Advertisement

30 ಶ್ವಾನಗಳ ಮೇಲೆ ಲೈಂಗಿಕ ದೌರ್ಜನ್ಯ : ತರಕಾರಿ ವ್ಯಾಪಾರಿ ಬಂಧನ!

04:51 PM Mar 15, 2021 | Team Udayavani |

ಮುಂಬೈ : ತರಕಾರಿ ವ್ಯಾಪಾರಿಯೊಬ್ಬ 30 ಬೀದಿ ನಾಯಿಗಳ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದ್ದು, ವಿಕೃತಿ ಮೆರೆದಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿಯನ್ನು ಅಹಮದ್ ಶಾಹಿ(60) ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಮುಂಬೈನ ಅಂಧೇರಿ ಪ್ರದೇಶದಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದಾನೆ. ಇಲ್ಲಿಯವರೆಗೆ ಈತ ಬರೋಬ್ಬರಿ 30 ನಾಯಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಪೊಲೀಸರ ಬಂಧನದಲ್ಲಿದ್ದಾನೆ.

ಮಹಮದ್ ಶಾಹಿ ನಾಯಿಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ ವೇಳೆ ಮುಂಬೈನ NGO ಸಂಘವೊಂದ ಆ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದೆ. ಬಾಂಬೆ ಅನಿಮಲ್ ರೈಟ್ ಸಂಘವು ದೂರು ನೀಡಿದ ಮೇಲೆ ಈ ವಿಕೃತಿ ಬೆಳಕಿಗೆ ಬಂದಿದೆ.

ಮುಂಬೈನ ಜುಹು ಗಲ್ಲಿಯಲ್ಲಿರುವ ಹೆಣ್ಣು ನಾಯಿಗಳ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದೇವೆ. ಬಲಿಪಶು ನಾಯಿಗಳ ಪಟ್ಟಿಯನ್ನು ನಾವು ಬಿಡುಗಡೆ ಮಾಡುತ್ತೇವೆ. ಆರೋಪಿಗೆ ಮಾನವೀಯತೆ ಇಲ್ಲದೆ, ಕೃತ್ಯವನ್ನು ಎಸಗಿದ್ದು ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಮದ್ ಶಾಹಿ ಮೇಲೆ ಸೆಕ್ಷನ್ 377(ಅಸ್ವಾಭಾವಿಕ ಲೈಂಗಿಕತೆ), 429(ಪ್ರಾಣಿಗಳ ಮೇಲೆ ದೌರ್ಜನ್ಯ) ಕಾನೂನಿನಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next