Advertisement

ಮುಂಬಯಿ ಮಳೆ : ಮತ್ತೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

05:28 PM Aug 05, 2019 | Hari Prasad |

ಮುಂಬಯಿ: ಕಳೆದ ಕೆಲವು ದಿನಗಳಿಂದ ಮುಂಬಯಿಗರನ್ನು ಎಡೆಬಿಡದೆ ಕಾಡುತ್ತಿರುವ ಮಹಾಮಳೆ ಮುಂದಿನ ಕೆಲವು ದಿನಗಳವರೆಗೆ ಮತ್ತೆ ಮುಂದುವರಿಯುವ ಲಕ್ಷಣಗಳಿವೆ. ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಈ ಭಾಗದಲ್ಲಿ ‘ರೆಡ್ ಅಲರ್ಟ್’ ಘೋಷಿಸಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ಕಾರಣದಿಂದ ಈಗಾಗಲೇ ಮುಂಬಯಿ ನಗರದಲ್ಲಿ ರಸ್ತೆ, ರೈಲು ಮತ್ತು ವೈಮಾನಿಕ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Advertisement

ಸಾಂತಾಕ್ರೂಝ್, ನಾಗ್ಪಾಡ ಮತ್ತು ಸಿಯೋನ್ ಪ್ರದೇಶಗಳಲ್ಲ ಈಗಾಗಲೇ ನೆರೆ ನೀರು ತುಂಬಿಕೊಂಡಿದೆ. ಇನ್ನು ಥಾಣೆ, ಪಾಲ್ಗಾರ್ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಸಹ ನೆರೆ ನೀರು ಆವರಿಸಿಕೊಂಡಿದೆ. ಈತನ್ಮಧ್ಯೆ ಹವಾಮಾನ ಇಲಾಖೆ ನೀಡಿರುವ ‘ಭಾರೀ ಅಥವಾ ಅತೀವ ಮಳೆಯಾಗುವ’ ಸೂಚನೆ ನೀಡಿರುವುದು ಈ ಭಾಗದ ಜನರನ್ನು ಇನ್ನಷ್ಟು ಚಿಂತೆಗೀಡುಮಾಡಿದೆ.

ರೈಲು ಹಳಿಗಳ ಮೇಲೆಲ್ಲಾ ಮಳೆ ನೀರು ನಿಂತಿರುವುದರಿಂದ ಹಾರ್ಬರ್ ಲೈನ್ ಮತ್ತು ಅಂಬೆರ್ ನಾಥ್ ಹಾಗೂ ಬದ್ಲಾಪುರ ನಡುವಿನ ರೈಲುಗಳ ಸೇವೆಯನ್ನು ಆದಿತ್ಯವಾರದಂದು ಸ್ಥಗಿತಗೊಳಿಸಲಾಗಿತ್ತು.

ಈ ಕೆಳಗಿನ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ:

– 11302 ಬೆಂಗಳೂರು – ಮುಂಬಯಿ ಉದ್ಯಾನ್ ಎಕ್ಸ್ ಪ್ರೆಸ್ ಜೆಸಿಒ ರೈಲನ್ನು ಸೊಲಾಪುರದಲ್ಲಿ ತಾತ್ಕಾಲಿಕ ನಿಲುಗಡೆ ಮಾಡಲಾಗಿದೆ.

Advertisement

– 51154 ಭುಸಾವಲ್ – ಮುಂಬಯಿ ಪ್ರಯಾಣಿಕ ರೈಲನ್ನು ಇಗಾಟ್ ಪುರಿಯಲ್ಲಿ ತಾತ್ಕಾಲಿಕ ನಿಲುಗಡೆಗೊಳಿಸಲಾಗಿದೆ.

– 11014 ಕೊಯಂಬತ್ತೂರು – ಎಲ್.ಟಿ.ಟಿ. ಎಕ್ಸ್ ಪ್ರೆಸ್ ರೈಲನ್ನು ಪುಣೆಯಲ್ಲಿ ನಿಲುಗಡೆಗೊಳಿಸಲಾಗಿದೆ. ಇದು ಮತ್ತೆ ಇಂದು ಹೊರಡುವ ಸಾಧ್ಯತೆ ಇದೆ.

ರದ್ದುಗೊಂಡ ರೈಲು ಸೇವೆಗಳ ವಿವರ:

– 17032 ಹೈದ್ರಾಬಾದ್ – ಮುಂಬಯಿ ಎಕ್ಸ್ ಪ್ರೆಸ್

– 12702 ಹೈದ್ರಾಬಾದ್ – ಮುಂಬಯಿ ಹುಸೈನ್ ಸಾಗರ್ ಎಕ್ಸ್ ಪ್ರೆಸ್

– 12116 ಸೋಲಾಪುರ – ಮುಂಬಯಿ ಸಿದ್ದೇಶ್ವರ ಎಕ್ಸ್ ಪ್ರೆಸ್

– 12115 ಮುಂಬಯಿ – ಸೋಲಾಪುರ ಸಿದ್ದೇಶ್ವರ ಎಕ್ಸ್ ಪ್ರೆಸ್

– 51324/51323 ಮನ್ಮಾಡ್ – ಇಗಾಟ್ ಪುರಿ – ಮನ್ಮಾಡ್ ಪ್ರಯಾಣಿಕರ ರೈಲು

ಮಾರ್ಗ ಬದಲಾವಣೆ:
06051 ಚೆನ್ನೈ – ಅಹಮದಾಬಾದ್ ವಿಶೇಷ ರೈಲನ್ನು ದೌಂಡ್ – ಮನ್ಮಾಡ್ – ಜಲಗಾಂವ್ –ಸೂರತ್ ಮಾರ್ಗಕ್ಕೆ ಬದಲಾವಣೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next