Advertisement
ನ. 15ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿಯ ಅಲ್ಲಿನ ಜೆ. ಪಿ. ನಾಯಕ್ ಭವನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನವ ದೆಹಲಿ ಸಂಸ್ಥೆಯ ಸಹಯೋಗದೊಂದಿಗೆ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು “ಮಧ್ಯಕಾಲಿನ ಕನ್ನಡ ಸಾಹಿತ್ಯ’ ವಿಚಾರವಾಗಿ ಆಯೋಜಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಂಗೀತ ಕ್ಷೇತ್ರದ ಮಹಾಪ್ರಬಂಧ ಆಶ್ಚರ್ಯಕವಾದರೂ ಇದೊಂದು ಶ್ರೇಷ್ಠವಾದ ಮಹಾಪ್ರಬಂಧ. ಶ್ಯಾಮಲಾ ಅವರು ಓರ್ವ ಸಂಗೀತಗಾರ್ತಿಯಾಗಿದ್ದು ಮಹಾನ್ ಕೃತಿ ರಚಿಸಿ ಲೋಕವೇ ಗುರುತು ಹಚ್ಚುವ ಕಾಯಕ ನಿರ್ವಹಿಸಿದ್ದಾರೆ. ಸಂಗೀತ ಮತ್ತು ಸಾಹಿತ್ಯಕ್ಕೆ ಗಾಢ ಸಂಬಂಧವಿದ್ದು ನಾವು ಕಾವ್ಯ ವಸ್ತುಕ್ಕಿಂತ ಕಲೆಯ ಕರ್ತವ್ಯದ ಬಗ್ಗೆ ಚರ್ಚಿಸುವ ಅಗತ್ಯವಿದೆ. ಪೂರ್ವಜರು ಅಭ್ಯಾಸ ಬಲದಿಂದ ಪದ್ಯದಿಂದಲೂ ಬದುಕು ರೂಪಿಸಿಕೊಳ್ಳುವುದನ್ನು ಅರಿತಿದ್ದರು. ಮಾತ್ರವಲ್ಲದೆ ಕಾವ್ಯದಲ್ಲಿ ಪ್ರಕೃತಿ ಮತ್ತು ಮನುಷ್ಯನ ಸಂಬಂಧವನ್ನು ಮೂಡಿಸಿ ಬದುಕಿನ ಮೌಲ್ಯದ ಅರಿವು ಮೂಡಿಸಿದ್ದರು. ಆದರೆ ಆಧುನಿಕ ಜನತೆ ವಿಷಯಗಳನ್ನೇ ವಿವರವಾಗಿ ಓದುವ ಪರಿಪಾಠ ಹೊಂದಿಲ್ಲ ಎನ್ನುವುದೇ ಶೋಚನೀಯ. ಈ ಕೃತಿಯಿಂದ ಮತ್ತೆ ಸಂಗೀತ ಸಾಹಿತ್ಯ ಚರಿತ್ರೆ ಓದುವ ಆಸಕ್ತಿ ನನ್ನಲ್ಲಿ ಬೆಳೆದಿದೆ ಎಂದೂ ಹನೂರು ತಿಳಿಸಿದರು.
Related Articles
Advertisement
ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ, ಡಾ| ಸಿ. ಆರ್. ಶ್ಯಾಮಲಾ, ವಿದುಷಿ ಶ್ಯಾಮಲಾ ಪ್ರಕಾಶ್ ವಿಚಾರ ಸಂಕಿರಣ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ವಿಚಾರ ಮಂಡಿಸಿದರು. ಡಾ| ವಿಶ್ವನಾಥ್ ಕಾರ್ನಾಡ್ ಮತ್ತು ಎಚ್. ಬಿ. ಎಲ್. ರಾವ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಡಾ| ಭರತ್‌ಕುಮಾರ್ ಪೊಲಿಪು, ಡಾ| ಮಮತಾ ರಾವ್, ಮನೋಹರ್ ಎಂ. ಕೋರಿ, ಸುಜತಾ ಎಸ್. ದೇವಾಡಿಗ, ಮೋಹನ್ ಮಾರ್ನಾಡ್, ಡಾ| ಕೆ. ರಘುನಾಥ್, ಡಾ| ಗಿರಿಜಾ ಶಾಸ್ತ್ರಿ, ಆರ್. ಪ್ರಕಾಶ್, ಪದ್ಮನಾಭ ಸಸಿಹಿತ್ಲು, ಮಧುಸೂದನ ರಾವ್, ಡಾ| ದಾûಾಯಣಿ ಯಡವಳ್ಳಿ, ಡಾ| ಸುಮಾ ದ್ವಾರಕನಾಥ್, ಅನುಸೂಯ ಗಲಗಲಿ, ಡಾ| ಸಹನಾ ಪೋತಿ, ಯಜ್ಞನಾರಾಯಣ ಕೆ.ಸುವರ್ಣ, ಸುರೇಂದ್ರಕುಮಾರ್ ಮಾರ್ನಾಡ್, ಸುರೇಖಾ ಸುಂದರ್ ದೇವಾಡಿಗ, ಸಾ.ದಯಾ, ಗೋಪಾಲ ತ್ರಾಸಿ, ಅವಿನಾಶ್ ಕಾಮತ್, ಜಯ ಪೂಜಾರಿ ಕೊಜಕೊಳ್ಳಿ, ಅನಿತಾ ಪಿ. ಪೂಜಾರಿ ತಾಕೋಡೆ, ಹೇಮಾ ಎಸ್. ಅಮೀನ್ ಮತ್ತಿತರರು ಹಾಜರಿದ್ದು ಶ್ಯಾಮಲಾ ಪ್ರಕಾಶ್‌ಗೆ ಶುಭ ಹಾರೈಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಿವರಾಜ್ ಎಂ. ಜಿ. ವಂದಿಸಿದರು.