ಮುಂಬಯಿ : ಈಚಿನ ಭರ್ಜರಿ ಏರಿಕೆಯ ಲಾಭವನ್ನು ನಗದೀಕರಿಸಲು ಹೂಡಿಕೆದಾರರು ಹಾಗೂ ವಹಿವಾಟುದಾರರು ಮುಂದಾದ ಕಾರಣ ಮುಂಬಯಿ ಶೇರು ಪೇಟೆ ಇಂದು ಬುಧವಾರದ ವಹಿವಾಟನ್ನು 44.52 ಅಂಕಗಳ ನಷ್ಟದೊಂದಿಗೆ 29,398.11 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 2.20 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 9,084.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರ ಏರಿಕೆಯನ್ನು ಕೈಗೊಳ್ಳುವುದೆಂಬ ನಿರೀಕ್ಷೆಯಲ್ಲಿ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರು ಪೇಟೆಯಲ್ಲಿ ಇಂದು ಬಹುವಾಗಿ ಸಕ್ರಿಯವಾಗಿದ್ದ ಶೇರುಗಳೆಂದರೆ ರಿಲಯನ್ಸ್, ಐಡಿಯಾ ಸೆಲ್ಯುಲರ್, ಎಸ್‌ಬಿಐ, ಟಿಸಿಎಸ್ ಮತ್ತು ಐಟಿಸಿ.
ಇಂದಿನ ಟಾಪ್ ಗೇನರ್‌ಗಳು : ಐಡಿಯಾ ಸೆಲ್ಯುಲರ್, ಬಿಎಚ್‌ಇಎಲ್, ಬ್ಯಾಂಕ್ ಆಫ್ ಬರೋಡ, ಅರಬಿಂದೋ ಫಾರ್ಮಾ ಮತ್ತು ಟಾಟಾಪವರ್.
ಟಾಪ್ ಲೂಸರ್‌ಗಳು : ಟಿಸಿಎಸ್, ಇನ್‌ಫೋಸಿಸ್, ಎಚ್‌ಯುಎಲ್, ವಿಪ್ರೋ, ಎಚ್‌ಸಿಎಲ್ ಟೆಕ್.
ಇಂದಿನ ವಹಿವಾಟಿನಲ್ಲಿ 1,408 ಶೇರುಗಳು ಮುನ್ನಡೆ ಸಾಧಿಸಿದರೆ, 1.409 ಶೇರುಗಳು ಹಿನ್ನಡೆಗೆ ಗುರಿಯಾದವು.