಿ, ಆ ಕುಟುಂಬದ ಮೊದಲನೇ ಮೊಮ್ಮಗುವಾದ್ದರಿಂದ, ಸಹಜವಾಗಿಯೇ ಎಲ್ಲರ ಅತೀ ಪ್ರೀತಿಗೆ ಪಾತ್ರಳಾಗಿದ್ದಳು. ಕಾಲಕ್ರಮೇಣ ಚಿಕ್ಕಪ್ಪನ ಮದುವೆಯಾಗಿ, ಅವರಿಗೆ ಮಗುವಾದ ಮೇಲೆ, ಚಿಕ್ಕಪ್ಪ ಮತ್ತು ಸಿರಿಯ ನಡುವಿನ ವಿಶೇಷ ಬಾಂಧವ್ಯಕ್ಕೆ ಧಕ್ಕೆಯಾಗಿತ್ತು. ಅವರು ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ವ್ಯತ್ಯಾಸಗಳಾಗಿವೆ. ಜೊತೆಗೆ, ಅಜ್ಜಿ-ತಾತನ ಸಮಯವೂ ಕೂಡಾ ಮೊಮ್ಮಕ್ಕಳ ನಡುವೆ ಹಂಚಿಹೋಗಿದೆ. ಸಿರಿಯ ಪುಟ್ಟ ತಂಗಿ, ಚೂಟಿಯಾಗಿದ್ದು ಎಲ್ಲರ ಗಮನ ಸೆಳೆದುಕೊಳ್ಳುತ್ತಿದ್ದಾಳೆ. ಇತ್ತೀಚೆಗೆ ಸಿರಿಯ ಅಪ್ಪನಿಗೆ ಆಫೀಸಿನಲ್ಲಿ ಬಡ್ತಿ ಸಿಕ್ಕಿ, ಕೆಲಸದ ಒತ್ತಡದಿಂದಾಗಿ ಆಕೆಯ ಬಗ್ಗೆ ಗಮನ ನೀಡಲಾಗುತ್ತಿಲ್ಲ. ಇದೆಲ್ಲವನ್ನು ಗುಬ್ಬಚ್ಚಿಯ ಕಥೆಯಂತೆ ಶಾಂತಲಾ, ಮಗಳಿಗೆ ನಿಧಾನವಾಗಿ ತಿಳಿಸಿ ಹೇಳಿದರು. ತಂದೆಯೂ ಮಕ್ಕಳಿಗಾಗಿ ಬಿಡುವು ಮಾಡಿಕೊಡರು. ಈಗ ಸಿರಿ, ಸಹಜ ಸ್ಥಿತಿಗೆ ಬಂದಿದ್ದಾಳೆ.
ಮಕ್ಕಳ ಕೇಸುಗಳು ಬಂದಾಗ, ಮೊದಲಿಗೆ ಅಪ್ಪ-ಅಮ್ಮನನ್ನು, ವಿವರವಾಗಿ ಸಂದರ್ಶನ ಮಾಡಬೇಕಾಗುತ್ತದೆ. ಕೌಟುಂಬಿಕ ವೃತ್ತಾಂತವನ್ನು ವಿಷದವಾಗಿ ಪಡೆದುಕೊಂಡಾಗ ಮಗು ಮಂಕಾಗಲು ಕಾರಣಗಳೇನೆಂದು ದೊರೆಯುತ್ತವೆ. ಕನ್ನಡಿಯ ಮೇಲಿನ ಧೂಳು ಒರೆಸಿದಾಗಲೇ ತಾನೇ ಮುಖದ ಅಂದ ಸ್ಪಷ್ಟವಾಗಿ ಕಾಣುವುದು?
ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