ಮುಂಬಯಿ: ಜ್ಞಾನವು ಹೆಚ್ಚು ಶಕ್ತಿಯುತ ವಾಗಿದ್ದು, ಅಭಿಜ್ಞಾನವನ್ನು ಹಂಚಿಕೊಂಡಾಗ ಅದು ಮತ್ತಷ್ಟು ಬಲಿಷ್ಠವಾಗುತ್ತದೆ. ತರಗತಿಯಲ್ಲಿನ ನೂರಾರು ವಿದ್ಯಾರ್ಥಿಗಳೂ ಕೂಡ ನನ್ನ ಮಕ್ಕಳೇ ಎಂದು ತಿಳಿದಾಗ ಒಬ್ಬ ಶ್ರೇಷ್ಠ ಅಧ್ಯಾಪಕನಾಗಲು ಸಾಧ್ಯ ಎಂದು ಬಂಟ್ಸ್ ಸಂಘ ಮುಂಬಯಿ ಪ್ರಾಯೋಜಿತ ಎಸ್.ಎಂ.ಶೆಟ್ಟಿ ಕಾಲೇಜು ಪೊವಾಯಿ ಇದರ ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜ್‌ನ ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ ನುಡಿದರು.
ಸಾಂತಾಕ್ರೂಜ್ ಪೂರ್ವದ ಕಲೀನಾ ವಿದ್ಯಾನಗರಿಯ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಮುಂಬಯಿ ವಿವಿಯ ಕನ್ನಡ ವಿಭಾಗ ಶನಿವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ, ಸಾಧಕರಿಗೆ ಗೌರವಾರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೇಗೆ ಒಂದು ನದಿ ಸಾಗರಕ್ಕೆ ಪ್ರಭಾವ ಬಿರುತ್ತದೆಯೋ ಹಾಗೇನೆ ಉಪಾಧ್ಯ ಅವರು ಅಖಂಡ ಸಮಾಜಕ್ಕೆ ಪ್ರಭಾವಶಾಲಿ ಶಕ್ತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಉಪಾಧ್ಯ ಅವರ ಬರವಣಿಗೆಯಿಂದ ಇನ್ನೂ ನೂರಾರು ಕೃತಿಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ ಎಂದರು.
ಈ ಸಂದರ್ಭ ಡಾ| ಶ್ರೀಧರ ಶೆಟ್ಟಿ ಅವರು ಮುಂಬಯಿ ವಿವಿಯಿಂದ ಕನ್ನಡದಲ್ಲಿ ಡಾಕ್ಟರೇಟ್ ಪದವೀಧರ ಡಾ| ವೈ ಮಧುಸೂದನ ರಾವ್ ಅವರಿಗೆ ಡಾಕ್ಟರೇಟ್ ಪದವಿ ಪ್ರಮಾಣಪತ್ರವನ್ನಿತ್ತು ಅಭಿವಂದಿಸಿದರು. ಈ ಸಂದರ್ಭ ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ, ಕ್ಯಾಂಟರಿಂಗ್ ಕೆ.ಎಂ ಸುವರ್ಣ, ಹಿರಿಯ ಸಾಹಿತಿ ಡಾ|ಜೀವಿ ಕುಲಕರ್ಣಿ ವೇದಿಕೆಯಲ್ಲಿದ್ದರು.
ಈ ವೇಳೆ ಮುಂಬಯಿಯಲ್ಲಿ ನೆಲೆಸಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಂಘಟಕರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಯಕ್ಷಗಾನ ಕ್ಷೇತ್ರದ ಮುಂಬಯಿ ಹಿರಿಯ ಯಕ್ಷಗಾನ ಕಲಾವಿದ ಎಂ.ಟಿ.ಪೂಜಾರಿ, ಸಮಾಜ ಸೇವೆ ಕ್ಷೇತ್ರದ ಕಡಂದಲೆ ಸುರೇಶ್ ಭಂಡಾರಿ, ಶಿಕ್ಷಣ ಕ್ಷೇತ್ರದ ಡಾ| ಶ್ರೀಧರ ಶೆಟ್ಟಿ ಮತ್ತು ಸಾಂಘಿಕ ಚುಟುವಟಿಕೆ ನವೋದಯ ಕನ್ನಡ ಸೇವಾ ಸಂಘ ಥಾಣೆ ಸಂಸ್ಥೆಯ ಅಧ್ಯಕ್ಷ ದಯಾನಂದ ಶೆಟ್ಟಿ ಇವರನ್ನು ವಿವಿ ಪರವಾಗಿ ಗೌರವಿಸಲಾಯಿತು. ಸಾಧಕ ಪುರಸ್ಕೃತರು ತಮ್ಮ ತಮ್ಮ ಅನುಭಗಳನ್ನು ಹಂಚಿಕೊಂಡರು.
