Advertisement

ವಿಘ್ನ ವಿನಾಶಕನ ಹೆಸರಲ್ಲಿ 264 ಕೋಟಿ ರೂ.ಗಳ ವಿಮೆ

10:39 AM Sep 16, 2018 | Team Udayavani |

ಮುಂಬಯಿ: ಮಾಯಾನಗರಿ ಮುಂಬಯಿಯಲ್ಲಿ ಗಣೇಶೋತ್ಸವಕ್ಕೆಂದು ಖರ್ಚು ಮಾಡುವ ಮೊತ್ತ ಒಂದೆರಡು ಕೋಟಿಯಲ್ಲ, ನೂರಾರು ಕೋಟಿ ರೂಪಾಯಿ! ಹೌದು. ಇಲ್ಲಿ ಇದೊಂದು ರೀತಿಯ ಪ್ರತಿಷ್ಠೆಯ ಸ್ಪರ್ಧೆ ಇದ್ದಂತೆ. ಪ್ರತಿವರ್ಷದಂತೆ ಈ ಬಾರಿಯೂ ಇಲ್ಲಿನ ಶ್ರೀಮಂತ ಗಣೇಶ ಮಂಡಳಿಗಳಲ್ಲಿ ಒಂದಾದ ಜಿಎಸ್‌ಬಿ ಸೇವಾ ಮಂಡಳಿ ತಾನು ಪ್ರತಿಷ್ಠಾಪಿಸಿದ ಗಣೇಶನ ಹೆಸರಲ್ಲಿ ಬರೋಬ್ಬರಿ 264.8 ಕೋಟಿ ರೂ. ಮೊತ್ತದ ವಿಮೆ ಮಾಡಿಸಿ ಅಚ್ಚರಿ ಮೂಡಿಸಿದೆ.

Advertisement

ಆದರೆ ಈ ಸೇವಾ ಮಂಡಳಿಗೆ ಇದೇನೂ ಹೊಸದಲ್ಲ. 2016ರಲ್ಲಿ 300 ಕೋಟಿ ರೂ. ವಿಮೆ ಮಾಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಅಲ್ಲದೆ, ಹೊಸ ದಾಖಲೆಯನ್ನೂ ನಿರ್ಮಿಸಿತ್ತು. ಆದರೆ, ಕಳೆದ ವರ್ಷ ವಿಮೆಯ ಮೊತ್ತ 264.3 ಕೋಟಿ ರೂ.ಗೆ ಸೀಮಿತವಾಗಿದೆ. ಈ ವರ್ಷ ಕೊಂಚ ಹೆಚ್ಚಿನ ವಿಮೆ ಮಾಡಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೇವಾ ಮಂಡಳಿ ಸದಸ್ಯ ಆರ್‌.ಜಿ.ಭಟ್‌, “”ಈ ವಿಮೆಯಲ್ಲಿ ಅನೇಕ ಅಂಶಗಳು ಸೇರಿಕೊಂಡಿರುತ್ತವೆ. ಹೆಚ್ಚು ಕಡಿಮೆ 19 ಕೋಟಿ ರೂ.ನಷ್ಟು ಚಿನ್ನ, ಬೆಳ್ಳಿ ಆಭರಣಗಳು ಮತ್ತು ನಗದಿನ ಮೇಲಿನದ್ದಾಗಿರುತ್ತವೆ. ವಿದ್ಯುತ್‌ ಅವಘಡ, ಭೂಕಂಪಗಳಿಂದಾಗುವ ಹಾನಿಯನ್ನು ಭರಿಸಿಕೊಳ್ಳುವ ಹಿನ್ನೆಲೆಯಲ್ಲೂ ವಿಮೆ ಮಾಡಿಸಲಾಗಿರುತ್ತದೆ. ಅಲ್ಲದೆ, 2,244 ಕೆಲಸಗಾರರು, ಸದಸ್ಯರು ಹಾಗೂ ಸ್ವಯಂಸೇವಕರಿಗಾಗಿ ತಲಾ 10 ಲಕ್ಷ ರೂ.ನ ಅಪಘಾತ ವಿಮೆಯೂ ಒಳಗೊಂಡಿರುತ್ತದೆ” ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next