ಅಬುಧಾಭಿ : ಮುಂಬೈ ವಿರುದ್ಧದ ಪಮದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಶ್ರೇಯಸ್ ಪಡೆ ನಿಗದಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 162 ಪೇರಿಸಿ 163 ರ ಗುರಿಯನ್ನು ನೀಡಿದೆ.
ಡೆಲ್ಲಿಯ ಆರಂಭಿಕ ಜೋಡಿಯಲ್ಲಿ ಪೃಥ್ವಿ ಶಾ ಬರೀ ರನ್ ಗಳಿಸಿ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಕೃನಾಲ್ ಪಾಂಡ್ಯ ಕೈಗೆ ಕ್ಯಾಚ್ ಕೊಟ್ಟು ಬಹುಬೇಗನೇ ಪೆವಿಲಿಯನ್ ಕಡೆ ದಾಪುಗಾಲಿಟ್ಟರು. ಸಿಕ್ಕ ಮೊದಲ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳದ ಅಜಿಂಕ್ಯ ರಹಾನೆ 15 ರನ್ ಕೃನಾಲ್ ಪಾಂಡ್ಯ ಎಸೆತದಲ್ಲಿ ಔಟ್ ಆದರು. ಆರಂಭದಿಂದಲೇ ಬಿರುಸಿನಿಂದ ಬ್ಯಾಟ್ ಬೀಸಿದ ಶಿಖರ್ ಧವನ್ 69 ರನ್ ಪೂರ್ತಿಗೊಳಿಸಿ ತಂಡಕ್ಕೆ ನೆರವಾದರು.
ನಾಯಕ ಶ್ರೇಯಸ್ ಅಯ್ಯರ್ ಎಂದಿನಂತೆ ತನ್ನ ಭರ್ಜರಿ ಬ್ಯಾಟಿಂಗ್ ಲಯವನ್ನು ಮುಂದುವರಿಸಿ ತಂಡದ ಸ್ಕೋರ್ ಏರಿಕೆಗೆ ನೆರವಾದರು. ಅಯ್ಯರ್ 5 ಬೌಂಡರಿಯೊಂದಿಗೆ 42 ರನ್ ಸಿಡಿಸಿ ಕೃನಾಲ್ ಪಾಂಡ್ಯ ಎಸೆತಕ್ಕೆ ಬೌಲ್ಟ್ ಕೈಗೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಮಾರ್ಕಸ್ ಸ್ಟೊಯಿನಿಸ್ 13 ರನ್ ಗಳಿಸಿ ರನ್ ಔಟ್ ಆದರು.
ಅಂತಿಮವಾಗಿ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಪೇರಿಸಿ 163 ರ ಸವಾಲನ್ನು ನೀಡಿದೆ.
ಮುಂಬೈ ಉತ್ತಮವಾಗಿ ಬೌಲ್ ಮಾಡಿದ ಕೃನಾಲ್ 4 ಓವರ್ ನಲ್ಲಿ 26 ರನ್ ಗಳನ್ನು ಕೊಟ್ಟು 2 ಪ್ರಮುಖ ವಿಕೆಟ್ ಗಳನ್ನು ಪಡೆದುಕೊಂಡರು.