Advertisement

ದಿನಪೂರ್ತಿ ಎದ್ದು ಬಿದ್ದ ಮುಂಬಯಿ ಶೇರು 26.92 ಅಂಕ ಕುಸಿತ

04:42 PM Mar 31, 2017 | udayavani editorial |

ಮುಂಬಯಿ : ಜಾಗತಿಕ ಮಾರುಕಟ್ಟೆಗಳಲ್ಲಿ  ಕಂಡು ಬಂದ ನಿರುತ್ಸಾಹದ ಪ್ರವೃತ್ತಿ ಮತ್ತು ದಿನದ ಉದ್ದಕ್ಕೂ ಏಳುಬೀಳುಗಳ ಓಲಾಟವನ್ನು ಕಂಡ ಮುಂಬಯಿ ಶೇರು ಪೇಟೆ ಸೆನ್ಸೆಕ್ಸ್‌ ಇಂದು ಶುಕ್ರವಾರದ ವಹಿವಾಟನ್ನು  26.92 ಅಂಕಗಳ ನಷ್ಟದೊಂದಿಗೆ 29,620.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಯಾವುದೇ ಬದಲಾವಣೆಯನ್ನು ಕಾಣದೆ ದಿನದ ವಹಿವಾಟನ್ನು 9,173.75 ಅಂಕಗಳ ಮಟ್ಟದಲ್ಲೇ ಕೊನೆಗೊಳಿಸಿತು.

ಎಸ್‌ಸಿಐ, ಐಸಿಐಸಿಐ ಪ್ರುಡೆನ್‌ಶಿಯಲ್‌ ಮತ್ತು ಕೇರ್ನ್ ಶೇರುಗಳು ಇಂದಿನ ವಹಿವಾಟಿನಲ್ಲಿ ಶೇ.2ಕ್ಕೂ ಹೆಚ್ಚು ಏರಿಕೆಯನ್ನು ಕಂಡು ಗಮನ ಸೆಳೆದವು. 

ಇಂದಿನ ವಹಿವಾಟಿನಲ್ಲಿ ರಿಲಯನ್ಸ್‌, ಹಿಂಡಾಲ್ಕೋ, ಎಸಿಸಿ, ಎನ್‌ಪಿಸಿ, ಬಿಪಿಸಿಎಲ್‌ ಶೇರುಗಳು ಟಾಪ್‌ ಗೇನರ್‌ ಎನಿಸಿದವು. ಇದೇ ವೇಳೆ ಭಾರ್ತಿ  ಇನ್‌ಫ್ರಾಟೆಲ್‌, ಗ್ರಾಸಿಂ, ಎಕ್ಸಿಸ್‌ ಬ್ಯಾಂಕ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಟಾಪ್‌ ಲೂಸರ್‌ ಎನಿಸಿದವು. 

Advertisement

Udayavani is now on Telegram. Click here to join our channel and stay updated with the latest news.

Next