ಶುಭಕೃತ್ ಸಂವತ್ಸರದಲ್ಲಿ ನಾವಿದ್ದೇವೆ.ಆದ್ದರಿಂದ ಏನು ಸಾಧನೆ ಮಾಡಿದರೂ ಶುಭವಾಗುತ್ತದೆ. ಕನ್ನಡ ವಿಭಾಗವು ಕಳೆದ 4 ದಶಕಗಳಿಂದ ಕನ್ನಡದ ಪ್ರಸಾರ ಪ್ರಚಾರದಲ್ಲಿ ತನ್ನನ್ನು ನಿರತವಾಗಿ ತೊಡಗಿಸಿಕೊಂಡು ಕನ್ನಡವೂ ಕನ್ನಡದ ಕನ್ನಡಿವತ್ತಿಸುತ್ತಿರಬೇಕು ಎಂದು ಶ್ರಮಿ ಸುತ್ತಿದೆ. ಸತತವಾಗಿ ಈ ಕನ್ನಡದ ವಿಭಾಗದ ಸಾಧನೆಯನ್ನು ಗಮನಿಸಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧೀಕಾರರ ಸಾಧನೆ ಗೌರವಿಸಿದೆ. ಮುಂಬಯಿಗೆ ವಲಸೆ ಬಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗೌರವಿಸಿದೆ ಮತ್ತು ಇಂದೂ ಗೌರವಿಸುತ್ತಿದೆ ಎಂದು ಜಿ.ಎನ್ ಉಪಾಧ್ಯ ತಿಳಿಸಿದರು. ಇದೇ ಸಂದರ್ಭದಲ್ಲಿ ಕಾಂತಾವರ ಕನ್ನಡ ಸಂಘ ಕೊಡಮಾಡಿರುವ ಡಾ| ಜಿ.ಎಂ.ಹೆಗಡೆ ಪ್ರಾಯೋ ಜಿತ ಚೊಚ್ಚಲ ಸಂಶೋಧಕ, ಪ್ರಾಧ್ಯಾಪಕ ಪ್ರಶಸ್ತಿಯನ್ನು ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರಿಗೆ ಪ್ರದಾನಿಸಿ ಅಭಿನಂದಿಸಿದರು. ಡಾ| ಉಪಾಧ್ಯ ಕೃತಿಕರ್ತರಿಗೆ ಗ್ರಂಥ ಗೌರವವನ್ನಿತ್ತು ಅಭಿವಂದಿಸಿದರು. ಕನ್ನಡ ವಿಭಾಗದ ಹಿರಿ-ಕಿರಿಯ ವಿದ್ಯಾರ್ಥಿಗಳು ಡಾ| ಉಪಾಧ್ಯರಿಗೆ ಗೌರವಿಸಿ ಗುರುವಂದನೆಗೈದರು.
ಡಾ| ಜೀವಿ ಕುಲಕರ್ಣಿ ಅಭಿನಂದನಾ ಭಾಷಣ ಗೈದು, ಉಪಾಧ್ಯ ಅವರು ಮುಂಬಯಿಯ ಅಸಂಖ್ಯಾ ವಿದ್ಯಾರ್ಥಿಗಳಿಗೆ ನೆರಳನ್ನು ಒದಗಿಸುತ್ತಿ ದ್ದಾರೆ. ಇಂತಹ ಪ್ರತಿಭಾವಂತರು ಸ್ನಾತಕೋತ್ತರ ವರ್ಗದಲ್ಲಿರುವುದೇ ಪ್ರಶಂಸನೀಯ ಎಂದರು. ಕನ್ನಡ ವಿಭಾಗದ ವಿದ್ಯಾರ್ಥಿಗಳು ವಿವಿಯ ಗೀತೆ ಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಅತಿಥಿಗಳು, ಪುರಸ್ಕೃತರನ್ನು ಪರಿಚಯಿಸಿ, ಕಾರ್ಯಕ್ರಮದ ಸಂಯೋಜಿಸಿದರು. ನಳಿನಾ ಪ್ರಸಾದ್ ವಂದಿಸಿದರು.
-ಚಿತ್ರ ವರದಿ : ರೋನ್ಸ್ ಬಂಟ್ವಾಳ್