Advertisement

ಮುಂಬಯಿ ಶೇರು 113 ಅಂಕ ಏರಿಕೆ; ಬ್ಯಾಂಕಿಂಗ್‌, ಎಫ್ಎಂಸಿಜಿ ಖರೀದಿ

11:20 AM Mar 24, 2017 | udayavani editorial |

ಮುಂಬಯಿ : ಹೂಡಿಕೆದಾರರು ಬ್ಯಾಂಕಿಂಗ್‌ ಮತ್ತು ಎಫ್ಎಂಸಿಜಿ ಶೇರುಗಳ ಖರೀದಿಯನ್ನು ಮುಂದುವರಿಸಿರುವಂತೆಯೇ ಮುಂಬಯಿ ಶೇರು ಪೇಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 113 ಅಂಕಗಳ ಉತ್ತಮ ಏರಿಕೆಯನ್ನು ಕಂಡಿದೆ.

Advertisement

ಬೆಳಗ್ಗೆ 11.15ರ ಹೊತ್ತಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 129.66 ಅಂಕಗಳ ಏರಿಕೆಯೊಂದಿಗೆ 2,461.82 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದ್ದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 33.80 ಅಂಕಗಳ ಏರಿಕೆಯೊಂದಿಗೆ 9,120.00 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

ಇಂದಿನ ವಹಿವಾಟಿನಲ್ಲಿ ನಿಫ್ಟಿ 9,100 ಅಂಕಗಳ ಮಟ್ಟವನ್ನು ಪುನರ್‌ ಸಂಪಾದಿಸಿರುವುದು ಹಾಗೂ ಭಾರ್ತಿ, ಎಸ್‌ ಬ್ಯಾಂಕ್‌ ಶೇರುಗಳು ಗಮನಾರ್ಹ ಮುನ್ನಡೆ ಸಾಧಿಸಿರುವುದು ಮುಖ್ಯವಾಗಿದೆ.

ಇಂದಿನ ಆರಂಭಿಕ ವಹಿವಾಟಿನಲ್ಲಿ ಬ್ಯಾಂಕ್‌ ಆಫ್ ಬರೋಡ, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಐಟಿಸಿ, ಗೇಲ್‌ ಟಾಪ್‌ ಗೇನರ್‌ ಎನಿಸಿಕೊಂಡರೆ, ಬಿಪಿಸಿಎಲ್‌, ಟೆಕ್‌ ಮಹೀಂದ್ರ, ಓಎನ್‌ಜಿಸಿ, ಗ್ರಾಸಿಂ ಮತ್ತು ಝೀ ಎಂಟರ್‌ಟೇನ್‌ಮೆಂಟ್‌ ಟಾಪ್‌ ಲೂಸರ್‌ ಎನಿಸಿಕೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next