ಮುಂಬಯಿ : ಪಂಚ ರಾಜ್ಯ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಯ ಮೇಲೆ ಕಣ್ಣಿಟ್ಟಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 87 ಅಂಕಗಳ ನಷ್ಟಕ್ಕೆ ಗುರಿಯಾದರೂ 10.30ರ ಹೊತ್ತಿಗೆ ನಷ್ಟವನ್ನು ಕೊಡವಿಕೊಂಡ ಲಾಭದ ಮಾರ್ಗಕ್ಕೆ ತಿರುಗಿ 16 ಅಂಕಗಳ ಏರಿಕೆಯನ್ನು ದಾಖಲಿಸಿ 28,917.92 ಅಂಕಗಳ ಮಟ್ಟಕ್ಕೆ ಏರಿತು.
ಆದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 4.30 ಅಂಕಗಳ ನಷ್ಟಕ್ಕೆ ಗುರಿಯಾಗಿ 8,920.00 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಸೆನ್ಸೆಕ್ಸ್ ಕಳೆದೆರಡು ದಿನಗಳ ವಹಿವಾಟಿನಲ್ಲಿ 146.25 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಗೇಲ್, ಡಾ. ರೆಡ್ಡಿ, ಪವರ್ ಗ್ರಿಡ್, ಒಎನ್‌ಜಿಸಿ, ಅದಾನಿ ಪೋರ್ಟ್, ವಿಪ್ರೋ, ಹಿಂದುಸ್ಥಾನ್ ಯುನಿಲಿವರ್, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಸಿಪ್ಲಾ, ಇನ್‌ಫೋಸಿಸ್, ಐಟಿಸಿ ಶೇರುಗಳು ಶೇ.4.25ರಷ್ಟು ಕಸಿದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಹಾಂಕಾಂಗ್ ನ ಹ್ಯಾಂಗ್‌ಸೆಂಗ್ ಶೇ.1.01ರಷ್ಟು ಕುಸಿಯಿತಾದರೆ ಜಪಾನಿನ ನಿಕ್ಕಿ ವೇ.0.15ರಷ್ಟು ಏರಿತು. ಶಾಂಘೈ ಸೂಚ್ಯಂಕ ಶೇ.0.92ರಷ್ಟು ಕುಸಿಯಿತು.