Advertisement
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಮಾತನಾಡಿ, ಐದು ಸಾವಿರ ವರ್ಷಗಳಿಂದ ನಮ್ಮ ಭಾರತದಲ್ಲಿ ಯೋಗವು ಋಷಿ ಮುನಿಗಳಿಂದಾಗಿ ಭಾರತೀಯ ಪರಂಪರೆಯಲ್ಲಿ ಹೊಂದಿಕೊಂಡು ಬಂದಿದೆ.
ಸಕ್ರಿಯವಾಗಿದ್ದು, ತುಳು-ಕನ್ನಡಿ ಗರು ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭ 2023ರ ದತ್ತಿ ನಿಧಿ ಪ್ರಶಸ್ತಿಯನ್ನು ಯೋಗ ತಜ್ಞೆ ಕಮಲಾಕ್ಷಿ ಕೋಟ್ಯಾನ್ ಅವರಿಗೆ ಪ್ರದಾನ ಮಾಡಲಾಯಿತು. ಕಾರ್ಯ ಕ್ರಮವು ಸೀಮಾ ಕುಲಕರ್ಣಿ ಹಾಗೂ ವಸಂತಿ ಕೋಟೆಕಾರ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾ ಯಿತು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ವಾಣಿ ಶೆಟ್ಟಿ ಅವರು ಸಂಘದ ಬಗ್ಗೆ ಮಾತನಾಡಿದರು.
Related Articles
ಸ್ಮರಣಾರ್ಥ ದತ್ತಿನಿಧಿ ಸ್ಥಾಪಿಸಿದ ಯು.ಎಸ್. ಕಾರಂತ ಅವರನ್ನು ಲಕ್ಷ್ಮೀ ವಿ. ಶೆಟ್ಟಿ ಹಾಗೂ ಯೋಗ ತಜ್ಞೆ ಚಂದ್ರಾವತಿ ಎಸ್. ಕಾರಂತರನ್ನು ಮೇರಿ ಲಿಲ್ಲಿ ಡಿ’ಸೋಜಾ ಪರಿಚಯಿಸಿದರು. ಸಂಘದ ಎಲ್ಲ ಪದಾಧಿಕಾರಿಗಳು ಚಂದ್ರಾವತಿ ಕಾರಂತರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
Advertisement
ಯೋಗ ತಜ್ಞೆ ಕಮಲಾಕ್ಷಿ ಕೋಟ್ಯಾನ್ ಅವರನ್ನು ಸವಿತಾ ಭಟ್ ಪರಿಚಯಿಸಿದರು. ಸಮ್ಮಾನಪತ್ರ ವನ್ನು ಉಷಾ ಪಿ. ಸುವರ್ಣ ವಾಚಿಸಿದರು. ಪಾರುಪತ್ಯಗಾರರಾದ ಜಿ. ಟಿ. ಆಚಾರ್ಯ, ಸಂಘದ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಉಪಾಧ್ಯಕ್ಷ ವಿಶ್ವನಾಥ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಾಣಿ ಶೆಟ್ಟಿ, ಕೋಶಾಧಿಕಾರಿ ಆನಂದ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಮೊಲಿ ಅವರು ಪ್ರಶಸ್ತಿಪುರಸ್ಕೃತರನ್ನು ಅಭಿನಂದಿಸಿ ಶುಭ ಹಾರೈಸಿದರು. ಯೋಗ ತಜ್ಞೆ ಕಮಲಾಕ್ಷಿಕೋಟ್ಯಾನ್ ಅವರು ಪ್ರಶಸ್ತಿ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಕಮಲಾಕ್ಷಿ ಕೋಟ್ಯಾನ್ ಅವರು ಸರ್ಪಾಸನ, ಊರ್ದ್ವ ಹಸ್ತ, ಕಟಿ ವಕ್ರಾಸನ, ಸಮಾನ ಹಸ್ತ ಕಟಿ ಚಕ್ರಾಸನ, ಕಾಗಾಸನ, ಶಂಖ ಪ್ರಕ್ಷಾಲನ ಕ್ರಿಯಾ ಮೊದಲಾದ ಕೆಲವು ಯೋಗಗಳನ್ನು ಕಲಿಸಿ ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರು. ತುಳು-ಕನ್ನಡಿಗರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ದತ್ತಿಯನ್ನು ಸ್ಥಾಪಿಸಿರುವುದೆಂದು ಯು. ಎಸ್. ಕಾರಂತರು ಅಭಿಪ್ರಾಯ
ವ್ಯಕ್ತಪಡಿಸಿದರು. ಮಹಿಳಾ ವಿಭಾಗದ ಸಂಚಾಲಕಿ ಸಾವಿತ್ರಿ ಎಂ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಸದಸ್ಯೆ ವಸಂತಿ ಶೆಟ್ಟಿ ವಂದಿಸಿದರು.