ಮುಂಬಯಿ : ಮದ್ಯದ ಅಮಲಿನಲ್ಲಿ ವಿಮಾನದಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ದುಬೈನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಮುಂಬೈನ ಸಹರ್ ಪೊಲೀಸರು ಬಂಧಿಸಿದ್ದಾರೆ.
ಇಂಡಿಗೋದಿಂದ ದೂರು ಬಂದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಬಂಧಿತ ಪ್ರಯಾಣಿಕರ ಹೆಸರು ದತ್ತಾತ್ರೇಯ ಬಾಪರ್ಡೇಕರ್ ಮತ್ತು ಜಾನ್ ಜಾರ್ಜ್ ಡಿಸೋಜಾ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಇಂಡಿಗೋ ಪ್ರಯಾಣಿಕರನ್ನು ಐಪಿಸಿಯ ಸೆಕ್ಷನ್ 336 ಮತ್ತು ಸೆಕ್ಷನ್ 21,22 ಮತ್ತು 25 ಏರ್‌ಕ್ರಾಫ್ಟ್ ನಿಯಮಗಳ ಅಡಿಯಲ್ಲಿ ಕುಡಿದು ಮತ್ತು ಸಿಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನೂ ಔಪಚಾರಿಕವಾಗಿ ಬಂಧಿಸಲಾಯಿತು ಆದರೆ ಸೆಕ್ಷನ್‌ಗಳು ಜಾಮೀನು ನೀಡಬಹುದಾದ ಕಾರಣ, ಅವರಿಗೆ ಪೊಲೀಸ್ ಠಾಣೆಯಿಂದಲೇ ಜಾಮೀನು ನೀಡಲಾಯಿತು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಂಬೈ ಡಿಸಿಪಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ.