Advertisement
ಅ.27 ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಮುಂಬಯಿ ವಿಶ್ವವಿದ್ಯಾಮಯ ಕಲೀನ ಕ್ಯಾಂಪಸ್ ಜೆ.ಪಿ ನಾಯಕ್ ಭವನದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗವು ನಾಡೋಜ ಪ್ರೊ| ಬರಗೂ ರು ರಾಮಚಂದ್ರಪ್ಪ ಪ್ರತಿಷ್ಠಾನ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಿದ್ದ ಅಭಿಜಿತ್ ಪ್ರಕಾಶನ ಪ್ರಕಾಶಿತ, ಬರೋಡಾದ ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಅವರ “ಓ ಮನಸೇ ತಲ್ಲಣಿಸದಿರು’ ಕೃತಿ ಬಿಡುಗಡೆಗೊಳಿಸಿ ಮಾತ ನಾಡಿದ ಶುಭಹಾರೈಸಿದರು.ಪ್ರಸಿದ್ಧ ಸಿನಿಮಾ ನಿರ್ದೇಶಕ, ಸಾಹಿತಿ ನಾಡೋಜ ಪ್ರೊ| ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕಕ್ಕೆ ಎಂದಿಗೂ ಸಾವು ಎನ್ನುವುದೇ ಇಲ್ಲ. ಡಿಜಿಟಲ್ ಯುಗದಲ್ಲಿ ಎಷ್ಟೋ ಆಧುನಿಕತೆಯುಳ್ಳ ಮಾಧ್ಯಮಗಳು ರಾರಾಜಿಸಿದರೂ ಅವು ಬರೇ ಆರಂಭಿಕ ಮುನ್ನಡೆಯಷ್ಟೇ. ಇಂತಹ ತಂತ್ರಜ್ಞಾನಗಳು ಬರೇ ಬಳಕೆಗಷ್ಟೇ ಮೀಸಲು. ಆದರೇ ಕೃತಿ, ಪುಸ್ತಕಗಳು ಮೂಲಧಾರಿತ ಶಕ್ತಿಯುಳ್ಳವು. ಅದರಲ್ಲೂ ಕನ್ನಡದ ಒಟ್ಟು ಸಂಸ್ಕೃತಿಗೆ ದೀರ್ಘಕಾಲದ ಇತಿಹಾಸವಿದೆ. ಆದರೆ ತಂತ್ರಜ್ಞಾನ ಮಾಧ್ಯಮಗಳ ಬಳಕೆಯ ವಿವೇಕಯುಕ್ತವಾಗಿದೆ. ಕನ್ನಡ ಎನ್ನುವುದು ಭಾಷೆ ಯೂ ಹೌದು ಬಹುಭಾಷಿಕವೂ ಮತ್ತು ಜೀವನವೂ ಹೌದು. ನಮ್ಮ ರಾಷ್ಟ್ರದಲ್ಲಿ ಸಾವಿರಾರು ಭಾಷೆಗಳಿದ್ದು ಅನೇಕವು ನಾಶವಾಗಿವೆ. ಆದರೆ ಕನ್ನಡ ಭಾಷೆಗೆ ಅಪಾಯವಿಲ್ಲ ಎಂದರು.
Related Articles
Advertisement
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವನೆಗೈದು, ಇದೊಂದು ಬಣ್ಣಬಣ್ಣದ ವರ್ಣಮಯ ಕಾರ್ಯಕ್ರಮ. ಇದು ಹಚ್ಚಿಕೊಂಡ ಬಣ್ಣವಲ್ಲ ಹಾಕಿಕೊಂಡ ಬಣ್ಣವಾಗಿದೆ ಎಂದರು. ಪ್ರೊ| ರಾಮಚಂದ್ರಪ್ಪ ಅವರು ದಯಾನಂದ ಬೋಂಟ್ರಾ ಮತ್ತು ಎಸ್ಕೆ ಹಳೆಯಂಗಡಿ ಅವರನ್ನು ಶಾಲು ಹೊದೆಸಿ, ಗ್ರಂಥಗೌರವ ನೀಡಿ ಅಭಿನಂದಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ದಿನಕರ್ ಚಂದನ್ ವಂದಿಸಿದರು.
ತಾಯ್ನಾಡಿನಿಂದ ಬಹಳ ದೂರದ ಗುಜರಾತ್‌ನಲ್ಲಿದ್ದರೂ ಮಾತೃಭಾಷೆ, ಸಾಹಿತ್ಯವನ್ನು ಒಪ್ಪಿ ಅಪ್ಪಿಕೊಂಡು ಮುನ್ನಡೆದಿದ್ದೇವೆ. ನಾವು ಗುಜರಾತ್‌ನಲ್ಲಿದ್ದರೂ ಮುಂಬಯಿ ಕನ್ನಡಿಗರೇ ನಮ್ಮ ಬಂಧುಗಳು ಮತ್ತು ಪ್ರೋತ್ಸಾಹಕರು. ಇವರನ್ನೇ ನಾವು ಹೊಂದಿದ್ದೇವೆ. ಡಾ| ಜಿ. ಎನ್. ಉಪಾಧ್ಯ ಅವರ ಪ್ರೇರಣೆ ಮತ್ತು ಡಾ| ಅಲೆವೂರು ಅವರ ಸಹಯೋಗದಿಂದ ನನ್ನ ಕೃತಿಗಳು ಪ್ರಕಟಗೊಳ್ಳಲು ಸಾಧ್ಯವಾಯಿತು.– ಎಸ್. ಕೆ. ಹಳೆಯಂಗಡಿ, ಕೃತಿಕಾರರು ಚಿತ್ರ-ವರದಿ : ರೋನ್ಸ್ ಬಂಟ್ವಾಳ್