ಮುಂಬಯಿ : ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಯೋಜನೆಗಳ ವಿವರಗಳನ್ನು ಎದುರುನೋಡುತ್ತಾ ಎಚ್ಚರಿಕೆಯ ನಡೆ ಇರಿಸಿರುವ ಮುಂಬಯಿ ಶೇರು ಪೇಟೆ ಇಂದು ಆರಂಭಿಕ ವಹಿವಾಟಿನಲ್ಲಿ 71 ಅಂಕಗಳ ನಷ್ಟಕ್ಕೆ ಗುರಿಯಾದರೂ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಚೇತರಿಕೆಯನ್ನು ಕಂಡು 71.47 ಅಂಕಗಳ ಮುನ್ನಡೆ ಸಾಧಿಸಿ 27,105.97 ಅಂಕಗಳ ಮಟ್ಟವನ್ನು ತಲುಪಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 33.80 ಅಂಕಗಳ ಮುನ್ನಡೆ ಸಾಧಿಸಿ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ 8,383.15 ಅಂಕಗಳ ಮಟ್ಟವನ್ನು ತಲುಪಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಎಸ್‌ಬಿಐ ಮತ್ತು ಟಾಟಾ ಸ್ಟೀಲ್ ಶೇರುಗಳು ಉತ್ತಮ ಖರೀದಿಯ ಬೆಂಬಲ ಪಡೆದು ಮುನ್ನಡೆ ಸಾಧಿಸಿದವು.
ಗೇಲ್, ಓಎನ್‌ಜಿಸಿ, ಟಾಟಾ ಸ್ಟೀಲ್, ಎಸ್‌ಬಿಐ ಮತ್ತು ಟಾಟಾ ಮೋಟರ್ ಶೇರುಗಳು ಆರಂಭಿಕ ವಹಿವಾಟಿನಲ್ಲಿ ಟಾಪ್ ಗೇನರ್ ಎನಿಸಿಕೊಂಡವು. ಆದರೆ ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಎಚ್‌ಯುಎಲ್ ಮತ್ತು ಲಾರ್ಸನ್ ಶೇರುಗಳು ಟಾಪ್ ಲೂಸರ್ ಪಟ್ಟಿಗೆ ಸೇರಿಕೊಂಡವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಶುದ್ಧ ಚಿನ್ನ 207 ರೂ.ಗಳ ಏರಿಕೆಯನ್ನು ಕಂಡು 28,825 ರೂ.ಗೆ ತಲುಪಿತು. ಡಾಲರ್ ಎದುರು ರೂಪಾಯಿ ವಿನಿಮಯ ದರ 17 ಪೈಸೆಗಳಷ್ಟು ಸುಧಾರಿಸಿ 68.01 ರೂ. ಮಟ್ಟಕ್ಕೆ ತಲುಪಿತು.
ಟ್ರಂಪ್ ಆರ್ಥಿಕ ನೀತಿ ಭಾರತದಂತಹ ಉದಯೋನ್ಮುಖ ಆರ್ಥಿಕ ರಾಷ್ಟ್ರಗಳಿಗೆ ಮಾರಕವಾಗಬಹುದೆಂಬ ಭಯ ಎಲ್ಲೆಡೆ ವ್ಯಾಪಿಸಿಕೊಂಡಿರುವಂತೆಯೇ ಮುಂಬಯಿ ಶೇರು ಪೇಟೆಯ ಎಚ್ಚರಿಕೆಯ ನಡೆ ಸಾಗಿದೆ.