ಮುಂಬಯಿ : ಮೂರು ದಿನಗಳಿಂದ ನಿರಂತರ ಏರು ಹಾದಿಯಲ್ಲಿ ಸಾಗುತ್ತಿದ್ದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟಿನಲ್ಲಿ ಮುಗ್ಗರಿಸಿ 103.61 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನಾಂತ್ಯಕ್ಕೆ 30,029.74 ಅಂಕಗಳ ಮಟ್ಟಕ್ಕೆ ಇಳಿಯಿತು.
ಇದೇ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.70 ಅಂಕಗಳ ನಷ್ಟಕ್ಕೆ ಗುರಿಯಾಗಿ 9,342.15 ಅಂಕಗಳ ಮಟ್ಟವನ್ನು ತಲುಪಿತು.
ಐರೋಪ್ಯ ಶೇರು ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿ ಹಾಗೂ ಭಾರತೀಯ ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದದ್ದೇ ಸೆನ್ಸೆಕ್ಸ್ ಹಾಗೂ ನಿಫ್ಟಿಯ ಇಂದಿನ ಹಿನ್ನಡೆಗೆ ಕಾರಣವಾಯಿತು ಎನ್ನಲಾಗಿದೆ.
ಬ್ಯಾಂಕಿಂಗ್, ಹಣಕಾಸು, ಎಫ್ಎಂಸಿಜಿ ಮತ್ತು ಆಯ್ದ ಫಾರ್ಮಾ ಶೇರುಗಳಲ್ಲಿ ಇಂದು ಹೂಡಿಕೆದಾರರು, ವಹಿವಾಟು ದಾರರು ಲಾಭನಗದೀಕರಣ ಮಾಡಿಕೊಂಡರು.
ಇಂದಿನ ವಹಿವಾಟಿನಲ್ಲಿ 1,559 ಶೇರುಗಳು ಹಿನ್ನಡೆಗೆ ಗುರಿಯಾದವು; 1,318 ಶೇರುಗಳು ಮುನ್ನಡೆ ಕಂಡವು.