Advertisement
“ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್’ನಲ್ಲಿ ಮೊದಲು ಬ್ಯಾಟಿಂಗಿಗೆ ಇಳಿದ ಮುಂಬಯಿ ಸರದಿ ಮೇಲೆ ಕರ್ನಾಟಕದ ಬೌಲರ್‌ಗಳು ಘಾತಕವಾಗಿ ಎರಗಿದರು. ವೇಗಿಗಳಾದ ವಿ. ಕೌಶಿಕ್ (45ಕ್ಕೆ 3), ಅಭಿಮನ್ಯು ಮಿಥುನ್ (48ಕ್ಕೆ 2), ರೋನಿತ್ ಮೋರೆ (47ಕ್ಕೆ 2) ಹಾಗೂ ಪ್ರತೀಕ್ ಜೈನ್ (20ಕ್ಕೆ 2) ಬಿಗು ಬೌಲಿಂಗ್ ದಾಳಿಗೆ ಸಿಲುಕಿದ ಮುಂಬಯಿ 55.5 ಓವರ್‌ಗಳಲ್ಲಿ ಸರ್ವಪತನ ಕಂಡಿತು.
ಶಮ್ಸ್ ಮಲಾನಿ (13ಕ್ಕೆ 2) ಮತ್ತು ಶಶಾಂಕ್ ಅಟ್ಟರ್ಡೆ (14ಕ್ಕೆ 1) ವಿಕೆಟ್ ಹಂಚಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವುದು ಕರ್ನಾಟಕದ ಸದ್ಯದ ಗುರಿ. ಪೃಥ್ವಿ ಶಾ, ರಹಾನೆ ವಿಫಲ
ಕಳೆದ ಪಂದ್ಯದಲ್ಲಿ ತವರಿನ ವಾಂಖೇಡೆ ಅಂಗಳ ದಲ್ಲಿ ರೈಲ್ವೇಸ್‌ಗೆ 10 ವಿಕೆಟ್‌ಗಳಿಂದ ಶರಣಾಗಿದ್ದ ಮುಂಬಯಿ, ಈ ಮುಖಾಮುಖೀಯಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
Related Articles
Advertisement
ಆದರೆ ನಾಯಕ ಸೂರ್ಯಕುಮಾರ್ ಯಾದವ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ರಕ್ಷಣೆಗೆ ನಿಂತರು. ಅವರಿಗೆ ಶಶಾಂಕ್ ಅಟ್ಟರ್ಡೆ ಉತ್ತಮ ಬೆಂಬಲವಿತ್ತರು. 7ನೇ ವಿಕೆಟಿಗೆ 88 ರನ್ ಒಟ್ಟುಗೂಡಿತು. ಯಾದವ್ 94 ಎಸೆತಗಳಿಂದ 77 ರನ್ ಮಾಡಿದರು (10 ಬೌಂಡರಿ, 2 ಸಿಕ್ಸರ್). ಯಾದವ್ ಹೊರತುಪಡಿಸಿದರೆ 35 ರನ್ ಮಾಡಿದ ಶಶಾಂಕ್ ಅವರದೇ ಹೆಚ್ಚಿನ ಗಳಿಕೆ.
ಕೇರಳ ಬ್ಯಾಟಿಂಗ್ ಕುಸಿತಹೈದರಾಬಾದ್, ಜ. 3: ಹೈದರಾಬಾದ್ ಮತ್ತು ಕೇರಳ ನಡುವಿನ ರಣಜಿ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ. ಮೊದಲ ದಿನ ಕೇವಲ 41 ಓವರ್‌ಗಳ ಆಟವಷ್ಟೇ ನಡೆದಿದ್ದು, ಕೇರಳ 7 ವಿಕೆಟಿಗೆ 126 ಮಾಡಿದೆ. ಇದರಲ್ಲಿ 20 ರನ್ ಎಕ್ಸ್‌ಟ್ರಾ ರೂಪದಲ್ಲಿ ಬಂದಿದೆ. ರವಿ ಕಿರಣ್ (24ಕ್ಕೆ 3) ಮತ್ತು ಮೊಹಮ್ಮದ್ ಸಿರಾಜ್ (36ಕ್ಕೆ 2) ತವರಿನಂಗಳದ ಲಾಭವೆತ್ತಿದರು. ಕೇರಳ 32ಕ್ಕೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು. ನಾಯಕ ಸಚಿನ್ ಬಾಬಿ 29, ಸಲ್ಮಾನ್ ನಜೀರ್ 37 ರನ್ ಮಾಡಿ ಸಣ್ಣ ಮಟ್ಟದ ಹೋರಾಟ ಪ್ರದರ್ಶಿಸಿದರು. ಸಂಕ್ಷಿಪ್ತ ಸ್ಕೋರ್
ಮುಂಬಯಿ-194 (ಯಾದವ್ 77, ಅಟ್ಟರ್ಡೆ 35, ಶಾ 29, ತುಷಾರ್ 10, ಕೌಶಿಕ್ 45ಕ್ಕೆ 3, ಪ್ರತೀಕ್ 20ಕ್ಕೆ 2, ಮೋರೆ 47ಕ್ಕೆ 2, ಮಿಥುನ್ 48ಕ್ಕೆ 2, ಗೋಪಾಲ್ 24ಕ್ಕೆ 1). ಕರ್ನಾಟಕ-3 ವಿಕೆಟಿಗೆ 79 (ಸಮರ್ಥ್ ಬ್ಯಾಟಿಂಗ್ 40, ಪಡಿಕ್ಕಲ್ 32, ಕದಮ್ 4, ರೆಡ್ಡಿ 0, ನಾಯರ್ ಬ್ಯಾಟಿಂಗ್ 0, ಮುಲಾನಿ 13ಕ್ಕೆ 2, ಅಟ್ಟರ್ಡೆ 14ಕ್ಕೆ 1).