ಮುಂಬಯಿ, ಡಿ. 29: ಕಳೆದ ವರ್ಷಕ್ಕೆ ಹೋಲಿ ಸಿದರೆ ಕಳೆದ ಒಂಬತ್ತು ತಿಂಗಳಲ್ಲಿ ಮುಂಬಯಿಯಲ್ಲಿ ಚರ್ಮ ದಾನವು ಶೇ. 90ರಷ್ಟು ಕಡಿಮೆಯಾಗಿದೆ. ಕೋವಿಡ್ ಸೋಂಕು ಜತೆಗೆ ಚರ್ಮ ದಾನದ ಬಗ್ಗೆ ಅರಿವಿನ ಕೊರತೆ ಈ ಕುಸಿತಕ್ಕೆ ಕಾರಣವಾಗಿದೆ. ಇದರಿಂದಾಗಿ ತೀವ್ರ ವಾದ ಸುಟ್ಟಗಾಯಗಳಿಂದ ಬಳಲುತ್ತಿರುವ ರೋಗಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಸೋಂಕು ಪ್ರಾರಂಭವಾಗುವ ಮೊದಲು ತಿಂಗಳಿಗೆ ಸುಮಾರು 20 ಚರ್ಮ ದಾನಗಳನ್ನು ಪಡೆಯುತ್ತಿದ್ದೆವು, ಆದರೆ ಈಗ ಅದು 4ಕ್ಕೆ ಇಳಿದಿದೆ ಎಂದು ನ್ಯಾಶನಲ್ ಬರ್ನ್ಸ್ ಸೆಂಟರ್‌ನ ವೈದ್ಯಕೀಯ ನಿರ್ದೇಶಕ ಡಾ| ಸುನೀಲ್ ಕೆಸ್ವಾನಿ ಹೇಳಿದ್ದಾರೆ.
ನಗರವು ಮೊದಲ ಕೋವಿಡ್ ಪ್ರಕರಣವನ್ನು ವರದಿ ಮಾಡಿದಾಗ ಕೇಂದ್ರವು ಒಂಬತ್ತು ಚರ್ಮ ದಾನಗಳನ್ನು ಪಡೆದಿತ್ತು. ಎಪ್ರಿಲ್ ಮತ್ತು ಆಗಸ್ಟ್ ನಡುವೆ ಚರ್ಮ ಬ್ಯಾಂಕ್‌ನಲ್ಲಿ ಒಂದೇ ಒಂದು ದಾನವನ್ನು ದಾಖಲಿಸಲಾಗಿಲ್ಲ. ಸೆಪ್ಟಂಬರ್‌ನಲ್ಲಿ ಐದು ದಾನಗಳನ್ನು ಮಾತ್ರ ದಾಖಲಿಸಲಾಗಿದ್ದು, ಅಕ್ಟೋಬರ್‌ನಲ್ಲಿ ಮೂರು ಮತ್ತು ನವೆಂಬರ್‌ನಲ್ಲಿ ಐದು ಚರ್ಮ ದಾನಗಳನ್ನು ಪಡೆಯಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಜನರಲ್ಲಿ ತಪ್ಪು ಕಲ್ಪನೆ ಮತ್ತು ಚರ್ಮ ದಾನದ ಅಗತ್ಯತೆ ಬಗ್ಗೆ ಅರಿವಿನ ಕೊರತೆ ಸಹಿತ ಹಲವಾರು ಅಂಶಗಳಿಂದಾಗಿ ಮುಂಬಯಿಯಾದ್ಯಂತ ಚರ್ಮದ ದಾನ ಕಡಿಮೆಯಾಗಿದೆ. ನಾಗರಿಕರು ತಾವು ಸೋಂಕಿಗೆ ಒಳಗಾಗಬಹುದೆಂಬ ಭಯ ದಿಂದ ತಮ್ಮ ಪ್ರೀತಿಪಾತ್ರರ ಸಾವಿನ ಬಳಿಕ ಚರ್ಮ ವನ್ನು ದಾನ ಮಾಡಲು ಹಿಂಜರಿಯುತ್ತಿ ದ್ದಾರೆ ಎಂದು ಡಾ| ಕೇಸ್ವಾನಿ ಹೇಳಿದ್ದಾರೆ.
ಚರ್ಮ ದಾನವು ತೀವ್ರವಾಗಿ ಸುಟ್ಟ ರೋಗಿ ಗಳ ಚಿಕಿತ್ಸೆ ಯಲ್ಲಿ ಸಹಾಯ ಮಾಡುತ್ತದೆ. ತೀವ್ರ ವಾದ ಸುಟ್ಟ ಗಾಯಗಳ ರೋಗಿಗಳಿಗೆ ಅಲೋ ಗ್ರಾಫ್ಟ್ ಚಿಕಿತ್ಸೆ ಯೊಂದಿಗೆ ಗಾಯವನ್ನು ಮುಚ್ಚಲು ಅಂಗ ದಾನಿಗಳಿಂದ ಪಡೆದ ಚರ್ಮವು ಅಗತ್ಯವಾಗಿರುತ್ತದೆ.
ಚರ್ಮವು ಸೋಂಕನ್ನು ತಡೆಗಟ್ಟಲು, ನೋವು ಕಡಿಮೆ ಮಾಡಲು ಮತ್ತು ರಕ್ಷಣೆ ಯನ್ನು ಒದಗಿಸಲು ಮತ್ತು ವೇಗವಾಗಿ ಚೇತ ರಿಕೆ ಹೊಂದಲು ಸಹಾಯ ಮಾಡುತ್ತದೆ. ಸುಟ್ಟ ಜಾಗ ವನ್ನು ತತ್‌ಕ್ಷಣ ದಾನ ಮಾಡಿದ ಚರ್ಮದಿಂದ ಮುಚ್ಚದಿದ್ದರೆ, ರೋಗಿಗಳು ಸೋಂಕಿಗೆ ಗುರಿಯಾಗಬಹುದು. ಇದು ಅವರ ಸಾವಿಗೆ ಕಾರಣವಾಗಬಹುದು.
ಭಾರತದಲ್ಲಿ 13 ಚರ್ಮ ಬ್ಯಾಂಕ್‌ಗಳಿದ್ದು, ಅವುಗಳಲ್ಲಿ ಮೂರು ಮುಂಬಯಿ ಮಹಾನಗರ ಪ್ರದೇಶದ ಎನ್‌ಬಿಸಿ ಐರೋಲಿ, ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆ, ಸಯಾನ್ ಮತ್ತು ಮಸಿನಾ ಆಸ್ಪತ್ರೆಯಲ್ಲಿವೆ.