ಮುಂಬೈ: 20 ವರ್ಷಗಳಿಂದ ಕಾಣೆಯಾಗಿದ್ದ ತನ್ನ ತಾಯಿಯನ್ನು ಪತ್ತೆ ಹಚ್ಚಲು ಮುಂಬೈ ಮೂಲದ ಮಹಿಳೆಗೆ ಸಾಮಾಜಿಕ ಜಾಲತಾಣ ನೆರವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣ ಎಷ್ಟೊಂದು ಅನುಕೂಲ ಕಲ್ಪಿಸಲಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇದನ್ನೂ ಓದಿ:ಕಳೆದ 5ವರ್ಷಗಳಲ್ಲಿ 657 ಭದ್ರತಾ ಸಿಬಂದಿಗಳು ಆತ್ಮಹತ್ಯೆಯಿಂದ ಸಾವು
“ತನ್ನ ತಾಯಿ ಅಡುಗೆ ಕೆಲಸಕ್ಕಾಗಿ ದುಬೈಗೆ ಹೋಗಿದ್ದರು, ಆದರೆ ಅವರು ಮತ್ತೆ ವಾಪಸ್ ಬಂದಿರಲೇ ಇಲ್ಲ” ಎಂದು ಮುಂಬೈ ನಿವಾಸಿ ಯಾಸ್ಮಿನ್ ಶೇಕ್ ತಿಳಿಸಿದ್ದಾರೆ.
ಸುಮಾರು 20 ವರ್ಷಗಳಿಂದ ಕಣ್ಮರೆಯಾಗಿದ್ದ ನನ್ನ ತಾಯಿ ಬಗ್ಗೆ ಪಾಕಿಸ್ತಾನ ಮೂಲದ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಗಮನಕ್ಕೆ ಬಂದಿತ್ತು. ಆ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ ತನ್ನ ತಾಯಿ ಇದ್ದಿರುವುದನ್ನು ಗಮನಕ್ಕೆ ಬಂದಿತ್ತು ಎಂದು ಯಾಸ್ಮಿನ್ ಎಎನ್ ಐಗೆ ವಿವರ ನೀಡಿದ್ದಾರೆ.
ನನ್ನ ತಾಯಿ ಕಳೆದ 2ರಿಂದ 4 ವರ್ಷಗಳ ಕಾಲ ಕತಾರ್ ಗೆ ಹೋಗಿ ಬರುತ್ತಿದ್ದರು. ಬಳಿಕ ಏಜೆಂಟರೊಬ್ಬರ ಸಹಾಯದಿಂದ ದುಬೈಗೆ ಹೋದಾಕೆ ಮರಳಿ ಬಂದಿರಲೇ ಇಲ್ಲ. ಆಕೆ ಎಲ್ಲಿದ್ದಾರೆ ಎಂಬ ಬಗ್ಗೆ ಪತ್ತೆ ಹಚ್ಚಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಕೈಚೆಲ್ಲಿದ್ದೇವು. ದೂರು ಕೊಡಲು ನಮ್ಮ ಬಲಿ ಯಾವ ಪುರಾವೆಯೂ ಇಲ್ಲವಾಗಿತ್ತು ಎಂದು ಶೇಕ್ ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಗಮನಿಸಿದ ನಂತರವೇ ನನಗೆ ನನ್ನ ತಾಯಿ ಪಾಕಿಸ್ತಾನದಲ್ಲಿರುವುದು ತಿಳಿಯಿತು. ಇಲ್ಲದಿದ್ದರೆ ಒಂದು ವೇಳೆ ನಮಗೆ ಆಕೆ ದುಬೈ, ಸೌದಿ ಅಥವಾ ಬೇರೆ ಎಲ್ಲಿಯೋ ಇದ್ದಿರಬಹುದು ಎಂದು ನಂಬಿರುತ್ತಿದ್ದೇವು ಎಂದು ಶೇಕ್ ಹೇಳಿದರು.
ನಮ್ಮ ತಾಯಿ ಹಮೀದಾ ಬಾನು ಅವರನ್ನು ಪಾಕಿಸ್ತಾನದಿಂದ ಶೀಘ್ರವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ನೆರವು ನೀಡಬೇಕೆಂದು ಶೇಕ್ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.