ಮುಂಬಯಿ : ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 97 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 11.45ರ ಹೊತ್ತಿಗೆ ತನ್ನ ನಷ್ಟವನ್ನು ಇನ್ನಷ್ಟು ಹೆಚ್ಚಿಸಿಕೊಂಡು 166.98 ಅಂಕಗಳ ನಷ್ಟದೊಂದಿಗೆ 29,254.42 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 55.80 ಅಂಕಗಳ ನಷ್ಟದೊಂದಿಗೆ 9,052.20 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂಡಸ್‌ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಎಚ್‌ಯುಎಲ್, ಭಾರ್ತಿ ಇನ್‌ಫ್ರಾಟೆಲ್, ಪವರ್‌ಗ್ರಿಡ್ ಕಾರ್ಪೋರೇಶನ್ ಟಾಪ್ ಗೇನರ್ ಎನಿಸಿಕೊಂಡವು.
ಐಡಿಯಾ ಸೆಲ್ಯುಲರ್, ಟಾಟಾ ಸ್ಟೀಲ್, ಹಿಂಡಾಲ್ಕೋ, ಕೋಲ್ ಇಂಡಿಯಾ, ರಿಲಯನ್ಸ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಕಳೆದ ವಾರದಲ್ಲಿ ಶೇರು ಮಾರುಕಟ್ಟೆಯು ಕಂಡಿದ್ದ ಲಾಭವನ್ನು ನಗದೀಕರಿಸಲು ಹೂಡಿಕೆದಾರರು ಹಾಗೂ ವಹಿವಾಟುದಾರರು ಮುಂದಾದದ್ದೇ ಸೆನ್ಸೆಕ್ಸ್ ಹಾಗೂ ನಿಫ್ಟಿ ಹಿನ್ನಡೆಗೆ ಕಾರಣವೆಂದು ಪರಿಣತರು ಹೇಳಿದ್ದಾರೆ.