ಮುಂಬಯಿ: ಪೋರ್ಟ್‌ನ ಲ್ಲಿರುವ ಮುಂಬಯಿ ವಿ.ವಿ.ಯ ಕೌಸಾಜಿ ಜಹಂಗೀರ್ ಹಾಲ್‌ನಲ್ಲಿ ಇತ್ತೀಚೆಗೆ ನಡೆದ 2018-19ನೇ ಸಾಲಿನ ಮುಂಬಯಿ ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಕನ್ನಡ ವಿಭಾ ಗದಿಂದ 2017-18ರ ಉತ್ತಮ ಸಾಧನೆಗಾಗಿ ಆರ್. ಎಸ್ ಗೀತಾ ಹಾಗೂ 2018-19ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಸ್. ನಳಿನಾ ಪ್ರಸಾದ್ ಅವರನ್ನು ಶ್ರೀ ವರದರಾಜ ಆದ್ಯ ಬಂಗಾರದ ಪದಕವನ್ನಿತ್ತು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವ ವಿದ್ಯಾ ಲಯದ ಕುಲಪತಿ, ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್. ವಿಶೇಷ ಆಹ್ವಾನಿತರಾದ ನೋಬೆಲ್ ಪ್ರಶಸ್ತಿ ಪುರಸ್ಕೃತ ಸರ್ ರಿಚರ್ಡ್ ಜಾನ್ ರಾಬರ್ಟ್, ಉಪಕುಲಪತಿ ಪ್ರೊ| ಸುಹಾಸ್ ಪೆಡೆ°àಕರ್, ಪ್ರೊ| ರವೀಂದ್ರ ಕುಲಕರ್ಣಿ ಅವರು ಉಪಸ್ಥಿತರಿದ್ದರು.
2018ರ ಎಪ್ರಿಲ್‌ನಲ್ಲಿ ನಡೆದ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಅತಿ ಹೆಚ್ಚು ಅಂಕ ಗಳಿಸಿದ 51 ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಹಾಗೂ ಪ್ರಶಸ್ತಿ ಪತ್ರವನ್ನಿತ್ತು ಗೌರವಿಸಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸರ್ ರಾಬರ್ಟ್ ಅವರು, ತಮ್ಮ ವಿದ್ಯಾರ್ಥಿ ಜೀವನದ ಬಗ್ಗೆ ಪ್ರಸ್ತಾವಿಸುತ್ತಾ, ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗಿ ವಿದ್ಯಾರ್ಜನೆ ಮಾಡುವುದಕ್ಕಿಂತ ತಮ್ಮ ಆಸಕ್ತಿಯ ವಿಷಯದ ಬಗ್ಗೆ ವಿಶೇಷ ಕಾಳಜಿ ಹಾಗೂ ಶ್ರದ್ಧೆಯಿಂದ ಮುಂದುವರಿದಲ್ಲಿ ಯಶಸ್ಸು ಖಂಡಿತ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್. ಉಪಾಧ್ಯ, ಪದಕ ವಿಜೇತರ ಪೋಷಕರಾದ ಚಂದ್ರಶೇಖರ ಮತ್ತು ಪಾರ್ವತಿ ಚಂದ್ರಶೇಖರ, ಮಂಜುನಾಥ್ ಮತ್ತು ಎಚ್. ಸಿ. ಕೃಷ್ಣ ಪ್ರಸಾದ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿಜೇತರನ್ನು ಅಭಿನಂದಿಸಿದರು.