Advertisement
ಕಳೆದ ಕೆಲ ದಿನಗಳಿಂದ ಮುಂಬಯಿ ಸುತ್ತ ಧಾರಾಕಾರ ಮಳೆಯಾಗುತ್ತಿದ್ದು ಪರಿಣಾಮ ಕೆಲವೊಂದು ಕಡೆಗಳಲ್ಲಿ ರೈಲು ಹಳಿಗಳು ಜಲಾವೃತಗೊಂಡಿದೆ ಇದರಿಂದಾಗಿ ಕೆಲವೊಂದು ರೈಲುಗಳ ಸಂಚಾರ ಸ್ಥಗಿತಗೊಂಡಿದೆ, ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಇಲ್ಲಿನ ಜನ ರೈಲನ್ನೇ ನಂಬಿಕೊಂಡಿದ್ದಾರೆ ಅದರಂತೆ ಇಲ್ಲೊಬ್ಬರು ಮಹಿಳೆ ಮುಂಬೈನ ಬೇಲಾಪುರ ನಿಲ್ದಾಣದಿಂದ ಥಾಣೆಗೆ ಹೋಗಲು ಬೆಳಿಗ್ಗೆ ರೈಲ್ವೆ ಪ್ಲಾಟ್ ಫಾರ್ಮ್ ಗೆ ಬಂದಿದ್ದಾರೆ ಈ ವೇಳೆ ಹೆಚ್ಚಿನ ಜನಸಂದಣಿ ಇದ್ದ ಪರಿಣಾಮ ಮಹಿಳೆ ರೈಲು ಹತ್ತುವ ವೇಳೆ ಮಹಿಳೆ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಅಷ್ಟೋತ್ತಿಗಾಗಲೇ ರೈಲು ಹೊರಟಿದೆ ಇದನ್ನು ಗಮನಿಸಿದ ಅಲ್ಲಿದ್ದ ಭದ್ರತಾ ಸಿಬಂದಿ ಕೂಡಲೇ ಸೂಚನೆ ನೀಡಿ ರೈಲನ್ನು ನಿಲ್ಲಿಸಿದ್ದಾರೆ ಕೂಡಲೇ ರೈಲಿನ ಕೆಳಗೆ ಹೋಗಿ ಮಹಿಳೆಯನ್ನು ಹೊರಗೆಳೆದಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ರೈಲಿನ ಇಂದು ಬೋಗಿ ಆಕೆಯ ಕಾಲಿನ ಮೇಲೆ ಹರಿದು ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ.
Advertisement
Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆ
03:20 PM Jul 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.